Film News

ಆ ವ್ಯಾಧಿಯಿಂದ ಬಳಲುತ್ತಿದ್ದಾರಂತೆ ನಟಿ ಮಮತಾ ಮೋಹನ್ ದಾಸ್, ಕ್ಯಾನ್ಸರ್ ನಿಂದ ಹೊರ ಬಂದ ನಟಿಗೆ ಮತ್ತೊಂದು ಸಮಸ್ಯೆ….!

ಸೌತ್ ನ ಹಾಟ್ ನಟಿಯರಲ್ಲಿ ಮಮತಾ ಮೋಹನ್ ದಾಸ್ ಸಹ ಒಬ್ಬರಾಗಿದ್ದಾರೆ.  ಅನೇಕ ಸಿನೆಮಾಗಳಲ್ಲಿ ಸ್ಪೇಷಲ್ ಸಾಂಗ್ಸ್ ಮೂಲಕ ಎಲ್ಲರನ್ನೂ ಆಕರ್ಷಿಸಿದ ಈಕೆ ಕೆಲವೊಂದು ಸಿನೆಮಾಗಳಲ್ಲಿ ನಟಿಯಾಗಿಯೂ ಸಹ ಖ್ಯಾತಿ ಪಡೆದುಕೊಂಡಿದ್ದಾರೆ. ಇತ್ತೀಚಿಗಷ್ಟೆ ಆಕೆ ಕ್ಯಾನ್ಸರ್‍ ಕಾಯಿಲೆಯನ್ನು ಜಯಿಸಿ ಬಂದಿದ್ದಾರೆ. ಇದೀಗ ಆಕೆ ಮತ್ತೊಂದು ವ್ಯಾಧಿಯಿಂದ ಬಳಲುತ್ತಿದ್ದಾರಂತೆ ಎಂದು ಹೇಳಲಾಗುತ್ತಿದ್ದೆ. ಆ ಬಗ್ಗೆ ಮಮತಾ ಮೋಹನ್ ದಾಸ್ ಎಮೋಷನಲ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ನಟಿ ಮಮತಾ ಮೋಹನ್ ದಾಸ್ ನಟಿಯಾಗಿ, ಪ್ಲೇ ಬ್ಯಾಕ್ ಸಿಂಗರ್‍ ಆಗಿ, ಪ್ರೊಡ್ಯೂಸರ್‍ ಆಗಿಯೂ ಸಹ ಮಲ್ಟಿ ಟ್ಯಾಲೆಂಟೆಡ್ ನಟಿಯಾಗಿ ಖ್ಯಾತಿ ಪಡೆದುಕೊಂಡಿದ್ದಾರೆ. ಮಲಯಾಳಂ, ತಮಿಳು, ತೆಲುಗು ಸಿನೆಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಅನೇಕ ಹಾಡುಗಳನ್ನು ಹಾಡಿದ್ದಾರೆ ಸ್ಪೇಷಲ್ ಸಾಂಗ್ ಗಳಲ್ಲೂ ಸಹ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಸಾಮಾನ್ಯವಾಗಿ ಸಿನೆಮಾ ಸೆಲೆಬ್ರೆಟಿಗಳಲ್ಲಿ ಅನೇಕರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಣ, ಪಾಪ್ಯಲಾರಟಿ, ಸ್ಟಾರ್‍ ಡಮ್ ಇದ್ದರೂ ಸಹ ಅವರಿಗೆ ಅನಾರೋಗ್ಯಕ್ಕೆ ತುತ್ತಾಗುತ್ತಿರುತ್ತಾರೆ. ಇದೀಗ ಮಮತಾ ಮೋಹನ್ ದಾಸ್ ಸಹ ಅನಾರೋಗ್ಯದ ಪಾಲಾಗಿದ್ದಾರೆ. ಇನ್ನೂ ಸಮಂತಾ ಮಯೋಸೈಟಿಸ್ ಕಾಯಿಲೆಗೆ ತುತ್ತಾಗಿದ್ದಾರೆ. ಅವರಂತೆ ಪೂನಂ ಕೌರ್‍, ದೀಪಿಕಾ ಪಡುಕೋಣೆ ಸಹ ಅನಾರೋಗ್ಯದ ಸಮಸ್ಯೆಗೆ ಸಿಲುಕಿರುವುದು ತಿಳಿದೇ ಇದೆ. ಇದೀಗ ಮಮತಾ ಮೋಹನ್ ದಾಸ್ ಸಹ ಒಂದು ವ್ಯಾಧಿಗೆ ಗುರಿಯಾಗಿದ್ದಾರೆ.

ನಟಿ ಮಮತಾ ಮೋಹನ್ ದಾಸ್ ಈ ಹಿಂದೆ ಕ್ಯಾನ್ಸರ್‍ ಕಾಯಿಲೆಗೆ ತುತ್ತಾಗಿದ್ದರು. ಆ ಕಾಯಿಲೆಯಿಂದ ಹೊರಬಂದ ಮಮತಾ ರವರಿಗೆ ಇದೀಗ ಮತ್ತೊಂದು ಸಮಸ್ಯೆ ಎದುರಾಗಿದೆ. ಆಕೆ ಸೋಷಿಯಲ್ ಮಿಡಿಯಾದಲ್ಲಿ ಎಮೋಷನಲ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿರುವಂತೆ ಪ್ರೀತಿಯ ಸೂರ್ಯ ದೇವರೇ, ಈಗ ನಾನು ನಿನ್ನನ್ನು ತುಂಬಾ ಪ್ರೀತಿಯಿಂದ ಸ್ವೀಕರಿಸುತ್ತಿದ್ದೇನೆ. ನನ್ನ ಶರೀರದ ಬಣ್ಣ ಬದಲಾಗುತ್ತಿದೆ. ಆದ್ದರಿಂದ ನೀನು ಬರುವುದಕ್ಕೂ ಮುಂಚೆ ಎದ್ದು, ನಿನ್ನ ಕಿರಣಗಳಿಗಾಗಿ ಎದುರು ನೋಡುತ್ತಿದ್ದೇನೆ. ನನಗೆ ಶಕ್ತಿಯನ್ನು ನೀಡು, ನನ್ನ ಜೀವನದಲ್ಲಿ ಸದಾ ನಿನಗೆ ಅಬಾರಿಯಾಗಿರುತ್ತೇನೆ ಎಂದು ಹೇಳಿದ್ದಾರೆ. ಇನ್ನೂ ಮಮತಾ ಮೋಹನ್ ದಾಸ್ ಈ ಹಿಂದೆ ಕ್ಯಾನ್ಸರ್‍ ವ್ಯಾದಿಗೆ ಗುರಿಯಾಗಿದ್ದರು. ಆದರೂ ಸಹ ದೃತಿಗೆಡದೆ ಕ್ಯಾನ್ಸರ್‍ ವಿರುದ್ದ ಹೋರಾಡಿ ಗೆದ್ದಿದ್ದಾರೆ. ಇದೀಗ ಆಕೆ ಮತ್ತೋಂದು ಕಾಯಿಲೆಗೆ ಗುರಿಯಾಗಿರುವುದು ಅಭಿಮಾನಿಗಳಿಗೆ ನೋವಿನ ಸಂಗತಿಯಾಗಿದೆ.

ನಟಿ ಮಮತಾ ಮೋಹನ್ ದಾಸ್ ಯಮದೊಂಡ, ಚಿಂತಕಾಯಲ ರವಿ, ಕಿಂಗ್, ಕೆಡಿ ಮೊದಲಾದ ಸಿನೆಮಾಗಳ ಮೂಲಕ ಕ್ರೇಜ್ ಪಡೆದುಕೊಂಡರು. ಕ್ಯಾನ್ಸರ್‍ ನಿಂದ ಹೊರಬಂದ ಬಳಿಕ ಆಕೆ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದರು. ಸದ್ಯ ಮಲಯಾಳಂ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದು, ಆಕೆ ಹೊಸ ವ್ಯಾದಿಗೆ ಗುರಿಯಾಗಿದ ವಿಚಾರ ಕೇಳಿದ ಅಭಿಮಾನಿಗಳು ಆಕೆ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ.

Most Popular

To Top