Film News

ನನ್ನ ಪತಿಯೇ ಬೋಲ್ಡ್ ದೃಶ್ಯಗಳಲ್ಲಿ ನಟಿಸು ಎಂದು ಹೇಳಿದ್ರಂತೆ, ಶಾಕಿಂಗ್ ಕಾಮೆಂಟ್ಸ್ ಮಾಡಿದ ನಟಿ ಆನಂದಿ…..!

ಸಿನಿರಂಗದಲ್ಲಿ ಗ್ಲಾಮರ್‍ ಗೆ ತುಂಬಾನೆ ಪ್ರಾಧಾನ್ಯತೆ ಇರುತ್ತದೆ ಎಂದು ಹೇಳಬಹುದಾಗಿದೆ. ಅನೇಕ ನಟಿಯರು ಸಿನೆಮಾಗಳಲ್ಲಿ ಕೆಲವೊಂದು ಪಾತ್ರಗಳಲ್ಲಿ ಬೋಲ್ಡ್ ಆಗಿ ನಟಿಸಲು ಇಷ್ಟಪಡುವುದಿಲ್ಲ. ಬೋಲ್ಡ್ ದೃಶ್ಯಗಳಿರುವ ಕಾರಣದಿಂದ ಅನೇಕರು ಅವಕಾಶಗಳನ್ನು ಸಹ ಬೇಡ ಎಂದ ಉದಾಹರಣೆಗಳೂ ಸಹ ಇದೆ. ಇದೀಗ ತೆಲುಗು ನಟಿ ಆನಂದಿ ಬೋಲ್ಡ್ ದೃಶ್ಯಗಳಲ್ಲಿ ನಟಿಸೋಕೆ ನನ್ನ ಪತಿಯೇ ಹೇಳಿದ್ದಾರೆ ಎಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದು, ಆಕೆಯ ಕಾಮೆಂಟ್ಸ್ ಸೋಷಿಯಲ್ ಮಿಡಿಯಾದಲ್ಲಿ ಸಖತ್  ವೈರಲ್ ಆಗುತ್ತಿವೆ.

ಬಣ್ಣದ ಲೋಕದಲ್ಲಿ ಕೆಲವೊಂದು ಸಿನೆಮಾಗಳಲ್ಲಿ ತುಂಬಾನೆ ಬೋಲ್ಡ್ ದೃಶ್ಯಗಳಿರುತ್ತವೆ. ಆದರೆ ಅಂತಹ ದೃಶ್ಯಗಳಲ್ಲಿ ನಟಿಸೋಕೆ ಕೆಲ ನಟಿಯರು ಹಿಂದೇಟು ಹಾಕಿದರೇ ಮತ್ತೆ ಕೆಲವರೂ ಎಂತಹುದೇ ಸನ್ನಿವೇಶದಲ್ಲೂ ನಟಿಸೋಕೆ ಸಿದ್ದವಾಗಿರುತ್ತಾರೆ. ಇದೀಗ ತೆಲುಗು ಮೂಲದ ನಟಿ ಆನಂದಿ ತಮಿಳಿನ ಮಾಂಗೈ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ಬೋಲ್ಡ್ ಆಗಿ ಆಕೆ ನಟಿಸಿದ್ದಾರೆ ಎನ್ನಲಾಗಿದೆ. ಈ ಸಿನೆಮಾದ ಫಸ್ಟ್ ಲುಕ್ ಇತ್ತಿಚಿಗಷ್ಟೆ ರಿಲೀಸ್ ಆಗಿದ್ದು, ಪೋಸ್ಟರ್‍ ವೈರಲ್ ಆಗಿದೆ. ಮದುವೆಯಾದ ಬಳಿಕವೂ ಆನಂದಿ ಬೋಲ್ಡ್ ದೃಶ್ಯಗಳಲ್ಲಿ ನಟಿಸಿದ್ದಾರಂತೆ. ಸಾಮಾನ್ಯವಾಗಿ ಮದುವೆಯಾದ ಬಳಿಕ ಬೋಲ್ಡ್ ದೃಶ್ಯಗಳಲ್ಲಿ ನಟಿಸಲು ಇಷ್ಟಪಡಲ್ಲ. ಆದರೆ ಆನಂದಿ ಮಾತ್ರ ಬೋಲ್ಡ್ ದೃಶ್ಯಗಳಲ್ಲಿ ನಟಿಸುವ ಮೂಲಕ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದಾರೆ.

ಇನ್ನೂ ಮೊದಲಿಗೆ ಮಾಂಗೈ ಸಿನೆಮಾವನ್ನು ಆನಂದಿ ಸಿನೆಮಾ ರಿಜೆಕ್ಟ್ ಮಾಡಿದ್ದರಂತೆ. ಈ ಸಿನೆಮಾ ಕಥೆಯಲ್ಲಿ ಒಳ್ಳೆಯ ಸಂದೇಶವಿದೆ ಆದರೆ ಬೋಲ್ಡ್ ಆಗಿ ನಟಿಸಬೇಖು ಜೊತೆಗೆ ಕೆಲವೊಂದು ಕೆಟ್ಟ ಡೈಲಾಗ್ ಗಳೂ ಸಹ ಇದೆ. ಆದ್ದರಿಂದ ಆಕೆ ಮೊದಲಿಗೆ ಸಿನೆಮಾ ಒಪ್ಪಿಕೊಂಡಿರಲಿಲ್ಲವಂತೆ. ಇನ್ನೂ ಈ ಸಿನೆಮಾದ ನಿರ್ದೇಶಕ ಆನಂದಿರವರ ಪತಿಯೇ ಆಗಿದ್ದಾರೆ. ಸೋಕ್ರಟೀಸ್ ಎಂಬಾತನೇ ಈ ಸಿನೆಮಾದ ನಿರ್ದೇಶಕ. ಕಳೆದ 2021 ರಲ್ಲಿ ಇವರಿಬ್ಬರೂ ಪ್ರೀತಿಸಿ ಮದುವೆಯಾದರು. ಆತನೇ ಆನಂದಿಯನ್ನು ಮಾಂಗೈ ಸಿನೆಮಾದಲ್ಲಿ ನಟಿಸುವಂತೆ ಪ್ರೋತ್ಸಾಹಿಸಿದ್ದರಂತೆ. ಬೋಲ್ಡ್ ಸನ್ನಿವೇಶಗಳಿದ್ದರೂ ಪರವಾಗಿಲ್ಲ. ಕಥೆ ಒಳ್ಳೆಯದು ಆದ್ದರಿಂದ ಬಿಡಬೇಕು ಎಂದು ಹೇಳಿದ್ದರಂತೆ. ಪತಿಯ ಪ್ರೋತ್ಸಾಹದಿಂದಲೇ ನಾನು ಈ ಸಿನೆಮಾದಲ್ಲಿ ನಟಿಸುತ್ತಿದ್ದೇನೆ ಎಂದು ಆನಂದಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ.

Most Popular

To Top