Film News

ಸಿದ್ದಾರ್ಥ್ ಜೊತೆ ಡೇಟಿಂಗ್ ಕುರಿತು ಅದಿತಿ ರಾವ್ ರಿಯಾಕ್ಷನ್, ಡೇಟಿಂಗ್ ಬಗ್ಗೆ ಕೇಳಿದ್ರೆ ಆಕೆ ಹೇಳಿದ್ದು ಬೇರೆ….!

ಸುಮಾರು ದಿನಗಳಿಂದ ಸೌತ್ ಸಿನಿರಂಗದ ನಟ ಸಿದ್ದಾರ್ಥ್ ಹಾಗೂ ಅದಿತಿ ರಾವ್ ಹೈದರಿ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ಸುದ್ದಿಗಳು ಹರಿದಾಡುತ್ತಲೇ ಇದೆ. ತೆಲುಗು ನಟ ಶರ್ವಾನಂದ್ ನಿಶ್ಚಿತಾರ್ಥ ಸಮಾರಂಭದಲ್ಲಿ ಸಿದ್ದಾರ್ಥ್ ಹಾಗೂ ಅದಿತಿ ಜೋಡಿಯಾಗಿ ಕಾಣಿಸಿಕೊಂಡಿದ್ದು, ರೂಮರ್‍ ಗೆ ಮತಷ್ಟು ಬಲ ಬಂದಿತ್ತು. ಸದ್ಯ ಡೇಟಿಂಗ್ ನಡೆಸುತ್ತಿರುವುದಾಗಿ ಮದುವೆ ಆಲೋಚನೆ ನಮಗಿಲ್ಲ ಎಂದು ಸಿದ್ದಾರ್ಥ್ ಹಾಗೂ ಅದಿತಿ ಹೇಳಿದ್ದಾರೆ ಎಂಬ ಸುದ್ದಿಗಳೂ ಸಹ ಕೇಳಿಬಂದಿದ್ದವು. ಇದೀಗ ಅದಿತಿ ತಮ್ಮ ಬಗ್ಗೆ ಹರಿದಾಡುತ್ತಿರುವ ಡೇಟಿಂಗ್ ರೂಮರ್‍ ಬಗ್ಗೆ ಕೇಳಿದರೇ ಆಕೆಯ ಹೇಳಿದ್ದು ಮಾತ್ರ ಬೇರೆ.

ಇತ್ತೀಚಿಗೆ ನಟಿ ಸಿದ್ದಾರ್ಥ್ ಹಾಗೂ ಅದಿತಿ ರವರ ಬಗ್ಗೆ ಅನೇಕ ರೂಮರ್‍ ಗಳು ಹರಿದಾಡುತ್ತಿವೆ. ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ, ಸದ್ಯ ಪ್ರೇಮ ಪಯಣ ಸಾಗಿಸುತ್ತಿದ್ದಾರೆ ಎಂಬೆಲ್ಲಾ ಸುದ್ದಿಗಳು ಕೇಳಿಬರುತ್ತಲೇ ಇದೆ. ಲವರ್‍ ಬಾಯ್ ಎಂದು ಖ್ಯಾತಿ ಪಡೆದುಕೊಂಡ ನಟ ಸಿದ್ದಾರ್ಥ್ ಹೈದರಾಬಾದ್ ಬ್ಯೂಟಿ ಅದಿತಿ ರಾವ್ ಜೊತೆಗೆ ರಿಲೇಷನ್ ಶಿಪ್ ನಲ್ಲಿದ್ದಾರೆ ಎಂದು ರೂಮರ್‍ ಗಳು ಜೋರಾಗಿಯೇ ಹರಿದಾಡುತ್ತಿವೆ. ಅದರಲ್ಲೂ ಶರ್ವಾನಂದ್ ಎಂಗೇಜ್ ಮೆಂಟ್ ನಲ್ಲೂ ಅದಿತಿ ಹಾಗೂ ಸಿದ್ದಾರ್ಥ್ ಜೋಡಿಯಾಗಿ ಬಂದಿದ್ದು, ಅವರ ಬಗ್ಗೆ ರೂಮರ್‍ ಗಳು ಮತಷ್ಟು ಹೆಚ್ಚಾಗಲು ಕಾರಣವಾಗಿದೆ. ಮಹಾಸಮುದ್ರಂ ಸಿನೆಮಾದ ಬಳಿಕ ಇಬ್ಬರೂ ಪ್ರೇಮ ಪಯಣ ಸಾಗಿಸುತ್ತಿದ್ದಾರೆ. 2021 ರಿಂದ ಇಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಅನೇಕ ಬಾರಿ ಅವರಿಬ್ಬರೂ ಜೋಡಿಯಾಗಿ ಕಾಣಿಸಿಕೊಂಡಿದ್ದು ಪೊಟೋಗಳು ವೈರಲ್ ಆಗಿತ್ತು.

ಇನ್ನೂ ನಟಿ ಅದಿತಿ ರಾವ್ ತಾಜ್ ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾದ ಟ್ರೈಲರ್‍ ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದು, ಈ ಟ್ರೈಲರ್‍ ರಿಲೀಸ್ ಈವೆಂಟ್ ನಲ್ಲಿ ಸಿದ್ದಾರ್ಥ್ ಜೊತೆಗಿನ ಡೇಟಿಂಗ್ ಬಗ್ಗೆ ಪ್ರಶ್ನೆಗಳು ಎದುರಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅದಿತಿ ಸದ್ಯ ನನಗೆ ತುಂಬಾ ಹಸಿವು ಆಗುತ್ತಿದೆ. ನಾನು ಹೋಗಿ ತಿನ್ನುತ್ತೇನೆ ಎಂದು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಊಟದ ನೆಪ ಹೇಳಿ ಜಾರಿಕೊಂಡಿದ್ದಾರೆ. ಇನ್ನೂ ಅದಿತಿ ಹಾಗೂ ಸಿದ್ದಾರ್ಥ್ ನಡುವಣ ಅಫೈರ್‍ ಬಗ್ಗೆ ಸದಾ ಸುದ್ದಿಗಳು ಕೇಳಿಬರುತ್ತಲೇ ಇದೆ. ಸಿನಿರಂಗದಲ್ಲಿ ಸದ್ಯ ಅನೇಕ ಜೋಡಿಗಳ ಮದುವೆಗಳು ನಡೆಯುತ್ತಿದ್ದು, ಇತ್ತೀಚಿಗಷ್ಟೆ ಅತಿಯಾಶೆಟ್ಟಿ ಹಾಗೂ ಕ್ರಿಕೆಟಿಗ ರಾಹುಲ್, ಸಿದ್ದಾರ್ಥ್ ಹಾಗೂ ಕಿಯಾರಾ ಮದುವೆಯಾದರು. ಇದೇ ಹಾದಿಯಲ್ಲಿ ಸಿದ್ದಾರ್ಥ್ ಅದಿತಿ ರಾವ್ ಸಹ ಶೀಘ್ರದಲ್ಲೇ ಮದುವೆ ಸುದ್ದಿ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top