ಮುದ್ದಾದ ಗಂಡು ಮಗುವಿಗೆ ಜನ್ಮ ಕೊಟ್ಟ ನಟಿ ಪೂರ್ಣ, ವೈರಲ್ ಆದ ಪೊಟೋಸ್, ಅಭಿಮಾನಿಗಳಿಂದ ಶುಭಾಷಯ…!

Follow Us :

ಸೌತ್ ಸಿನಿರಂಗದ ಸೀನಿಯರ್‍ ನಟಿ ಪೂರ್ಣ ಯಾರಿಗೂ ತಿಳಿಯದಂತೆ ಮದುವೆಯಾಗಿ ಎಲ್ಲರಿಗೂ ಶಾಕ್ ನೀಡಿದ್ದರು. ಬಳಿಕ ಈ ವಿಚಾರವನ್ನು ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡರು. ಇನ್ನೂ ಆಕೆ ಗರ್ಭಿಣಿಯಾದ ವಿಚಾರವನ್ನೂ ಸಹ ಸೋಷಿಯಲ್ ಮಿಡಿಯಾ ಮೂಲಕವೇ ಹಂಚಿಕೊಂಡಿದ್ದರು. ಆಕೆ ಸೀಮಂತ ಕಾರ್ಯಕ್ರಮ, ಬೇಬಿ ಬಂಪ್ ಪೊಟೋಗಳ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿದ್ದರು. ಇದೀಗ ಪೂರ್ಣ ಮುದ್ದಾದ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದು. ಈ ಸಂತೋಷವನ್ನು ತನ್ನ ಕುಟುಂಬದೊಂದಿಗೆ ಅಭಿಮಾನಿಗಳ ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ನಟಿ ಪೂರ್ಣ ಏ.3 ಸೋಮವಾರ ರಾತ್ರಿ ದುಬೈನಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮುದ್ದಾದ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಆಸ್ಪತ್ರೆಯ ಬೆಡ್ ಮೇಲೆ ಮಗನನ್ನು ಎತ್ತಿಕೊಂಡು ತುಂಬಾ ಸಂತೋಷದಿಂದ ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಪೊಟೋ ಒಂದನ್ನು ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಮಗು ಹಾಗೂ ತಾಯಿ ಇಬ್ಬರೂ ಕ್ಷೇಮವಾಗಿದ್ದಾರೆಂದು ಆಸ್ಪತ್ರೆಯ ವೈದ್ಯರೂ ಸಹ ತಿಳಿಸಿದ್ದಾರೆ. ಇನ್ನೂ ಆಕೆ ಹಂಚಿಕೊಂಡ ಪೊಟೋದಲ್ಲಿ ತನ್ನ ಕುಟುಂಬಸ್ಥರೊಂದಿಗೆ ವೈದ್ಯರು ಹಾಗೂ ದಾದಿಯರು ಸಹ ಇದ್ದಾರೆ. ಇನ್ನೂ ಮಗ ಹುಟ್ಟಿದ ಸಂಭ್ರಮವನ್ನು ಪೂರ್ಣ ದುಬೈನಲ್ಲಿ ತನ್ನ ಕುಟುಂಬದೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ. ಇನ್ನೂ ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಆಕೆಯ ಅಭಿಮಾನಿಗಳು ಸೇರಿದಂತೆ ಅನೇಕರು ಶುಭಾಷಯಗಳನ್ನು ಕೋರುತ್ತಿದ್ದಾರೆ.

ಕಳೆದ ವರ್ಷ ಅಕ್ಟೋಬರ್‍ ಮಾಹೆಯಲ್ಲಿ ದುಬೈ ಮೂಲದ ಉದ್ಯಮಿ ಆಸಿಫ್ ಆಲಿ ಎಂಬಾತನನ್ನು ಪೂರ್ಣ ಮದುವೆಯಾದರು. ಈ ಮದುವೆ ವಿಚಾರವನ್ನು ಕೆಲವೊಂದು ಕಾರಣಗಳಿಂದ ಆಕೆ ಗುಟ್ಟಾಗಿಯೇ ಇಟ್ಟಿದ್ದರು. ಬಳಿಕ ಆಕೆಯೇ ಈ ವಿಚಾರವನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡರು. ಇನ್ನೂ ಆಕೆ ಗರ್ಭಿಣಿಯಾದ ವಿಚಾರವನ್ನು ಸಹ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಸೀಮಂತ ಕಾರ್ಯಕ್ರಮ ಸಹ ಅದ್ದೂರಿಯಾಗಿ ನೆರವೇರಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಅನೇಕ ಸಿನೆಮಾ ತಾರೆಯರೂ ಸಹ ಹಾಜರಾಗಿದ್ದರು. ಬಳಿಕ ಆಕೆ ಅನೇಕ ಬೇಬಿ ಬಂಪ್ ಪೊಟೋಗಳ ಮೂಲಕ ದರ್ಶನ ಕೊಟ್ಟಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ಆಕೆ ದಸರಾ ಸಿನೆಮಾದ ಹಾಡಿಗೆ ನೃತ್ಯ ಮಾಡಿ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು.

ಇನ್ನೂ ನಟಿ ಪೂರ್ಣ ಅನೇಕ ಸಿನೆಮಾಗಳಲ್ಲಿ ನಟಿಸಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಪೂರ್ಣ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಭಾರಿ ಪ್ರಾಜೆಕ್ಟ್ ಗಳಲ್ಲಿ ನಟಿಸಿದ್ದಾರೆ. ಅಖಂಡ, ದಸರಾ ಸೇರಿದಂತೆ ಮತಷ್ಟು ಸಿನೆಮಾಗಳಲ್ಲಿ ಆಕೆ ನಟಿಸಿದ್ದಾರೆ. ಇದೀಗ ಪೂರ್ಣ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದು ಅಭಿಮಾನಿಗಳು ಶುಭಾಷಯಗಳನ್ನು ಕೋರುತ್ತಿದ್ದಾರೆ.