Film News

ಪ್ರೀತಿ ಎಂದರೇ ಅಸಹ್ಯ, ವಿರುಕ್ತಿ ಹುಟ್ಟುವಂತೆ ಮಾಡಿದ್ದಾಳೆ ಎಂದು ಅದಿತಿ ರಾವ್ ಮಾಜಿ ಪತಿ ಸಂಚಲನಾತ್ಮಕ ಹೇಳಿಕೆಗಳು…!

ಸಿನಿರಂಗದಲ್ಲಿ ಲವ್, ಬ್ರೇಕಪ್, ಮದುವೆ, ವಿಚ್ಚೇದನ ಗಳು ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತವೆ. ಮದುವೆ, ವಿಚ್ಚೇದನದ ಬಳಿಕ ನಟಿಯಾಗಿ ಫೇಂ ಪಡೆದುಕೊಂಡ ನಟಿ ಅದಿತಿರಾವ್ ಹೈದರಿ ಇತ್ತೀಚಿಗೆ ಸದಾ ಸುದ್ದಿಯಲ್ಲಿರುತ್ತಾರೆ. ಆಕೆ ನಟ ಸಿದ್ದಾರ್ಥ್ ಜೊತೆಗೆ ಅಫೈರ್‍ ನಡೆಸುತ್ತಿದ್ದಾರೆ ಎಂಬ ರೂಮರ್‍ ಗಳು ಜೋರಾಗಿಯೇ ಹರಿದಾಡುತ್ತಿವೆ. ಇದೀಗ ಅದಿತಿ ರಾವ್ ಮಾಜಿ ಪತಿ ಆಕೆಯ ವಿರುದ್ದ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.

ನಟಿ ಅದಿತಿರಾವ್ ಹೈದರಿ ಅನೇಕರಿಗೆ ನಟಿಯಾಗಿ ಮಾತ್ರ ತಿಳಿದಿದೆ. ಆಕೆಯ ಬ್ಯಾಕ್ ಗ್ರೌಂಡ್ ಬಗ್ಗೆ ಅನೇಕರಿಗೆ ತಿಳಿದಿಲ್ಲ ಎನ್ನಬಹುದಾಗಿದೆ. ತಮಿಳು ಸಿನೆಮಾಗಳಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈಕೆ ನಟ ಕಾರ್ತಿ ಅಭಿನಯದ ಚೆಲಿಯಾ ಎಂಬ ಸಿನೆಮಾದ ಮೂಲಕ ತೆಲುಗು ಪ್ರೇಕ್ಷಕರನ್ನೂ ಸಹ ರಂಜಿಸಿದ್ದರು. ಈ ಸಿನೆಮಾದ ಬಳಿಕ ಆಕೆ ಒಳ್ಳೆಯ ಫೇಂ ಸಹ ಸಂಪಾದಿಸಿಕೊಂಡರು. ಜೊತೆಗೆ ಅನೇಕ ಅವಕಾಶಗಳನ್ನು ಸಹ ಗಿಟ್ಟಿಸಿಕೊಂಡರು. ಇನ್ನೂ ಅದಿತಿ ರಾವ್ ಗೆ ಮದುವೆಯಾಗಿದೆಯೇ ಎಂಬ ಅನುಮಾನ ಮೂಡುವಂತೆ ಅದಿತಿ ಇದ್ದಾರೆ ಎಂದರೇ ತಪ್ಪಾಗಲಾರದು. ಅನೇಕ ಯುವಕರನ್ನು ಮಂತ್ರಮುಗ್ದರನ್ನಾಗಿ ಮಾಡುತ್ತಿರುತ್ತಾರೆ. ಇನ್ನೂ ಆಕೆಯ ಬ್ಯೂಟಿ ಕಂಡ ಅನೇಕ ಸಿನೆಮಾ ನಿರ್ಮಾಣ ಸಂಸ್ಥೆಗಳು ಸಹ ಆಕೆಗೆ ಅವಕಾಶಗಳನ್ನು ನೀಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಮಹಾಸಮುದ್ರಂ, ಅಂತರಿಕ್ಷ ಎಂಬ ಸಿನೆಮಾಗಳಲ್ಲಿ ನಟಿಸಿದರು. ಆದರೆ ಆಕೆಗೆ ಬಿಗ್ ಬ್ರೇಕ್ ನೀಡುವಂತಹ ಸಿನೆಮಾ ಸಿಗಲಿಲ್ಲ ಎಂದೇ ಹೇಳಬಹುದಾಗಿದೆ.

ಇನ್ನೂ ಕೆಲವು ದಿನಗಳಿಂದ ಕಾಲಿವುಡ್ ನ ಲವರ್‍ ಬಾಯ್ ಸಿದ್ದಾರ್ಥ್ ಜೊತೆಗೆ ಪ್ರೇಮಾಯಣ ನಡೆಸುತ್ತಿದ್ದಾರೆ ಎಂದು ಪ್ರತಿನಿತ್ಯ ಸುದ್ದಿ ಕೇಳಿಬರುತ್ತಿದೆ. ಅದರಲ್ಲೂ ಇತ್ತೀಚಿಗೆ ನಡೆದ ಶರ್ವಾನಂದ ಎಂಗೇಜ್ ಮೆಂಟ್ ಗೆ ಇಬ್ಬರೂ ಜೊತೆಯಾಗಿ ಬಂದು ರೂಮರ್‍ ಗಳಿಗೆ ಮತಷ್ಟು ಬಲ ತಂದುಕೊಟ್ಟರು. ಇದೀಗ ಅದಿತಿರಾವ್ ಮಾಜಿ ಪತಿ ಸತ್ಯದೀಪ್ ಮಿಶ್ರಾ ಆಕೆಯ ಬಗ್ಗೆ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಅದಿತಿ ಜೊತೆಗಿನ ನನ್ನ ರಿಲೇಷನ್ ಕಾರಣದಿಂದ ನನಗೆ ಪ್ರೀತಿಯ ಮೇಲೆ ವಿರುಕ್ತಿ ಹುಟ್ಟಿದೆ. ಮತ್ತೊಮ್ಮೆ ಪ್ರೀತಿಗೆ ಬೀಳಲು ಭಯ ಆಗುತ್ತಿದೆ. ಆದರೆ ಬ್ರೇಕಪ್ ಅನುಭವ ಆದವರು ಮತ್ತೆ ರಿಲೇಷನ್, ಪ್ರೀತಿ ಎಂದರೇ ಭಯಪಡುತ್ತಾರೆ. ಆದರೆ ಧೈರ್ಯವಾಗಿ ಮುಂದೆ ಸಾಗಿದರೇ ನಾವು ಕಳೆದುಕೊಂಡದ್ದನ್ನು ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.

ಇನ್ನೂ ಸತ್ಯದೀಪ್ ಮಿಶ್ರಾ ಎರಡನೇ ಮದುವೆಯಾಗಿದ್ದಾರೆ. ಆತ ಮಸಾಬಾ ಗುಪ್ತಾ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದಾರೆ. ಈ ವೇಳೆ ಆತ ಮಾತನಾಡಿದ್ದು, ಅದಿತಿ ರಾವ್ ಕುರಿತು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಕಳೆದ ಜ.27 ರಂದು ಈ ಜೋಡಿ ರಿಜಿಸ್ಟರ್‍ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಕಳೆದ 2009 ರಲ್ಲಿ ಅದಿತಿರಾವ್ ಹಾಗೂ ಸತ್ಯದೀಪ್ ರವರ ಮದುವೆ ನಡೆಯಿತು. 2013 ರಲ್ಲಿ ಇಬ್ಬರೂ ವಿಚ್ಚೇದನ ಪಡೆದುಕೊಂಡರು.

Most Popular

To Top