Film News

ದಿ ಕೇರಳ ಸ್ಟೋರಿ ಅಜೆಂಡಾ ಸಿನೆಮಾ ಅಲ್ಲ, ಎಲ್ಲರಿಗೂ ತಿಳಿಯಬೇಕಾದ ಸತ್ಯ ಎಂದ ಆದಾ ಶರ್ಮಾ……!

ಕಳೆದ ವರ್ಷ ಮಾರ್ಚ್ 11 ರಂದು ತೆರೆಗೆ ಬಂದ ಕಾಶ್ಮೀರಿ ಫೈಲ್ಸ್ ಸಿನೆಮಾ ಸಹ ಭಾರಿ ಸಂಚಲನ ಸೃಷ್ಟಿ ಮಾಡಿತ್ತು. ಈ ಸಿನೆಮಾ ಅನೇಕ ವಿವಾದಗಳನ್ನು ಸಹ ಸೃಷ್ಟಿ ಮಾಡಿತ್ತು. ಇದೀಗ ಮತ್ತೊಂದು ಸಿನೆಮಾ ಅದೇ ಮಾದರಿಯಲ್ಲಿ ಸದ್ದು ಮಾಡಲಿದೆ ಎಂದು ಹೇಳಲಾಗುತ್ತಿದೆ. ದಿ ಕೇರಳ ಸ್ಟೋರಿ ಎಂಬ ಸಿನೆಮಾ ಸಹ ಕಾಶ್ಮೀರಿ ಫೈಲ್ಸ್ ಸಿನೆಮಾದಂತೆ ಸದ್ದು ಮಾಡಲಿದೆ ಎಂದು ಹೇಳಲಾಗುತ್ತಿದೆ. ಈ ಸಿನೆಮಾ ಇದೀಗ ದೇಶವ್ಯಾಪಿ ಚರ್ಚೆಗಳಿಗೆ ಕಾರಣವಾಗಿದೆ. ಜೊತೆಗೆ ಕೆಲವೊಂದು ವಿವಾದಗಳನ್ನು ಸಹ ಹುಟ್ಟಿಹಾಕಿದ್ದು, ಇದೀಗ ಈ ಬಗ್ಗೆ ಈ ಸಿನೆಮಾದಲ್ಲಿ ನಟಿಸಿದ ಆದಾ ಶರ್ಮಾ ರಿಯಾಕ್ಟ್ ಆಗಿದ್ದಾರೆ.

ಕಾಶ್ಮೀರಿ ಪಂಡಿತರ ಮಾರಣಕಾಂಡದ ನೇಪಥ್ಯದಲ್ಲಿ ತೆರೆಗೆ ಬಂದ ಕಾಶ್ಮೀರಿ ಫೈಲ್ಸ್ ಸಿನೆಮಾ ಭಾರಿ ಸಂಚಲನ ಸೃಷ್ಟಿ ಮಾಡುವುದರ ಜೊತೆಗೆ ಅನೇಕ ವಿವಾದಗಳನ್ನು ಸಹ ಸೃಷ್ಟಿ ಮಾಡಿತ್ತು. ಇದೀಗ ದಿ ಕೇರಳ ಸ್ಟೋರಿ ಟ್ರೈಲರ್‍ ರಿಲೀಸ್ ಆಗಿದ್ದು, ಟ್ರೈಲರ್‍ ನೋಡಿದರೇ ಇದೂ ಸಹ ಮತ್ತೊಂದು ಕಾಶ್ಮೀರಿ ಫೈಲ್ಸ್ ಸಿನೆಮಾ ಮಾದರಿಯಲ್ಲೇ  ಆಗಲಿದೆ ಎಂದು ಹೇಳಲಾಗುತ್ತಿದೆ. ದಿ ಕೇರಳ ಸ್ಟೋರಿ ಮೇ.5 ರಂದು ಹಿಂದಿ ಭಾಷೆಯ ಜೊತೆಗೆ ತೆಲುಗು, ತಮಿಳು ಸೇರಿದಂತೆ ಮತಷ್ಟು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಇನ್ನು ಕೆಲವು ದಿನಗಳ ಹಿಂದೆಯಷ್ಟೆ ಈ ಸಿನೆಮಾದ ಟ್ರೈಲರ್‍ ಸಹ ಬಿಡುಗಡೆಯಾಗಿದ್ದು, ಈ ಟ್ರೈಲರ್‍ ಸಖತ್ ಸದ್ದು ಮಾಡಿತ್ತು. ಕೇರಳದ ಸುಮಾರು ಮೂವತ್ತೇರಡು ಮಹಿಳೆಯರು ಮಹಿಳಾ ಉಗ್ರವಾದಿಗಳಾಗಿ ಮುಸ್ಲೀಂ ಮತಕ್ಕೆ ಬಲವಂತವಾಗಿ ಮಂತಾಂತರ ಮಾಡುವ ಕಥೆಯನ್ನು ಆಧರಿಸಿ ಈ ಸಿನೆಮಾ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಇದೀಗ ಈ ಸಿನೆಮಾದ ಮೇಲೆ ದೊಡ್ಡ ಮಟ್ಟದ ವಿವಾದಗಳೇ ಸೃಷ್ಟಿಯಾಗಿದೆ. ಕೇರಳ ಸಿಎಂ ಪಿಣರಾಯಿ ವಿಜಯ್ ಜೊತೆಗೆ ಅನೇಕರು ಹಾಗೂ ಸಂಘ ಸಂಸ್ಥೆಗಳು ಈ ಸಿನೆಮಾದ ಬಗ್ಗೆ ವಿರೋಧವನ್ನು ವ್ಯಕ್ತಪಡಿಸುತ್ತಿವೆ.

ಇನ್ನೂ ಈ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವಂತಹ ಅದಾ ಶರ್ಮಾ ಈ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ತನ್ನ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಇದರಲ್ಲಿ ಅಭಿಮಾನಿಗಳಿಂದ ಬಂದಂತಹ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಇದೇ ವೇಳೆ ದಿ ಕೇರಳ ಸ್ಟೋರಿ ಸಿನೆಮಾದ ವಿವಾದದ ಬಗ್ಗೆ ಸಹ ಮಾತನಾಡಿದ್ದಾರೆ. ಈ ಸಿನೆಮಾ ಯಾವುದೇ ಧರ್ಮಕ್ಕೆ ವಿರೋಧ ವಾದುದು ಅಲ್ಲ. ಆದರೆ ಉಗ್ರವಾದ ಸಂಸ್ಥೆಗಳಿಗೆ ವಿರೋಧಿಯಾಗಿದೆ. ಮಹಿಳೆಯರನ್ನು ಮಾದಕ ವಸ್ತುಗಳಿಗೆ, ಬ್ರೈನ್ ವಾಷ್, ಅತ್ಯಾಚಾರಕ್ಕೆ ಗುರಿ ಮಾಡುವುದು, ಮಾನವ ಕಳ್ಳ ಸಾಕಾಣೆ, ಬಲವಂತವಾಗಿ ಗರ್ಭಿಣಿಯಾಗುವಂತೆ ಮಾಡುವುದು ಸೇರಿದಂತೆ ಮತಷ್ಟು ಅಂಶಗಳ ಮೇಲೆ ಈ ಸಿನೆಮಾ ನಡೆಯಲಿದೆ.

ಅಷ್ಟೇಅಲ್ಲದೇ ಈ ಸಿನೆಮಾದ ಯಾವುದೇ ರಾಜಕೀಯ ಅಜೆಂಡಾ ಅಲ್ಲ. ನಮ್ಮ ಸಿನೆಮಾ ಜೀವನ ಹಾಗೂ ಮರಣದ ಬಗ್ಗೆ ಇರುತ್ತದೆ. ಈ ಸಿನೆಮಾ ಎಲ್ಲಾ ಮತಗಳ, ವರ್ಗಗಳ, ಜಾತಿಗಳ ಹುಡುಗಿಯರಿಗೆ ಅವಗಾಹನೆ ಬರುವಂತೆ ಮಾಡುತ್ತದೆ ಎಂದು ನಂಬುತ್ತಿದ್ದೇವೆ. ಸಿನೆಮಾ ನೋಡಿದ ಬಳಿಕ ಅಂತಹವರ ಮೈಂಡ್ ಸೆಟ್ ಸಹ ಬದಲಾಗಲಿದೆ ಎಂದು ಹೇಳಿದ್ದು, ಆಕೆಯ ಹೇಳಿಕೆಗಳು ಇದೀಗ ಹಾಟ್ ಟಾಪಿಕ್ ಆಗಿದೆ.

Most Popular

To Top