Film News

ತಾನು ಪ್ರೀತಿಸುವ ಹುಡುಗನಿಗೆ ಆ ಕ್ವಾಲಿಟಿಗಳು ಇರಬೇಕು ಎಂದ ಅಷು ರೆಡ್ಡಿ…!

ಇತ್ತೀಚಿಗೆ ಸೋಷಿಯಲ್ ಮಿಡಿಯಾ ಹವಾ ಜೋರಾಗಿಯೇ ಇದೆ. ಸೋಷಿಯಲ್ ಮಿಡಿಯಾದ ಮೂಲಕ ಅನೇಕರು ಇಂದು ಸೆಲಬ್ರೆಟಿಗಳಾಗಿದ್ದಾರೆ. ಈ ಸಾಲಿಗೆ ಜೂನಿಯರ್‍ ಸಮಂತಾ ಎಂದೇ ಕರೆಯಲಾಗುವ ಅಷುರೆಡ್ಡಿ ಸಹ ಸೇರುತ್ತಾರೆ. ಸೋಷಿಯಲ್ ಮಿಡಿಯಾ ಮೂಲಕವೇ ಸ್ಟಾರ್‍ ನಟಿಯರಂತೆ ಕ್ರೇಜ್ ಪಡೆದುಕೊಂಡ ಈಕೆ ಅನೇಕ ಪೊಟೋಶೂಟ್ಸ್ ಮೂಲಕ ತನ್ನ ಫಾಲೋವರ್ಸ್‌ಗಳನ್ನು ಸಹ ಬೆಳೆಸಿಕೊಳ್ಳುತ್ತಿದ್ದಾರೆ ಜೊತೆಗೆ ತಮ್ಮ ಅಭಿಮಾನಿಗಳೊಂದಿಗೆ ಆಗಾಗ ತಮ್ಮ ವೈಯುಕ್ತಿಕ ವಿಚಾರಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆಕೆಯನ್ನು ಪ್ರೀತಿಸುವ ಹುಡುಗ ಹೇಗಿರಬೇಕು ಎಂಬುದನ್ನು ರಿವೀಲ್ ಮಾಡಿದ್ದಾರೆ.

ಜೂನಿಯರ್‍ ಸಮಂತಾ ಎಂದೇ ಕರೆಯಲಾಗುವ ಅಷುರೆಡ್ಡಿ ಬಿಗ್ ಬಾಸ್ ಮೂಲಕ ತುಂಬಾ ಫೇಂ ಸಂಪಾದಿಸಿಕೊಂಡರು. ಆಕೆ ಸೋಷಿಯಲ್ ಮಿಡಿಯಾದಲ್ಲಿ ಸಹ ಪುಲ್ ಆಕ್ಟೀವ್ ಆಗಿದ್ದಾರೆ. ಸದಾ ಹಾಟ್ ಹಾಟ್ ಪೊಟೋಶೂಟ್ ಗಳ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಅಪಾರ ಪ್ರಮಾಣದ ಅಭಿಮಾನಿಗಳನ್ನು ಹೊಂದಿರುವ ಈಕೆ ಹಂಚಿಕೊಳ್ಳುವ ಪೊಟೊಗಳೂ ಸಹ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತವೆ. ಜೊತೆಗೆ ಆಗಾಗ ಸೆಲೆಬ್ರೆಟಿಗಳ ಜೊತೆಗೆ ಬೋಲ್ಡ್ ಸಂದರ್ಶನಗಳನ್ನು ಸಹ ಮಾಡುತ್ತಾ ಸುದ್ದಿಯಾಗುತ್ತಿರುತ್ತಾರೆ. ಆಗಾಗ ವೆಕೇಷನ್ ಗಳಿಗೂ ಸಹ ಹಾರುತ್ತಾ ಅಲ್ಲಿನ ಹಾಟ್ ಅಂಡ್ ಬೋಲ್ಡ್ ಪೊಟೋಗಳ ಮೂಲಕ ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸುತ್ತಿರುತ್ತಾರೆ.

ಈ ಹಾದಿಯಲ್ಲೇ ಅಷುರೆಡ್ಡಿ ಕೆಲವೊಂದು ಪೊಟೋಗಳನ್ನು ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ತಾನು ಪ್ರೀತಿಸುವ ಹುಡುಗನಿಗೆ ಯಾವೆಲ್ಲಾ ಲಕ್ಷಣಗಳು ಇರಬೇಕು ಎಂಬುದನ್ನು ಸಹ ರಿವೀಲ್ ಮಾಡಿದ್ದಾರೆ. ದೆಹಲಿಯ ಆಗ್ರಾಗೆ ವೇಕೇಷನ್ ಗೆ ಹಾರಿದ ಆಕೆ ಅಲ್ಲಿನ ಕೆಲವೊಂದು ಪೊಟೋಗಳನ್ನು ಹಂಚಿಕೊಂಡು ತನ್ನ ಬಾಯ್ ಫ್ರೆಂಡ್ ಲಕ್ಷಣಗಳ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಮುಮತಾಜ್ ಪ್ರೀತಿಯ ನೆನಪಿಗಾಗಿ ತಾಜ್ ಮಹಲ್ ಕಟ್ಟಿಸಿದ್ದಾರೆ. ತಾಜ್ ಮಹಲ್ ಬಳಿರುವ ಪೊಟೋ ಒಂದನ್ನು ಹಂಚಿಕೊಂಡು ಹೇ ಶಹಜಹಾನ್ ನಿನ್ನಂತೆ ನನ್ನ ಪ್ರೀತಿಸುವ ವ್ಯಕ್ತಿ ಪ್ರಿಯಕರನಾಗಿ ಬರಬೇಕು ದಯವಿಟ್ಟು ಆರ್ಶಿವಾದ ಮಾಡಿ ಎಂದು ಕ್ಯಾಪ್ಷನ್ ಹಾಕಿದ್ದಾರೆ.

ಇನ್ನೂ ಅಷು ರೆಡ್ಡಿ ಈ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದೆ ತಡ ಪೊಟೋಗಳು ಎಲ್ಲಾ ಕಡೆ ಸಖತ್ ವೈರಲ್ ಆಗಿದೆ. ಇನ್ನೂ ಆಕೆಯ ಫಾಲೊವರ್ಸ್ ಹಾಗೂ ನೆಟ್ಟಿಗರೂ ಸಹ ವಿವಿಧ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಸಿನೆಮಾಗಳಲ್ಲೂ ಸಹ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಿರುತ್ತಾರೆ. ರೀಲ್ಸ್, ಯೂಟ್ಯೂಬ್ ವಿಡಿಯೋಗಳು, ಗ್ಲಾಮರಸ್ ಪೊಟೋಶೂಟ್ಸ್ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ

Most Popular

To Top