Film News

ಮತ್ತೊಮ್ಮೆ ವಿಜಯದೇವರಕೊಂಡ ಅಭಿಮಾನಿಗಳನ್ನು ಕೆಣಕಿದ ಅನಸೂಯ, ಪೈತ್ಯ ಎಂದು ಶಾಕಿಂಗ್ ಪೋಸ್ಟ್ ಮಾಡಿದ ಅನಸೂಯ…..!

ಕಿರುತೆರೆಯಲ್ಲಿ ಆಂಕರ್‍ ಆಗಿ ಫೇಂ ಪಡೆದುಕೊಂಡ ಅನಸೂಯ ಭಾರದ್ವಾಜ್ ಇದೀಗ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಭಾರಿ ಸದ್ದು ಮಾಡುತ್ತಿದ್ದಾರೆ. ಆಕೆ ಸೊಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಆಕ್ಟೀವ್ ಆಗಿರುತ್ತಾರೆ. ಹೇಳಬೇಕೆಂದರೇ ಕಿರುತೆರೆ ಸಿನೆಮಾಗಳಿಗಿಂತ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚು ಆಕ್ಟೀವ್ ಆಗಿರು‌ತ್ತಾರೆ. ಇದೀಗ ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಈ ಪೊಸ್ಟ್ ವಿಜಯದೇವರಕೊಂಡ ಅಭಿಮಾನಿಗಳನ್ನು ಕೆರಳಿಸಿದ್ದು, ಆಕೆಯ ಮೇಲೆ ಫೈರ್‍ ಆಗಿದ್ದಾರೆ.

ಜಬರ್ದಸ್ತ್ ಶೋ ಮೂಲಕ ಫೇಂ ಪಡೆದುಕೊಂಡ ಅನಸೂಯ ಇದೀಗ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಆಕೆ ನೇರವಾಗಿಯೇ ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆಕೆ ಹಂಚಿಕೊಳ್ಳುವ ಪೊಟೋಗಳಿಗೆ ಅನೇಕರು ಟ್ರೋಲ್ ಸಹ ಮಾಡುತ್ತಿರುತ್ತಾರೆ. ಅಂತಹವರಿಗೆ ಅದೇ ರೀತಿ ಸ್ಟ್ರಾಂಗ್ ಕೌಂಟರ್‍ ಸಹ ಕೊಡುತ್ತಾರೆ. ರೌಡಿ ಹಿರೋ ವಿಜಯ್ ದೇವರಕೊಂಡ ಅಭಿನಯದ ಲೈಗರ್‍ ಸಿನೆಮಾದ ಸಮಯದಲ್ಲಿ ಸಹ ಅನಸೂಯ ಟ್ವೀಟ್ ಒಂದನ್ನು ಮಾಡಿದ್ದು, ಆ ಸಮಯದಲ್ಲಿ ಆಕೆಯನ್ನು ವಿಜಯ್ ದೇವರಕೊಂಡ ಫ್ಯಾನ್ಸ್ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು. ಇದೀಗ ಮತ್ತೊಮ್ಮೆ ಆಕೆ ವಿಜಯ್ ದೇವರಕೊಂಡ ರವರನ್ನು ಉದ್ದೇಶಿಸಿ ಪೊಸ್ಟ್ ಮಾಡಿದ್ದೀರಾ ಎಂದು ಮತ್ತೊಮ್ಮೆ ವಿಜಯ್ ಫ್ಯಾನ್ಸ್ ಗರಂ ಆಗಿದ್ದಾರೆ.

ಇನ್ನೂ ಅನಸೂಯ ತಮ್ಮ ಟ್ವಿಟರ್‍ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿರುವಂತೆ Ippude okati chusanu.. “The” na?? Babooooiii!!! Paityam.. enchestam.. antakunda chuskundam ಎಂದು ಟ್ವೀಟ್ ಮಾಡಿದ್ದಾರೆ. ನಾನು ಈಗಷ್ಟೆ ಒಂದನ್ನು ನೋಡಿದೆ “The” na?? ಅಯ್ಯೋ, ಪೈತ್ಯ ಜಾಸ್ತಿ ಏನು ಮಾಡೋಣ, ನಮಗೆ ಅಂಟದಿರ ನೋಡಿಕೊಳ್ಳೋಣ ಎಂಬ ಅರ್ಥದಲ್ಲಿದೆ ಈ ಪೋಸ್ಟ್. ಇನ್ನೂ ಅನಸೂಯ ಈ ಟ್ವೀಟ್ ನಲ್ಲಿ ಎಲ್ಲೂ ಸಹ ವಿಜಯ್ ದೇವರಕೊಂಡ ಹೆಸರು ಪ್ರಸ್ತಾಪಿಸಿಲ್ಲ. ಆದರೆ ವಿಜಯ್ ಫ್ಯಾನ್ಸ್ ಮಾತ್ರ ಆಕೆಯ ವಿರುದ್ದ ಫೈರ್‍ ಆಗಿದ್ದಾರೆ. ವಿಜಯ್ ದೇವರಕೊಂಡ ನಟಿಸುತ್ತಿರುವ ಖುಷಿ ಸಿನೆಮಾದ ಪೋಸ್ಟರ್‍ ಮೇಲೆಯೇ ಅನಸೂಯ ಈ ಟ್ವೀಟ್ ಮೂಲಕ ಪರೋಕ್ಷವಾಗಿ ವಿಜಯ್ ದೇವರಕೊಂಡ ರವರನ್ನು ಟಾರ್ಗೆಟ್ ಮಾಡಿದ್ದಾರೆ ಎಂಬುದು ಹಲವರು ಅಭಿಪ್ರಾಯವಾಗಿದೆ.

ಇನ್ನೂ ಅನಸೂಯ ಈ ಟ್ವೀಟ್ ಮಾಡಿದ್ದೆ ತಡ ವಿಜಯ್ ಅಭಿಮಾನಿಗಳು ಆಕೆಯನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ನಿನಗೆ ಸಂಬಂಧವಿಲ್ಲದ ವಿಚರಗಳಲ್ಲಿ ಏಕೆ ತಲೆ ಹಾಕುತ್ತೀಯಾ. ನೀನು ಈ ರೀತಿಯಾಗಿ ಮಾಡುತ್ತೀಯಾ ಅದಕ್ಕಾಗಿಯೇ ನಿನ್ನ ವಿಚಾರದಲ್ಲೂ ಎಲ್ಲರೂ ಎಂಟ್ರಿ ಆಗುತ್ತಾರೆ. ಇನ್ನೂ ಖುಷಿ ಪೋಸ್ಟರ್‍ ನಲ್ಲಿ THE VIJAY DEVARAKONDA ಎಂದು ಇದ್ದು, ಇದೇ ಕಾರಣದಿಂದ ಅನಸೂಯ ಆ ಟ್ವೀಟ್ ಮಾಡಿದ್ದಾರೆ ಎಂದು ವಿಜಯ್ ಅಭಿಮಾನಿಗಳ ವಾದವಾಗಿದೆ. ಸದ್ಯ ಅನಸೂಯ ಹಂಚಿಕೊಂಡ ಟ್ವೀಟ್ ಇದೀಗ ಸಂಚಲನವಾಗಿದ್ದು, ವಿಜಯ್ ಅಭಿಮಾನಿಗಳ ಕಾಮೆಂಟ್ ಗಳಿಗೆ ಆಕೆ ಸಹ ಖಾರವಾಗಿಯೇ ರಿಪ್ಲೆ ಕೊಡುತ್ತಿದ್ದಾರೆ.

Most Popular

To Top