Film News

ಶೂಟಿಂಗ್ ಸಮಯದಲ್ಲಿ ಗಂಭೀರವಾಗಿ ಗಾಯಗೊಂಡ ನಟ ವಿಜಯ್, ಬಿಚ್ಚಗಾಡು ಖ್ಯಾತಿ ನಟನಿಗೆ ತೀವ್ರ ಗಾಯಗಳು….!

ಸೌತ್ ಸಿನಿರಂಗದಲ್ಲಿ ಸೈಲೆಂಟ್ ಆಗಿ ಎಂಟ್ರಿ ಕೊಟ್ಟ ನಟ ವಿಜಯ್ ಬಿಚ್ಚಗಾಡು ಸಿನೆಮಾದ ಮೂಲಕ ಸೆನ್ಷೇಷನಲ್ ನಟರಾದರು. ಬಿಚ್ಚಗಾಡು ಸಿನೆಮಾ ತೆಲುಗು ಹಾಗೂ ತಮಿಳಿನಲ್ಲಿ ಭಾರಿ ಸಕ್ಸಸ್ ಕಂಡಿತ್ತು. ಈ ಸಿನೆಮಾದ ಮೂಲಕ ನಟ ವಿಜಯ್ ತುಂಬಾನೆ ಫೇಮಸ್ ಆದರು. ಇದೀಗ ಬಿಚ್ಚಗಾಡು 2 ಸಿನೆಮಾ ಸಹ ಘೋಷಣೆಯಾಗಿದ್ದು, ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ. ಈ ಸಿನೆಮಾದ ಶೂಟಿಂಗ್ ವೇಳೆ ವಿಜಯ್ ಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.

ತೆಲುಗು ಹಾಗೂ ತಮಿಳಿನಲ್ಲಿ ಸೆನ್ಷೇಷನಲ್ ಹಿಟ್ ಕಂಡ ಬಿಚ್ಚಗಾಡು ಸಿನೆಮಾ ಇಂದಿಗೂ ಸಹ ಫೇಮಸ್ ಆಗಿದೆ. ಈ ಸಿನೆಮಾದಲ್ಲಿ ಹಿರೋ ಆಗಿ ಕಾಣಿಸಿಕೊಂಡ ವಿಜಯ್ ಆಂಟೋನಿ ಈ ಸಿನೆಮಾಗೂ ಮುಂದೆ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದರೂ ಸಹ ಅಷ್ಟೊಂದು ಫೇಂ ಆತನಿಗೆ ಸಿಕ್ಕಿರಲಿಲ್ಲ. ಆದರೆ ಬಿಚ್ಚಗಾಡು ಸಿನೆಮಾದ ಬಳಿಕ ವಿಜಯ್ ಆಂಟೋನಿ ತುಂಬಾನೆ ಪಾಪ್ಯುಲರ್‍ ಆದರು. ಇದೀಗ ಈ ಸಿನೆಮಾದ ಸೀಕ್ವೆಲ್ ಬಿಚ್ಚಗಾಡು 2 ಸಿನೆಮಾ ಸಹ ಘೋಷಣೆಯಾಗಿದ್ದು, ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ. ಸದ್ಯ ಈ ಸಿನೆಮಾ ಶೂಟಿಂಗ್ ಮಲೇಷಿಯಾದಲ್ಲಿ ನಡೆಯುತ್ತಿದೆ. ಈ ವೇಳೆ ಒಂದು ದುರದೃಷ್ಟಕರವಾದ ಸಂಘಟನೆ ನಡೆದಿದೆ. ವಿಜಯ್ ಆಂಟೋನಿ ಬಿಚ್ಚಗಾಡು 2 ಸಿನೆಮಾದ ಶೂಟಿಂಗ್ ವೇಳೆ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆಯಂತೆ.

ಬಿಚ್ಚಗಾಡು 2 ಸಿನೆಮಾದ ಶೂಟಿಂಗ್ ಮಲೇಷಿಯಾದಲ್ಲಿ ನಡೆಯುತ್ತಿದ್ದು, ಬೋಟ್ ನಲ್ಲಿ ಒಂದು ಸನ್ನಿವೇಶಕ್ಕೆ ಸಂಬಂಧಿಸಿದ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ವಿಜಯ್ ತೀವ್ರವಾಗಿ ಗಾಯಗೊಂಡಿದ್ದಾರಂತೆ. ವಿಜಯ್ ಬೋಟ್ ನಲ್ಲಿ ಪಯಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ನಡೆಯುತ್ತಿರುವ ಬೋಟ್ ನಲ್ಲಿ ವಿಜಯ್ ನಟಿಸುತ್ತಿದ್ದು, ಪಕ್ಕದ ಬೋಟ್ ನಿಂದ ಕ್ಯಾಮೆರಾಮೆನ್ ಹಾಗೂ ಇತರೆ ಸಿಬ್ಬಂದಿ ಆ ದೃಶ್ಯವನ್ನು ಚಿತ್ರೀಕರಣ ನಡೆಸುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದ್ದು, ಚಿತ್ರತಂಡ ಕೂಡಲೇ ಆತನನ್ನು ಮಲೇಷಿಯಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಆತನ ಸ್ಥಿತಿ ಸ್ಥಿರವಾಗಿದೆ ಎನ್ನಲಾಗುತ್ತಿದೆ.

ಇನ್ನೂ ವೇಗವಾಗಿ ಬೋಟ್  ನಡೆಯುತ್ತಿದ್ದ ವೇಳೆ ಈ ದುರಂತ ಸಂಭವಿಸಿದ್ದು, ವಿಜಯ್ ಅಪಘಾತಕ್ಕೆ ಗುರಿಯಾಗಿದ್ದಾರೆ. ಇನ್ನೂ ಈ ಸುದ್ದಿ ತಿಳಿಯುತ್ತಿದ್ದಂತೆ ವಿಜಯ್ ಅಭಿಮಾನಿಗಳು ಶಾಕ್ ಆಗಿದ್ದಾರೆ. ಕೂಡಲೇ ವಿಜಯ್ ಚೇತರಿಕೆಯಾಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ.

Most Popular

To Top