Film News

ರಸ್ತೆಯ ಜೀಬ್ರಾ ಕ್ರಾಸ್ ಮೇಲೆ ಕ್ಯಾಟ್ ವಾಕ್ ಮಾಡಿದ ಅಷುರೆಡ್ಡಿ, ಸಖತ್ ಟ್ರೋಲ್ ಆದ ಜೂನಿಯರ್ ಸಮಂತಾ…..!

ಬಿಗ್ ಬಾಸ್ ಮೂಲಕ ಫೇಂ ಪಡೆದುಕೊಂಡ ನಟಿ ಅಷುರೆಡ್ಡಿ, ದಿನೇ ದಿನೇ ಗ್ಲಾಮರ್‍ ಡೋಸ್ ಏರಿಸುತ್ತಿರುತ್ತಾರೆ. ಆ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿರುತ್ತಾರೆ. ಅಷುರೆಡ್ಡಿ ಗ್ಲಾಮರ್‍ ಶೋ ಮೂಲಕ ಇಂಟರ್‍ ನೆಟ್ ನಲ್ಲಿ ಸುನಾಮಿಯನ್ನು ಎಬ್ಬಿಸುತ್ತಿರುತ್ತಾರೆ. ಸಖತ್ ಹಾಟ್ ಆಗಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ನಡು ರಸ್ತೆಯಲ್ಲಿ ಕ್ಯಾಟ್ ವಾಕ್ ಮಾಡುತ್ತಾ ಆಕೆ ಕಾಣಿಸಿಕೊಂಡಿದ್ದು, ಈ ವಿಡಿಯೋ ನೋಡಿದ ಅನೇಕರು ಆಕೆಯನ್ನು ಸಖತ್ ಟ್ರೋಲ್ ಮಾಡುತ್ತಿದ್ದಾರೆ.

ನಟಿ ಅಷುರೆಡ್ಡಿಯನ್ನು ಆಕೆಯ ಫ್ಯಾನ್ಸ್ ಜೂನಿಯರ್‍ ಸಮಂತಾ ಎಂದೇ ಕರೆಯಲಾಗುತ್ತದೆ. ಆಕೆ ನೋಡಲು ಸಮಂತಾ ರವರಂತೆ ಕಾಣುವ ಕಾರಣದಿಂದ ಆಕೆಯನ್ನು ಸಮಂತಾ ರವರಿಗೆ ಹೋಲಿಕೆ ಮಾಡುತ್ತಾರೆ. ಇನ್ನೂ ಆಕೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಜೊತೆಗೆ ತನ್ನ ಫಾಲೋವರ್ಸ್ ಸಂಖ್ಯೆ ಏರಿಸಿಕೊಳ್ಳಲು ಪ್ರಯತ್ನಗಳನ್ನು ಸಹ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಇಂಟ್ರಸ್ಟಿಂಗ್ ಪೋಸ್ಟ್ ಗಳು, ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಗಳು, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಮಾಡ್ರನ್, ಟ್ರೆಂಡಿ ಔಟ್ ಫಿಟ್ ಗಳಲ್ಲಿ ಆಕೆ ಮತ್ತೇರಿಸುವಂತಹ ಪೋಸ್ ಗಳನ್ನು ಕೊಡುತ್ತಾ ಎಲ್ಲರನ್ನೂ ಮಸ್ಮರೈಜ್ ಮಾಡುತ್ತಿರುತ್ತಾರೆ. ಇದೀಗ ಆಕೆಯ ಲೇಟೆಸ್ಟ್ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಜೊತೆಗೆ ಅದೇ ಮಾದರಿ ಟ್ರೋಲ್ ಸಹ ಆಗುತ್ತಿದೆ.

ಇತ್ತೀಚಿಗಷ್ಟೆ ನಟಿ ಅಷುರೆಡ್ಡಿ ಹೊಸ ವರ್ಷದ ಆಚರಣೆ ನಿಮಿತ್ತ ಸಖತ್ ಎಂಜಾಯ್ ಮಾಡಿದ್ದರು. ಈ ಪೊಟೋಗಳು ಹಾಗೂ ವಿಡಿಯೋಗಳನ್ನು ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಿಮಾಮ ಬೀಚ್ ಬಳಿಯ ಟ್ರಾಫಿಕ್ ಸಿಗ್ನಲ್ ಬಳಿ ಆಕೆ ರೀಲ್ ಒಂದನ್ನು ಮಾಡಿದ್ದಾರೆ. ರಸ್ತೆಯ ಜೀಬ್ರಾ ಕ್ರಾಸಿಂಗ್ ದಾಟುವ ವೇಳೆ ಆಕೆ ಕ್ಯಾಟ್ ವಾಕ್ ಮಾಡಿದ್ದಾರೆ. ಆಕೆಯ ಸ್ನೇಹಿತ ಹಿಂದೆಯಿಂದಲೇ ಶೂಟ್ ಮಾಡುತ್ತಾ ಬಂದಿದ್ದಾರೆ.  ಶಾರ್ಟ್ ಆಗಿರುವಂತಹ ಟೈಟ್ ಫಿಟ್ ಡ್ರೆಸ್ ನಲ್ಲಿ ಆಕೆ ಸಾರ್ವಜನಿಕ ಸ್ಥಳದಲ್ಲಿ ರೀಲ್ ಮಾಡಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗಿದೆ.

ಇನ್ನೂ ಅಷುರೆಡ್ಡಿ ಲೇಟೆಸ್ಟ್ ವಿಡಿಯೋ ಎಷ್ಟು ವೈರಲ್ ಆಗುತ್ತಿದೆಯೋ ಅಷ್ಟೇ ಟ್ರೋಲ್ ಸಹ ಆಗುತ್ತಿದೆ. ಓರ್ವ ಸೆಲಬ್ರೆಟಿ ಆಗಿದ್ದುಕೊಂಡು ಈ ರೀತಿ ರಸ್ತೆಯಲ್ಲಿ ರೀಲ್ಸ್ ಮಾಡೋಕೆ ಕ್ಯಾಟ್ ವಾಕ್ ಮಾಡೋದು ಸರಿಯಲ್ಲ. ಇದರಿಂದ ಬೇರೆಯವರ ಮೇಲೆ ಸಹ ಪ್ರಭಾವ ಬೀರುವಂತಹ ಸಾಧ್ಯತೆಯಿರುತ್ತದೆ ಎಂದು ಕೆಲವರು ವಿಮರ್ಶೆ ಮಾಡುತ್ತಿದ್ದಾರೆ. ಮತ್ತೆ ಕೆಲವರು ಆಕೆಯ ದೇಹದ ಮೈಮಾಟಕ್ಕೆ ಫಿದಾ ಆಗಿ ಮೆಚ್ಚುಗೆ ಸಹ ಸೂಚಿಸುತ್ತಿದ್ದಾರೆ. ಸದ್ಯ ಆಕೆ ಪೋಕಸ್ ಹಾಗೂ ಎ ಮಾಸ್ಟರ್‍ ಪೀಸ್ ಎಂಬ ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ.

Most Popular

To Top