ಅದ್ದೂರಿಯಾಗಿ ನಡೆದ ರಕುಲ್ ಪ್ರೀತ್ ಸಿಂಗ್ ಮದುವೆ, ವೈರಲ್ ಆದ ಪೊಟೋಸ್, ಹರಿದುಬಂದ ಶುಭಾಷಯಗಳು….!

Follow Us :

ಸ್ಟಾರ್‍ ನಟಿ ರಕುಲ್ ಪ್ರೀತ್ ಸಿಂಗ್ ತಮ್ಮ ಪ್ರಿಯಕರನಾದ ಜಾಕಿ ಭಗ್ನಾನಿಯನ್ನು ಮದುವೆಯಾಗಿದ್ದಾರೆ. ಈ ಜೋಡಿಯ ಮದುವೆ ಗೋವಾದಲ್ಲಿನ ದುಬಾರಿ ರೆಸಾರ್ಟ್‌ನಲ್ಲಿ ಅದ್ದೂರಿಯಾಗಿ ನೆರವೇರಿದೆ. ಸದ್ಯ ಈ ಜೋಡಿಯ ಮದುವೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ. ಅಭಿಮಾನಿಗಳು, ಸ್ನೇಹಿತರು ಸೇರಿದಂತೆ ಸಿನೆಮಾ ಸೆಲೆಬ್ರೆಟಿಗಳಿಂದ ನೂತನ ವಧು ವರರಿಗೆ ಶುಭಾಷಯಗಳು ಹರಿದುಬರುತ್ತಿವೆ.

ಸುಮಾರು ವರ್ಷಗಳ ಕಾಲ ನಿಗೂಢವಾಗಿ ಪ್ರೀತಿಸಿದ ರಕುಲ್ ಪ್ರೀತ್ ಹಾಗೂ ಜಾಕಿ ಭಗ್ನಾನಿ ಇದೀಗ ಅಧಿಕೃತವಾಗಿ ಸಪ್ತಪದಿ ತುಳಿದು ಪತಿ-ಪತ್ನಿಯಾಗಿದ್ದಾರೆ. ಗೋವಾದ ದುಬಾರಿ ರೆಸಾರ್ಟ್‌ನಲ್ಲಿ ಈ ಜೋಡಿಯ ಮದುವೆ ಅದ್ದೂರಿಯಾಗಿ ನೆರವೇರಿದೆ. ಈ ಜೋಡಿ ಸಂಪ್ರದಾಯಬದ್ದವಾದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ರಕುಲ್ ಪಿಂಕ್ ಕಲರ್‍ ಲೆಹಂಗಾದಲ್ಲಿ ತುಂಬಾನೆ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ನೂತನ ವಧು ವರರು ಇಬ್ಬರೂ ಸಂತೋಷದಿಂದ ಕಾಣಿಸಿಕೊಂಡಿದ್ದಾರೆ. ಕುಟುಂಬಸ್ಥರು, ಸ್ನೇಹಿತರ ಸಮಕ್ಷಮದಲ್ಲಿ ರಕುಲ್ ಹಾಗೂ ಜಾಕಿ ಮದುವೆ ಅದ್ದೂರಿಯಾಗಿ ನೆರವೇರಿದೆ. ಮದುವೆಯ ಬಳಿಕ ಈ ಜೋಡಿ ಮಿಡಿಯಾ ಮುಂದೆ ಬಂದಿದ್ದು, ಕೆಲವೊಂದು ಪೊಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ರೊಮ್ಯಾಂಟಿಕ್ ಆಗಿ ಸಹ ಕಾಣಿಸಿಕೊಂಡಿದ್ದಾರೆ. ಈ ಪೊಟೋಗಳು ಇದೀಗ ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಸುಮಾರು ವರ್ಷಗಳ ಕಾಲ ಬಾಲಿವುಡ್ ನಿರ್ಮಾಪಕ ಜಾಕಿ ಭಗ್ನಾನಿ ಹಾಗೂ ರಕುಲ್ ಪ್ರೀತ್ ಪ್ರೇಮ ಪಯಣ ಸಾಗಿಸಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ರಕುಲ್ ಹಾಗೂ ಜಾಕಿ ತಮ್ಮ ರಿಲೇಷನ್ ಶೀಪ್ ಬಗ್ಗೆ ಸೋಷಿಯಲ್ ಮಿಡಿಯಾ ಮೂಲಕ ಬಹಿರಂಗಗೊಳಿಸಿದ್ದರು. ಫೆ.21 ರಂದು ಈ ಜೋಡಿಯ ಮದುವೆಯ ಅದ್ದೂರಿಯಾಗಿ ನೆರವೇರಿತ್ತು. ಈ ರೆಸಾರ್ಟ್ ಒಟ್ಟು 45 ಎಕರೆಯಲ್ಲಿ ನಿರ್ಮಾಣವಾಗಿದೆ. ಒಟ್ಟು 246 ರೂಮ್ ಗಳಿದೆ ಎನ್ನಲಾಗಿದೆ. ಒಂದು ರೂಂಗೆ 19 ಸಾವಿರದಿಂದ 75 ಸಾವಿರದ ವರೆಗೂ ಇದೆ ಎನ್ನಲಾಗುತ್ತಿದೆ. ಬೀಚ್ ಪಕ್ಕದಲ್ಲೇ ಈ ರೆಸಾರ್ಟ್ ಇದ್ದು, ಇಡೀ ರೆಸಾರ್ಟ್ ಅನ್ನು ರಕುಲ್ ಹಾಗೂ ಜಾಕಿ ತಮ್ಮ ಮದುವೆಗಾಗಿ ಬುಕ್ ಮಾಡಿದ್ದಾರೆ. ಪೋರ್ಚುಗೀಸ್ ವಿಲೇಜ್ ಸ್ಟೈಲ್ ನಲ್ಲಿ ಈ ರೆಸಾರ್ಟ್ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ. ಗೋವಾದಲ್ಲಿ ರಕುಲ್ ಹಾಗೂ ಜಾಕಿ ಮದುವೆ ಅದ್ದೂರಿಯಾಗಿ ನೆರವೇರಿದೆ. ಅವರ ವೆಡ್ಡಿಂಗ್ ಗಾಗಿ ಮೂರು ಮಂದಿ ಡಿಸೈನರ್‍ ಗಳು ಕೆಲಸ ಮಾಡಿದ್ದಾರೆ.

ಇನ್ನೂ ಮದುವೆಯಾದ ಬಳಿಕ ರಕುಲ್ ಹಾಗೂ ಜಾಕಿ ಮಿಡಿಯಾ ಮುಂದೆ ಬಂದಿದ್ದು, ಮಿಡಿಯಾಗಳಿಗೆ ಪೋಸ್ ಕೊಟ್ಟಿದ್ದಾರೆ. ಈ ಪೊಟೊಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಸೇರಿದಂತೆ ಅನೇಕ ಸಿನೆಮಾ ಸೆಲೆಬ್ರೆಟಿಗಳು ಶುಭಾಷಯಗಳನ್ನು ಕೋರುತ್ತಿದ್ದಾರೆ. ಇನ್ನೂ ಮದುವೆಯಾದ ಬಳಿಕ ಈ ಜೋಡಿ ಹನಿಮೂನ್ ಗೆ ಹೊರಡಲಿದ್ದಾರಂತೆ. ಅಲ್ಲಿಂದ ಬಂದ ಬಳಿಕ ರಕುಲ್ ಸಿನೆಮಾಗಳಲ್ಲಿ ಬ್ಯುಸಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.