ಎಕ್ಸ್ ಪೋಸ್ ಮಾಡುವುದು ಅಷ್ಟೊಂದು ಸುಲಭ ಅಂದ್ಕೊಂಡ್ರಾ, ನೆಟ್ಟಿಗರ ವಿರುದ್ದ ಫೈರ್ ಆದ ಅನಸೂಯ….!

Follow Us :

ತೆಲುಗು ನಟಿ ಅನಸೂಯ ಭಾರದ್ವಾಜ್ ಸದಾ ಸುದ್ದಿಯಲ್ಲೇ ಇರುತ್ತಾರೆ. ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅನಸೂಯ ಸದ್ಯ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದು, ಒಳ್ಳೆಯ ಸಕ್ಸಸ್ ಕಂಡುಕೊಂಡಿದ್ದಾರೆ. ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುವ ಅನಸೂಯ ಪೊಟೋಶೂಟ್ಸ್, ವೀಡಿಯೋಗಳ ಮೂಲಕ ಎಲ್ಲರನ್ನೂ ಸೆಳೆಯುತ್ತಿರುತ್ತಾರೆ. ಜೊತೆಗೆ ಆಗಾಗ ನೆಟ್ಟಿಗರೊಂದಿಗೆ ವಾಗ್ವಾದ ಸಹ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ನೆಟ್ಟಿಗರ ವಿರುದ್ದ ಗರಂ ಆಗಿದ್ದಾರೆ. ಅಷ್ಟಕ್ಕೂ ಆಕೆ ಗರಂ ಆಗಿದ್ದಾದರೂ ಏಕೆ ಎಂಬ ವಿಚಾರಕ್ಕೆ ಬಂದರೇ,

ನಟಿ ಅನಸೂಯ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಬ್ಯುಸಿಯಾಗಿರುತ್ತಾರೆ. ಸಿನೆಮಾಗಳು, ಪೊಟೋಗಳು, ವಿಡಿಯೋಗಳ ಜೊತೆಗೆ ತಮ್ಮ ವೈಯುಕ್ತಿಕ ವಿಚಾರಗಳ ಬಗ್ಗೆ ಸಹ ಅಭಿಮಾನಿಗಳೊಂದಿಗೆ ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಳ್ಳುತ್ತಿರುತ್ತಾರೆ. ಇನ್ನೂ ಆಕೆ ಸದಾ ಹಾಟ್ ಪೊಟೋಶೂಟ್ಸ್ ಶೇರ್‍ ಮಾಡುತ್ತಿರುತ್ತಾರೆ. ಆಕೆ ಹಂಚಿಕೊಂಡ ಪೊಟೋಗಳು ಕಡಿಮೆ ಸಮಯದಲ್ಲೇ ವೈರಲ್ ಸಹ ಆಗುತ್ತಿರುತ್ತವೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಅನಸೂಯ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದರು. ಬ್ಲಾಕ್ ಅಂಡ್ ವೈಟ್ ಕಾಲದ ಹಿರಿಯ ನಟಿ ಸಾವಿತ್ರಿಯವರ ಹಾಡುಗಳನ್ನು ರಿಮೇಕ್ ಮಾಡಿ, ಅವರ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು, ಈ ಕಾರಣದಿಂದ ಆಕೆ ತುಂಬಾನೆ ಟ್ರೋಲ್ ಆಗಿದ್ದರು.

ಅನಸೂಯ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ವೈರಲ್ ಆಗಿದ್ದು, ಅದೇ ಮಾದರಿಯಲ್ಲಿ ಟ್ರೋಲ್ ಸಹ ಆಗಿದ್ದರು. ಅನೇಕರು ನೀವು ಸಾವಿತ್ರಿಯಂತೆ ನಟಿಸುವುದು ನೀವು ಎಕ್ಸ್ ಪೋಸ್ ಮಾಡಿದಷ್ಟು ಸುಲಭವಲ್ಲ ಎಂದು ಹೇಳಿದ್ದರು. ಈ ಕಾಮೆಂಟ್ ಗಳ ಕಾರಣದಿಂದ ಅನಸೂಯ ಫೈರ್‍ ಆಗಿದ್ದಾರೆ. ಅನಸೂಯ ತನ್ನದೇ ಆದ ಸ್ಟೈಲ್ ನಲ್ಲಿ ಕೌಂಟರ್‍ ಕೊಟ್ಟಿದ್ದಾರೆ. ಸಾವಿತ್ರಿಯವರಂತೆ ಹಳೇಯ ಕಾಲದ ನಟಿಯರಂತೆ ನಟಿಸುವುದು ಯಾರಿಗೂ ಸಾಧ್ಯವಿಲ್ಲ. ಹಾಗಂತ ಎಕ್ಸ್ ಪೋಸ್ ಮಾಡುವುದು ಸುಲಭ ಅಂದುಕೊಂಡ್ರಾ, ಎಕ್ಸ್ ಪೋಸ್ ಮಾಡುವುದು ಸಹ ತುಂಬಾನೆ ಕಷ್ಟ. ಅದಕ್ಕೆ ದೈಹಿಕವಾಗಿ ಮಾನಸಿಕವಾಗಿ ನಿಮ್ಮನ್ನು ಸಿದ್ದಪಡಿಸಿಕೊಳ್ಳಬೇಕು. ನಾನು ಯಾವುದೇ ಪಾತ್ರ ಮಾಡಿದರೂ ಯಾವುದೇ ಡ್ರೆಸ್ ಹಾಕಿಕೊಂಡರು ಸ್ಟ್ರಾಂಗ್ ಆಗಿಯೇ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

ಇನ್ನೂ ನಟಿ ಅನಸೂಯ ಕೊನೆಯದಾಗಿ ಪೆದಕಾಪು-1 ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಸದ್ಯ ಅನಸೂಯ ಕೈಯಲ್ಲಿ ಒಳ್ಳೆಯ ಪ್ರಾಜೆಕ್ಟ್ ಗಳಿವೆ. ಅದರಲ್ಲಿ ಅಲ್ಲು ಅರ್ಜುನ್ ರವರ ಪುಷ್ಪಾ ಸಿನೆಮಾ ಸಹ ಒಂದಾಗಿದ್ದು, ಈ ಸಿನೆಮಾ ಮೇಲೆ ಆಕೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.