ನಟಿ ಮೇಘನಾ ರಾಜ್ ರವರನ್ನು ನೀವು ಭೇಟಿ ಮಾಡಬೇಕಾ? ಇಲ್ಲಿದೆ ಅವಕಾಶ….!

Follow Us :

ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಸಿನೆಮಾ ಸೆಲೆಬ್ರೆಟಿಗಳನ್ನು ಭೇಟಿಯಾಗಲು ಅವರ ಅಭಿಮಾನಿಗಳು ತುಂಬಾನೆ ಕಾಯುತ್ತಿರುತ್ತಾರೆ. ಇದೀಗ ಮೇಘನಾ ರಾಜ್ ಅಭಿಮಾನಿಗಳು ಸುರ್ವಣಾವಕಾಶವೊಂದು ಸಿಕ್ಕಿದೆ. ಆಕೆಯನ್ನು ಭೇಟಿ ಮಾಡುವ ಅವಕಾಶವೊಂದು ಇದ್ದು, ಅದರಂತೆ ನೀವು ಸಹ ಮೇಘನಾ ರಾಜ್ ರವರನ್ನು ಭೇಟಿಯಾಗಬಹುದಾಗಿದೆ. ಅಷ್ಟಕ್ಕೂ ಆ ಅವಕಾಶವಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ಇತ್ತೀಚಿಗೆ ಸಿನೆಮಾಗಳನ್ನು ವಿವಿಧ ರೀತಿಯಲ್ಲಿ ಪ್ರಮೋಷನ್ ಮಾಡುವ ಪ್ಲಾನ್ ಗಳನ್ನು ಹಾಕುತ್ತಿರುತ್ತಾರೆ. ಇದೀಗ ನಟಿ ಮೇಘನಾರಾಜ್ ಅಭಿನಯದ ತತ್ಸಮ ತದ್ಭವ ಸಿನೆಮಾದ ಪ್ರಮೋಷನ್ ಸಹ ವಿಭಿನ್ನವಾಗಿ ಪ್ಲಾನ್ ಮಾಡಿದ್ದಾರೆ. ಈ ಸಿನೆಮಾದ ಪ್ರಚಾರದ ಭಾಗವಾಗಿಯೇ ಮೇಘನಾ ರಾಜ್ ರವರನ್ನು ಭೇಟಿ ಮಾಡುವ ಅವಕಾಶ ಸಹ ಸಿಗಲಿದೆ. ಅದಕ್ಕೊಂದು ಟಾಸ್ಕ್ ಸಹ ನೀಡಲಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಮೇಘನಾರಾಜ್ ರವರನ್ನು ಭೇಟಿಯಾಗಬೇಕು, ಅವರೊಂದಿಗೆ ಮಾತನಾಡಬೇಕು, ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಬೇಕು ಎಂಬೆಲ್ಲಾ ಆಸೆಗಳನ್ನು ಹೊಂದಿರುತ್ತಾರೆ. ಆದರೆ ಅಂತಹ ಅವಕಾಶಗಳು ಸಿಗೋದು ತುಂಬಾನೆ ವಿರಳ ಎಂದೇ ಹೇಳಬಹುದಾಗಿದೆ.

ಆದರೆ ಇದೀಗ ನಟಿ ಮೇಘನಾ ರಾಜ್ ತಮ್ಮ ಅಭಿಮಾನಿಗಳಿಗೆ ಒಂದು ಅವಕಾಶ ನೀಡಿದ್ದಾರೆ. ಅದಕ್ಕಾಗಿ ಆಕೆ ಟಾಸ್ಕ್  ಒಂದನ್ನು ನೀಡಿದ್ದು, ಟಾಸ್ಕ್ ನಲ್ಲಿ ಗೆದ್ದ ಮೂರು ಮಂದಿಗೆ ಮೇಘನಾ ರಾಜ್ ರವರನ್ನು ಭೇಟಿಯಾಗುವ ಹಾಗೂ ಆಕೆಯೊಂದು ಸ್ವಲ್ಪ ಸಮಯ ಮಾತನಾಡುವ ಅವಕಾಶ ಸಿಗಲಿದೆ. ಅಷ್ಟಕ್ಕೂ ಮೇಘನಾ ರಾಜ್ ರವರ ಟಾಸ್ಕ್ ಏನು ಎಂಬ ವಿಚಾರಕ್ಕೆ ಬಂದರೇ, ಮೇಘನಾ ರಾಜ್ ಅಭಿನಯದ ತತ್ಸಮ ತದ್ಭವ ಸಿನೆಮಾದ ದೂರಿ ಲಾಲಿ ಎಂಬ ಹಾಡು ರಿಲೀಸ್ ಆಗಿದ್ದು, ಮಗುವನ್ನು ತಾಯಿ ಮಲಗಿಸಲು ಹಾಡುವ ಹಾಡಾಗಿದೆ. ಈ ಹಾಡಿಗೆ ಮೇಘನಾ ರಾಜ್ ರೀಲ್ಸ್ ಮಾಡಿದ್ದಾರೆ. ತನ್ನ ಮಗ ರಾಯನ್ ರನ್ನು ಮಲಗಿಸಲು ಈ ಹಾಡನ್ನು ಹಾಡಿದ್ದಾರೆ. ಇದೀಗ ಆಕೆ ಒಂದು ಚಾಲೆಂಜ್ ಹಾಕಿದ್ದಾರೆ.

ನಮ್ಮ ಸಿನೆಮಾದ ದೂರಿ ಲಾಲಿ ಹಾಡು ಬಿಡುಗಡೆಯಾಗಿದೆ. ಅದನ್ನು ಕೇಳಿ ನೀವೆಲ್ಲಾ ಖುಷಿ ಪಟ್ಟಿದ್ದೀರಿ ಎಂದು ಭಾವಿಸಿದ್ದೇನೆ. ದೂರಿ ಲಾಲಿ ಹಾಡಿನ ಚಾಲೆಂಜ್ ಕೊಡುತ್ತೇನೆ. ಈ ಹಾಡನ್ನು ಹಾಡುತ್ತಾ ನಿಮ್ಮ ಮಗುವನ್ನು ಹೇಗೆ ಮಲಗಿಸುತ್ತೀರಿ ಎಂಬ ರೀಲ್ಸ್ ಮಾಡಿ ಅಪ್ ಲೋಡ್ ಮಾಡಿ. ಈ ಚಾಲೆಂಜ್ ನಲ್ಲಿ ಗೆದ್ದ  ಮೂರು ಮಂದಿ ತಾಯಂದಿರಿಗೆ ನನ್ನನ್ನು ಭೇಟಿ ಮಾಡುವ ಅವಕಾಶ ಸಿಗುತ್ತದೆ ಎಂದು ಮೇಘನಾ ರಾಜ್ ಹೇಳಿದ್ದಾರೆ. ಇನ್ನೂ ಈ ವಿಡಿಯೋ ಗೆ DooriLaaliChallenge ಹ್ಯಾಶ್​ ಟ್ಯಾಗ್ ಹಾಕಿ ಶೇರ್‍ ಮಾಡಬೇಕು. ಬಳಿಕ ನಮ್ಮ ತಂಡದವರು ಮೂರು ವಿನ್ನರ್‍ ಗಳನ್ನು ಆಯ್ಕೆ ಮಾಡಿ ನನ್ನನ್ನು ಭೇಟಿ ಮಾಡುವ ಅವಕಾಶ ನೀಡುತ್ತಾರೆ ಎಂದು ಮೇಘನಾ ಹೇಳಿದ್ದಾರೆ. ಇನ್ಯಾಕೆ ತಡ ಮೇಘನಾ ರಾಜ್ ರವರನ್ನು ಭೇಟಿ ಮಾಡಲು ಆಸೆಯಿರುವವರು ಒಮ್ಮೆ ಟ್ರೈ ಮಾಡಿ ನೋಡಿ..