ಅಂತೂ ಇಂತೂ ತನ್ನ ಮಗುವಿಗೆ ತಂದೆ ಯಾರು ಎಂಬುದನ್ನು ರಿವೀಲ್ ಮಾಡಿದ ನಟಿ ಇಲಿಯಾನಾ, ಆತನೇ ನೋಡಿ ಆ ಮಿಸ್ಟರಿ ಮ್ಯಾನ್….!

ಗೋವಾ ಬ್ಯೂಟಿ ಇಲಿಯಾನಾ ಇತ್ತೀಚಿಗೆ ತಾನು ಗರ್ಭಿಣಿಯೆಂಬ ಸುದ್ದಿಯ ಮೂಲಕ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು. ಆ ಗರ್ಭಕ್ಕೆ ತಂದೆ ಯಾರು ಎಂಬುದನ್ನು ತಿಳಿಸಿದೇ ಆಕೆ ತಾನು ಗರ್ಭಿಣಿ ಎಂದು ಘೋಷಣೆ ಮಾಡಿದರು. ಬಳಿಕ…

ಗೋವಾ ಬ್ಯೂಟಿ ಇಲಿಯಾನಾ ಇತ್ತೀಚಿಗೆ ತಾನು ಗರ್ಭಿಣಿಯೆಂಬ ಸುದ್ದಿಯ ಮೂಲಕ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು. ಆ ಗರ್ಭಕ್ಕೆ ತಂದೆ ಯಾರು ಎಂಬುದನ್ನು ತಿಳಿಸಿದೇ ಆಕೆ ತಾನು ಗರ್ಭಿಣಿ ಎಂದು ಘೋಷಣೆ ಮಾಡಿದರು. ಬಳಿಕ ಆಕೆ ಗರ್ಭಿಣಿಯೆಂಬುದಾಗಿ ಅನೇಕ ಪೋಸ್ಟ್ ಗಳನ್ನು ಸಹ ಹಂಚಿಕೊಳ್ಳುತ್ತಿದ್ದರು. ಕೆಲವು ದಿನಗಳಿಂದ ಆಕೆ ತನ್ನ ಬೇಬಿ ಬಂಪ್ ಶೋ ಮಾಡುತ್ತಾ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದರು. ಇನ್ನೂ ತನ್ನ ಗರ್ಭಕ್ಕೆ ಕಾರಣ ಯಾರು ಎಂಬ ವಿಚಾರವನ್ನು ನಿಗೂಡವಾಗಿಯೇ ಇಟ್ಟಿದ್ದರು, ಇದೀಗ ಆಕೆ ಕೊನೆಗೂ ತನ್ನ ಮಗುವಿನ ತಂದೆ ಯಾರು ಎಂಬ ವಿಚಾರವನ್ನು ರಿವೀಲ್ ಮಾಡಿದ್ದಾರೆ.

ಕಡಿಮೆ ಸಮಯದಲ್ಲೇ ಸ್ಟಾರ್‍ ಡಮ್ ಗಿಟ್ಟಿಸಿಕೊಂಡ ನಟಿಯರ ಸಾಲಿನಲ್ಲಿ ಹಾಟ್ ಬ್ಯೂಟಿ ಇಲಿಯಾನಾ ಸಹ ಒಬ್ಬರಾಗಿದ್ದಾರೆ. ದೇವದಾಸು ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ಒಳ್ಳೆಯ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಟಾಲಿವುಡ್ ನಲ್ಲಿ ಆಕೆ ಭಾರಿ ಆಫರ್‍ ಗಳನ್ನು ಪಡೆದುಕೊಂಡು ಸ್ಟಾರ್‍ ನಟಿಯಾದರು. ಆಕೆಯ ಕೆರಿಯರ್‍ ಸಕ್ಸಸ್ ಆಗಿರುವ ಸಮಯದಲ್ಲೇ ಆಕೆ ತೆಗೆದುಕೊಂಡಂತಹ ಕೆಲವೊಂದು ತಪ್ಪು ನಿರ್ಣಯಗಳಿಂದ ಆಕೆಯ ಸಿನಿ ಕೆರಿಯರ್‍ ಹಾಳಾಯ್ತು. ಇನ್ನೂ ಸುಮಾರು ದಿನಗಳಿಂದ ಆಕೆ ಸಿನೆಮಾಗಳಿಂದ ದೂರವೇ ಉಳಿದರು. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಆಕ್ಟೀವ್ ಆಗಿಯೇ ಇದ್ದರು. ಕೆಲವು ದಿನಗಳ ಹಿಂದೆಯಷ್ಟೆ ಆಕೆ ಮದುವೆಯಾಗದೇ ತಾನು ಗರ್ಭಿಣಿ ಎಂದು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಎಲ್ಲರೂ ಶಾಕ್ ಆಗಿದ್ದರು. ಬಳಿಕ ಆಕೆ ತನ್ನ ಬೇಬಿ ಬಂಪ್ಸ್ ಜೊತೆಗೆ ಕ್ರೇಜಿ ಕಾಮೆಂಟ್ ಗಳ ಮೂಲಕ ಸದ್ದು ಮಾಡುತ್ತಲೇ ಇದ್ದಾರೆ.

ಆಕೆ ಗರ್ಭಿಣಿ ಎಂಬ ವಿಚಾರವನ್ನು ರಿವೀಲ್ ಮಾಡಿ ಸುಮಾರು ತಿಂಗಳುಗಳ ಬಳಿಕ ತನ್ನ ಮಗುವಿನ ತಾಯಿ ಯಾರು ಎಂಬ ವಿಚಾರ ರಿವೀಲ್ ಮಾಡಿದ್ದಾರೆ. ಇಲಿಯಾನಾಗೆ ಮದುವೆ ಆಗಲೇ ಇಲ್ಲ. ಅಂತಹುದರಲ್ಲಿ ಆಕೆ ಗರ್ಭಿಣಿಯಾಗಿದ್ದಾರೆ, ಆ ಗರ್ಭಕ್ಕೆ ಕಾರಣ ಯಾರು ಎಂಬ ಅನುಮಾನಗಳು ಪ್ರಶ್ನೆಗಳು ಸೋಷಿಯಲ್ ಮಿಡಿಯಾದಲ್ಲಿ ಎದುರಾಗುತ್ತಲೇ ಇತ್ತು. ಇದೀಗ ಎಲ್ಲರ ಅನುಮಾನಗಳಿಗೆ ಇಲಿಯಾನಾ ಉತ್ತರ ನೀಡಿದ್ದಾರೆ. ಇಲಿಯಾನಾ ಗೆ ಸದ್ಯ 9 ತಿಂಗಳು. ಶೀಘ್ರದಲ್ಲೇ ಮಗುವಿಗೆ ಜನ್ಮ ನೀಡಲಿದ್ದಾರೆ. ಇದೀಗ ಆಕೆ ತನ್ನ ಬಾಯ್ ಫ್ರೆಂಡ್ ಯಾರು ಎಂಬ ವಿಚಾರ ಹೊರಹಾಕಿದ್ದಾರೆ. ತನ್ನ ಬಾಯ್ ಫ್ರೆಂಡ್ ಪೊಟೋ ರಿವೀಲ್ ಮಾಡಿದ್ದಾರೆ. ಡಿನ್ನರ್‍ ಡೇಟ್ ಗೆ ಹೋದಂತಹ ಇಲಿಯಾನಾ ಆತನೊಂದಿಗೆ ಪೊಟೋಗಳನ್ನು ತೆಗೆದು ಶೇರ್‍ ಮಾಡಿದ್ದಾರೆ. ಆ ಮೂಲಕ ತನ್ನ ಮಗುವಿನ ತಂದೆ ಯಾರು ಎಂಬ ಕುತೂಹಲಕ್ಕೆ ಬ್ರೇಕ್ ಹಾಕಿದ್ದಾರೆ.

ಇನ್ನೂ ಇಲಿಯಾನ ಹಂಚಿಕೊಂಡ ಪೊಟೋದಲ್ಲಿರುವ ವ್ಯಕ್ತಿ ನೋಡುತ್ತಿದ್ದರೇ ಆತ ವಿದೇಶಿಗ ಎಂದು ಹೇಳಬಹುದಾಗಿದೆ. ಆದರೆ ಆತ ಯಾರು ಎಂಬ ವಿಚಾರಗಳು ಮಾತ್ರ ತಿಳಿದುಬಂದಿಲ್ಲ. ಸುಮಾರು ದಿನಗಳಿಂದ ಕತ್ರಿನಾ ಕೈಫ್  ತಮ್ಮ ಸೆಬಾಸ್ಟಿಯನ್ ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ರೂಮರ್‍ ಇತ್ತು. ಆದರೆ ಅದೆಲ್ಲಾ ರೂಮರ್‍ ಗಳೆಂದು ಸಾಬಿತಾಗಿದೆ ಎಂದು ಹೇಳಲಾಗಿದೆ. ಸದ್ಯ ಕೊನೆಗೂ ಆ ಮಿಸ್ಟರಿ ಮ್ಯಾನ್ ಯಾರು ಎಂಬ ವಿಚಾರವನ್ನು ಹೊರಹಾಕಿದ್ದಾರೆ.