ಅದ್ದೂರಿಯಾಗಿ ನಟಿ ಪೂರ್ಣ ಸೀಮಂತ ಕಾರ್ಯಕ್ರಮ, ವೈರಲ್ ಆದ ಪೊಟೋಗಳು…!

ಮಲಯಾಳಂ ಸಿನೆಮಾಗಳ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಪೂರ್ಣ ಸೌತ್ ಸಿನಿರಂಗದಲ್ಲಿ ಬೇಡಿಕೆಯುಳ್ಳ ನಟಿಯಾಗಿದ್ದರು. ಜೊತೆಗೆ ಆಕೆ ಇದೀಗ ಸೆಕೆಂಡ್ ಇನ್ನಿಂಗ್ಸ್ ಸಹ ಪ್ರಾರಂಭಿಸಿದ್ದು, ಸಾಲು ಸಾಲು ಸಿನೆಮಾಗಳನ್ನು ಮಾಡುತ್ತಿದ್ದಾರೆ. ಸಿನೆಮಾಗಳು ಹಾಗೂ ಕಿರುತೆರೆ ಶೋಗಳಲ್ಲೂ ಸಹ ಪೂರ್ಣ ಬ್ಯುಸಿಯಾಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಸಿನೆಮಾ ರಂಗದಲ್ಲಿ ಬ್ಯುಸಿಯಿರುವ ಈಕೆ ಕೊಟ್ಯಾಧಿಪತಿ ಉದ್ಯಮಿಯೊಂದಿಗೆ ಸಿಕ್ರೇಟ್ ಆಗಿ ಮದುವೆಯಾದರು. ಇದೀಗ ಆಕೆಯ ಸೀಮಂತ ಶಾಸ್ತ್ರ ಅದ್ದೂರಿಯಾಗಿ ನಡೆದಿದ್ದು, ಈ ಸಂಬಂಧ ಕೆಲವೊಂದು ಪೊಟೋಗಳು ವಿಡಿಯೋಗಳು ಸೋಷಿಯೊಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟಿ ಪೂರ್ಣ ಕಳೆದ ವರ್ಷ ದುಬೈ ಮೂಲದ ಉದ್ಯಮಿ ಷಾನಿದ್ ಆಸೀಫ್ ಅಲಿ ಎಂಬಾತನನ್ನು ಮದುವೆಯಾದರು. ಇವರ ಮದುವೆ ರಹಸ್ಯವಾಗಿ ನಡೆದಿತ್ತು. ಬಳಿಕ ಅದ್ದೂರಿಯಾಗಿ ರಿಸೆಪ್ಷನ್ ಮಾಡಿಕೊಂಡರು. ಈ ವಿಡಿಯೋ ಅನ್ನು ಆಕೆ ತನ್ನ ಯೂಟೂಬ್ ಖಾತೆಯ ಮೂಲಕ ಹಂಚಿಕೊಂಡಿದ್ದರು. ಇದೀಗ ಸೀಮಂತ ಶಾಸ್ತ್ರದ ವಿಡಿಯೋ ಅನ್ನೂ ಸಹ ಆಕೆ ತನ್ನ ಯೂಟೂಬ್ ನಲ್ಲಿ ಶೇರ್‍ ಮಾಡಿದ್ದಾರೆ. ಈ ಪೊಟೋಗಳಲ್ಲಿ ಪೂರ್ಣ ಬೇಬಿ ಬಂಪ್ ನೊಂದಿಗೆ ತುಂಭಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಗ್ರಾಂಡ್ ಸೀರೆಯಲ್ಲಿ ಪೂರ್ಣ ಬೊಂಬೆಯಂತೆ ಕಾಣಿಸಿಕೊಂಡಿದ್ದು, ಆಕೆ ಅಷ್ಟೊಂದು ಸುಂದರವಾಗಿ ತಯಾರಾಗಲು ಪ್ರತ್ಯೇಕ ತಂಡ ಕೆಲಸ ಮಾಡಿದೆ ಎನ್ನಲಾಗುತ್ತಿದೆ. ಇನ್ನೂ ಈ ಕಾರ್ಯಕ್ರಮದಲ್ಲಿ ಪೂರ್ಣ ತುಂಬಾ ಸಂತೋಷವಾಗಿದ್ದಾರೆ. ಸದ್ಯ ಈ ವಿಡಿಯೋ ಹಾಗೂ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಈ ಸೀಮಂತ ಕಾರ್ಯಕ್ರಮದಲ್ಲಿ ಪೂರ್ಣ ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತರು ಭಾಗವಹಿಸಿದ್ದರು. ಸದ್ಯ ಪೂರ್ಣ ತಾಯಿ ಮಾತೃತ್ವವನ್ನು ತುಂಬಾ ಸಂತೋಷದಿಂದ ಅನುಭವಿಸುತ್ತಿದ್ದಾರೆ. ಇನ್ನೂ ಪೂರ್ಣ ತೆಲುಗಿನಲ್ಲಿ ಸೀಮಟಪಾಕಾಯಿ ಎಂಬ ಸಿನೆಮಾದ ಮೂಲಕ ತೆಲುಗು ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟರು. ಆಕೆಗೆ ಬಿಗ್ ಬ್ರೇಕ್ ನೀಡಿದ್ದು, ಅವುನು ಎಂಬ ಸಿನೆಮಾ. ಈ ಸಿನೆಮಾದ ಬಳಿಕ ಆಕೆಗೆ ಬ್ಯಾಕ್ ಟು ಬ್ಯಾಕ್ ಅವಕಾಶಗಳು ಹರಿದು ಬಂದವು. ಆದರೆ ಬಳಿಕ ಆಕೆ ಅಷ್ಟೊಂದು ಸಕ್ಸಸ್ ಕಂಡುಕೊಳ್ಳಲು ವಿಫಲರಾದರು. ಆದರೂ ಸಹ ಸಣ್ಣ ಪುಟ್ಟ ಸಿನೆಮಾಗಳು, ಲೇಡಿ ಓರಿಯೆಂಟೆಡ್ ಸಿನೆಮಾಗಳಲ್ಲಿ ನಟಿಸುತ್ತಾ, ಅನೇಕ ಕಿರುತೆರೆ ಶೋಗಳಲ್ಲಿ ಜಡ್ಜ್ ಆಗಿಯೂ ಸಹ ಕೆರಿಯರ್‍ ಸಾಗಿಸುತ್ತಿದ್ದಾರೆ.

ಆದರೆ ನಟಿ ಪೂರ್ಣಗೆ ದೃಶ್ಯಂ-2, ತಲೈವಿ, ಅಖಂಡ ಸಿನೆಮಾಗಳ ಮೂಲಕ ಮತ್ತೆ ಸಕ್ಸಸ್ ಕಂಡುಕೊಂಡರು. ಅದರಲ್ಲೂ ಆಕೆಗೆ ಅಖಂಡ ಸಿನೆಮಾ ಮತಷ್ಟು ಸಕ್ಸಸ್ ತಂದುಕೊಟ್ಟಿತ್ತು. ಇನ್ನೂ ಇದೀಗ ಆಕೆ ಸುರ್ವಣ ಸುಂದರಿ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾದ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಈ ಸಿನೆಮಾ ಫೆ.3 ರಂದು ಬಿಡುಗಡೆಯಾಗಲಿದೆ. ಇನ್ನೂ ಈ ಸಿನೆಮಾದಲ್ಲಿ ಆಕೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಪೂರ್ಣ ಢಿ ಎಂಬ ರಿಯಾಲಿಟಿ ಡ್ಯಾನ್ಸ್ ಶೋ ಮೂಲಕ ಸಖತ್ ಫೇಂ ಪಡೆದುಕೊಂಡಿದ್ದಾರೆ.