ಸರಳವಾಗಿ ವಿವಾಹವಾದ ಮಳೆ ಹುಡುಗಿ ಪೂಜಾ ಗಾಂಧಿ, ವೈರಲ್ ಆದ ಪೊಟೋಸ್…..!

Follow Us :

ಮೊದಲನೇ ಸಿನೆಮಾದ ಮೂಲಕ ಓವರ್‍ ನೈಟ್ ಖ್ಯಾತಿ ಪಡೆದುಕೊಂಡ ನಟಿಯರ ಸಾಲಿಗೆ ಪೂಜಾ ಗಾಂಧಿ ಸಹ ಸೇರುತ್ತಾರೆ. ಮುಂಗಾರು ಮಳೆ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಬಳಿಕ ಅನೇಕ ಸಿನೆಮಾಗಳಲ್ಲಿ ನಟಿಸಿ ಫೇಂ ಪಡೆದುಕೊಂಡರು. ಸಿನೆಮಾಗಳ ಜೊತೆಗೆ ರಾಜಕಾರಣದಲ್ಲೂ ಸಹ ಆಕೆ ಕಾಣಿಸಿಕೊಂಡಿದ್ದರು. ಇದೀಗ ಆಕೆ ಸರಳವಾಗಿ ಮಂತ್ರ ಮಾಂಗಲ್ಯ ಪದ್ದತಿಯಲ್ಲಿ ಮದುವೆಯಾಗಿದ್ದು, ಪೊಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ನಟಿ ಪೂಜಾ ಗಾಂಧಿ ಉದ್ಯಮಿ ವಿಜಯ್ ಘೋರ್ಪಡೆ ಎಂಬುವವರೊಂದಿಗೆ ಸರಳವಾಗಿ ವಿವಾಹವಾಗಿದ್ದಾರೆ. ಬೆಂಗಳೂರಿನಲ್ಲಿ ಲಾಜಿಸ್ಟಿಕ್ ಕಂಪನಿಯೊಂದರು ಮಾಲೀಕರಾಗಿದ್ದಾರೆ. ಬೆಂಗಳೂರಿನ ಯಲಹಂಕದಲ್ಲಿ ನ.29 ರಂದು ಪೂಜಾ ಗಾಂಧಿಯವರ ಮದುವೆ ಸರಳವಾಗಿ ನೆರವೇರಿದೆ. ಸಿನೆಮಾ ಸೆಲೆಬ್ರೆಟಿಗಳು ಎಂದ ಕೂಡಲೇ ಅದ್ದೂರಿಯಾಗಿ ಮದುವೆಯಾಗಲು ಬಯಸುತ್ತಾರೆ. ಆದರೆ ಪೂಜಾ ಗಾಂಧಿ ಮಾತ್ರ ಸರಳವಾಗಿ ವಿವಾಹವಾಗಿದ್ದಾರೆ. ಕನ್ನಡದಲ್ಲಿ ಹಲವಾರು ಸಿನೆಮಾಗಳ ಮೂಲಕ ಅಪಾರ ಕನ್ನಡಿಗರ ಮನಗೆದ್ದ ಪೂಜಾ ಗಾಂಧಿ ಕುವೆಂಪು ಮಂತ್ರ ಮಾಂಗಲ್ಯ ಪದ್ದತಿಯಲ್ಲಿ ಮದುವೆಯಾಗಿದ್ದಾರೆ.

ಇನ್ನೂ ಪೂಜಾ ಗಾಂಧಿಯವರಿಗೆ ಅವರ ಪತಿ ವಿಜಯ್ ರವರೇ ಕನ್ನಡ ಕಲಿಸಿಕೊಟ್ಟಿದ್ದಾರಂತೆ. ಸುಮಾರು ವರ್ಷಗಳಿಂದ ಅವರಿಬ್ಬರೂ ಪ್ರೀತಿಸಿಕೊಳ್ಳುತ್ತಿದ್ದರಂತೆ. ನಟಿ ಪೂಜಾ ಗಾಂಧಿ ಮೂಲತಃ ಉತ್ತರ ಪ್ರದೇಶದವರಾಗಿದ್ದಾರೆ. ಅವರ ಮಾತೃ ಭಾಷೆ ಹಿಂದಿಯಾಗಿತ್ತು. ಆದರೆ ಆಕೆ ಮಾತ್ರ ಕನ್ನಡ ಚಿತ್ರರಂಗದಲ್ಲಿ ಸಕ್ಸಸ್ ಕಂಡುಕೊಂಡಿದ್ದಾರೆ. ಆಕೆಗೆ ಕನ್ನಡ ಕಲಿಸಿಕೊಟ್ಟ ವಿಜಯ್ ರವರನ್ನೇ ಆಕೆ ವರಿಸಿ ಕರ್ನಾಟಕದ ಸೊಸೆಯಾಗಿದ್ದಾರೆ. ಇನ್ನೂ ಪೂಜಾ ಗಾಂಧಿಯವರಿಗೆ ಸಿನೆಮಾ ಸೆಲೆಬ್ರೆಟಿಗಳೂ ಸೇರಿದಂತೆ ಅನೇಕರು ಶುಭ ಕೋರಿದ್ದಾರೆ.