ಮದುವೆಯ ಬಗ್ಗೆ ಕಾಮೆಂಟ್ ಮಾಡಿದ ನೆಟ್ಟಿಗನಿಗೆ ಪ್ಯೂಜ್ ಹೋಗುವಂತ ಉತ್ತರ ಕೊಟ್ಟ ಅದಾ ಶರ್ಮಾ…..!

Follow Us :

ಕೆಲವು ತಿಂಗಳುಗಳ ಹಿಂದೆಯಷ್ಟೆ ತೆರೆಕಂಡ ಕಾಶ್ಮೀರಿ ಫೈಲ್ಸ್ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡ ಆದಾ ಶರ್ಮಾ ಈ ಸಿನೆಮಾದ ಬಳಿಕ ಮತಷ್ಟು ಫೇಂ ಪಡೆದುಕೊಂಡಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಆಕ್ಟೀವ್ ಆಗಿರುತ್ತಾರೆ. ಈ ಹಾದಿಯಲ್ಲೇ ಆಕೆಯ ಮದುವೆಯ ಬಗ್ಗೆ ಕಾಮೆಂಟ್ ಮಾಡಿದ ನೆಟ್ಟಿಗನಿಗೆ ಮೈಂಡ್ ಬ್ಲಾಕ್ ಆಗುವಂತೆ ಕೌಂಟರ್‍ ಕೊಟ್ಟಿದ್ದಾರೆ. ಅಷ್ಟಕ್ಕೂ ಆಕೆ ಹೇಳಿದ್ದಾದರೂ ಏನು ಎಂಬ ವಿಚಾರಕ್ಕೆ ಬಂದರೇ,

1920 ಎಂಬ ಹಿಂದಿ ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು, ಕಡಿಮೆ ಸಮಯದಲ್ಲೇ ಸ್ಟಾರ್‍ ನಟರ ಜೊತೆ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಡೇರಿಂಗ್ ಡೈರೆಕ್ಟರ್‍ ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿಬಂದ ಹಾರ್ಟ್ ಅಟ್ಯಾಕ್ ಎಂಬ ಸಿನೆಮಾದ ಮೂಲಕ ತೆಲಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ತೆಲುಗಿನಲ್ಲೂ ಸಾಲು ಸಾಲು ಸಿನೆಮಾಗಳಲ್ಲಿ ನಟಿಸಿದರೂ ಸ್ಟಾರ್‍ ಡಂ ಪಡೆದುಕೊಳ್ಳಲು ವಿಫಲರಾದರು. ಅದರಲ್ಲೂ ಆಕೆ ಹೆಚ್ಚಾಗಿ ಸೆಕೆಂಡ್ ಹಿರೋಯಿನ್ ಪಾತ್ರಗಳಲ್ಲಿ ನಟಿಸಿದ್ದರು. ಇನ್ನೂ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಆಕ್ಟೀವ್ ಆಗಿದ್ದು, ಹಾಟ್ ಪೊಟೋಶೂಟ್ಸ್ ಮೂಲಕ ಫಾಲೋವರ್ಸ್‌ಗಳನ್ನು ರಂಜಿಸುತ್ತಿದ್ದರು. ಪ್ರತಿಯೊಂದು ಪೊಟೋದಲ್ಲೂ ಆಕೆ ವಿಭಿನ್ನವಾಗಿಯೇ ಕಾಣಿಸಿಕೊಳ್ಳುತ್ತಿದ್ದರು. ಸಿನೆಮಾಗಳಲ್ಲಿ ಸಕ್ಸಸ್ ಕಾಣದೇ ಇದ್ದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಆಕೆಯ ಸೌಂದರ್ಯಕ್ಕೆ ಫಿದಾ ಆಗಿದ್ದಾರೆ.

ಇನ್ನೂ ಅದಾ ಶರ್ಮಾ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಗಳು, ವಿಡಿಯೋಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಕೆಲವೊಂದು ಬ್ಯೂಟಿಪುಲ್ ಪೊಟೋಗಳನ್ನು ಹಂಚಿಕೊಂಡಿದ್ದರು. ಈ ಪೊಟೋಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗಿತ್ತು. ಅಭಿಮಾನಿಗಳು ಸೇರಿದಂತೆ ನೆಟ್ಟಿಗರು ಈ ಪೊಟೋಗಳಿಗೆ ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸಿದ್ದರು. ಅದರಲ್ಲೊಬ್ಬ ನೆಟ್ಟಿಗ ನೀವು ಎಂತಹ ಹುಡುಗನನ್ನು ಬಯಸುತ್ತಿದ್ದೀರಾ ಎಂದು ಮದುವೆ ಪ್ರಸ್ತಾವನೆಯನ್ನು ತಂದಿದ್ದಾನೆ. ಅದಕ್ಕೆ ಅದಾ ಶರ್ಮಾ ಸಹ ಮೈಂಡ್ ಬ್ಲಾಕ್ ಆಗುವಂತಹ ಉತ್ತರ ಕೊಟ್ಟಿದ್ದಾರೆ.  ನಾಲ್ಕು ಕಾಲುಗಳು, ಒಂದು ಬಾಲ ಇದ್ದರೇ ಚೆನ್ನಾಗಿರುತ್ತದೆ. ಅಂತಹ ಹುಡುಗ ನನಗೆ ಬೇಕು ಎಂದು ಆ ನೆಟ್ಟಿಗನ ಫ್ಯೂಜ್ ಹೋಗುವಂತೆ ಉತ್ತರಿಸಿದ್ದಾರೆ.

ಇನ್ನೂ ಈ ಕಾಮೆಂಟ್ ಇದೀಗ ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ನಟಿ ಅದಾ ಶರ್ಮಾ ಕೆರಿಯರ್‍ ಮುಗಿಯಿತು, ಆಕೆ ಸೋಷಿಯಲ್ ಮಿಡಿಯಾಗೆ ಸೀಮಿತರಾಗುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ದಿ ಕೇರಳ ಸ್ಟೋರಿ ಸಿನೆಮಾದ ಮೂಲಕ ಅದಾ ಶರ್ಮಾ ಮತ್ತೆ ಸಕ್ಸಸ್ ಕಂಡುಕೊಂಡರು. ಸದ್ಯ ಆಕೆ ಕೆಲವೊಂದು ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ.