Film News

ಬಾಲಿವುಡ್ ಬ್ಯೂಟಿಯಂತೆ ಹಾಟ್ ಪೋಸ್ ಕೊಟ್ಟ ಕನ್ನಡದ ನಟಿ ನಿವೇದಿತಾ ಗೌಡ, ಕ್ರೇಜಿ ಕಾಮೆಂಟ್ಸ್ ಮಾಡಿದ ನೆಟ್ಟಿಗರು…!

ಕನ್ನಡ ಮನರಂಜನಾ ರಂಗದಲ್ಲಿ ಬಾರ್ಬಿ ಡಾಲ್ ಎಂತಲೇ ಕರೆಯಲಾಗುವ ನಿವೇದಿತಾ ಗೌಡ ರವರನ್ನು ಸೋಷಿಯಲ್ ಮಿಡಿಯಾ ಸ್ಟಾರ್‍ ಎಂತಲೇ ಕರೆಯಬಹುದು. ಸದಾ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಈಕೆ ಸಾಲು ಸಾಲು ರೀಲ್ಸ್ ಗಳನ್ನು ಹಂಚಿಕೊಳ್ಳುತ್ತಾ ಫೇಂ ಪಡೆದುಕೊಂಡಿದ್ದಾರೆ. ಈಕೆ ಕಿರುತೆರೆಗಳಲ್ಲಿ ಪ್ಯಾಪುಲರ್‍ ಆಗಿದ್ದಕ್ಕಿಂತ, ಸೋಷಿಯಲ್ ಮಿಡಿಯಾ ಮೂಲಕವೇ ತುಂಬಾ ಪಾಪ್ಯುಲರ್‍ ಆದ ನಟಿಯಾಗಿದ್ದಾರೆ. ಸದಾ ವಿವಿಧ ರೀತಿಯ ಪೋಸ್ಟ್ ಗಳ ಮೂಲಕ ಎಲ್ಲರನ್ನೂ ಸೆಳೆಯುತ್ತಿರುತ್ತಾರೆ. ಇದೀಗ ಗೋವಾ ಪ್ರವಾಸದಲ್ಲಿರುವ ನಿವೇದಿತಾ ಬಾಲಿವುಡ್ ಬ್ಯೂಟಿಯಂತೆ ಹಾಟ್ ಪೋಸ್ ಕೊಟ್ಟಿದ್ದು ಪೊಟೊಗಳಿಗೆ ಅಭಿಮಾನಿಗಳಿಂದ ಕ್ರೇಜಿ ಕಾಮೆಂಟ್ಸ್ ಹರಿದುಬರುತ್ತಿವೆ.

ನಟಿ ನಿವೇದಿತಾ ಗೌಡ ಬಿಗ್ ಬಾಸ್ ಮೂಲಕ ಖ್ಯಾತಿ ಪಡೆದುಕೊಂಡು ಸೋಷಿಯಲ್ ಮಿಡಿಯಾದಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡಿದ್ದಾರೆ. ನಟಿ ನಿವೇದಿತಾ ಗೌಡ ಸದಾ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ. ಆಕೆ ಬಿಗ್ ಬಾಸ್ ಮನೆಗೆ ಹೋಗಿ ಬಂದ ಬಳಿಕ ಆಕೆ ಮತಷ್ಟು ಫೇಮಸ್ ಆದರು. ನಿವೇದಿತಾ ಗಾಯಕ ಚಂದನ್ ಶೆಟ್ಟಿಯವರನ್ನು ಮದುವೆಯಾದ ವಿಚಾರ ತಿಳಿದೇ ಇದೆ. ಇಬ್ಬರೂ ಸಹ ಆಗಾಗ ಸೋಷಿಯಲ್ ಮಿಡಿಯಾದಲ್ಲಿ ರೀಲ್ಸ್ ಮಾಡುವ ಮೂಲಕ ರಂಜಿಸುತ್ತಿರುತ್ತಾರೆ. ಮದುವೆಯಾದ ಬಳಿಕವೂ ಸಹ ನಿವೇದಿತಾ ಕಿರುತೆರೆಯಲ್ಲಿ ಆಕ್ಟೀವ್ ಆಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಸಹ ಆಕ್ಟೀವ್ ಆಗಿರುತ್ತಾರೆ. ಶೂಟಿಂಗ್ ನಿಂದ ಬಿಡುವು ಸಿಕ್ಕಾಗ ವೆಕೇಷನ್ ಗಳಿಗೂ ಸಹ ಹಾರುತ್ತಿರುತ್ತಾರೆ.

ಕಳೆದೆರಡು ದಿನಗಳ ಹಿಂದೆಯಷ್ಟೆ ನಿರೂಪಕಿ ಕಂ ನಟಿ ಜಾನ್ವಿ ಹಾಗೂ ನಿವೇದಿತಾ ಗೌಡ ವಿಮಾನ ನಿಲ್ದಾಣದಲ್ಲಿ ಡ್ಯಾನ್ಸ್ ವಿಡಿಯೋ ಮಾಡಿದ್ದರು. ಈ ವಿಡಿಯೋ ಕಾರಣದಿಂದಾಗಿ ಆಕೆ ಟ್ರೋಲಿಗರ ಆಹಾರವಾಗಿದ್ದರು. ಇದೀಗ ಗೋವಾದಲ್ಲಿರುವ ನಿವೇದಿತಾ ಗೌಡ ಕ್ಯೂಟ್ ಅಂಡ್ ಬ್ಯೂಟಿಪುಲ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಪೊಟೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಭಿಮಾನಿಗಳು ಸಹ ಈ ಪೊಟೋಗೆ ಭಾರಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಆಕೆಯ ಬ್ಯೂಟಿಗೆ ಫಿದಾ ಆದ ನೆಟ್ಟಿಗರು ಹಾಗೂ ಅಭಿಮಾನಿಗಳು ವಿವಿಧ ರೀತಿಯ ಕಾಮೆಂಟ್ ಗಳು, ಫೈರಿಂಗ್ ಎಮೋಜಿಗಳನ್ನು ಹಂಚಿಕೊಳ್ಳುತ್ತಾ ಮತಷ್ಟು ವೈರಲ್ ಮಾಡುತ್ತಿದ್ದಾರೆ. ಇದರ ಜೊತೆಗೆ ಅನೇಕರು ಬಾಲಿವುಡ್ ನಟಿಗಿಂತಲೂ ಕಡಿಮೆಯಿಲ್ಲ ಎಂದು ಕ್ರೇಜಿ ಕಾಮೆಂಟ್ಸ್ ಮಾಡುತ್ತಿದ್ದಾರೆ.

ಅದಕ್ಕೂ ಮುಂಚೆ ನಿವೇದಿತಾ ಹಾಗೂ ಚಂದನ್ ಶೆಟ್ಟಿ ಅಮೇರಿಕಾ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿನ ಸುಂದರವಾದ ಪ್ರವಾಸಿ ತಾಣಗಳಲ್ಲೂ ಸಹ ರೀಲ್ಸ್ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಇನ್ನೂ ನಿವೇದಿತಾ ಹಂಚಿಕೊಳ್ಳುವಂತಹ ರೀಲ್ಸ್, ಪೊಟೋಸ್ ಗಳ ಕಾರಣದಿಂದ ಅನೇಕ ಬಾರಿ ಟ್ರೋಲ್ ಸಹ ಆಗುತ್ತಿರುತ್ತಾರೆ. ಸೊಷಿಯಲ್ ಮಿಡಿಯಾದಲ್ಲಿ ಭಾರಿ ಫ್ಯಾನ್ ಫಾಲೋಯಿಂಗ್ ಇರುವ ಕಾರಣ ಆಕೆ ಹಂಚಿಕೊಳ್ಳುವ ಪೋಸ್ಟ್ ಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತವೆ.

Most Popular

To Top