ವಿಜಯ್ ದಳಪತಿ ಹೊಸ ಪಕ್ಷದ ಹೆಸರು ರಿವೀಲ್, ಹೊಸ ಪಕ್ಷದ ಹೆಸರು ತಮಿಳಗ ವೆಟ್ರಿ ಕಳಗಂ….!

ಸುಮಾರು ದಿನಗಳಿಂದ ಕಾಲಿವುಡ್ ಸ್ಟಾರ್‍ ನಟಿ ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಭಾರಿ ಸದ್ದು ಮಾಡಿತ್ತು. ಜೊತೆಗೆ ಹೊಸ ಪಕ್ಷ ಕಟ್ಟುತ್ತಿರುವುದಾಗಿ, ಅದರ ಹೆಸರು ಸಹ ಶೀಘ್ರದಲ್ಲೇ ಹೊರಬೀಳುವುದಾಗಿ ಸುದ್ದಿ ಕೇಳಿಬಂದಿತ್ತು. ಇದೀಗ ತಮ್ಮ ಹೊಸ ಪಕ್ಷಕ್ಕೆ ತಮಿಳಗ ವೆಟ್ರಿ ಕಳಗಂ ನಾಮಕರಣ ಮಾಡಿದ್ದಾರೆ. ಹೊಸ ಪಕ್ಷ ಘೋಷಣೆಯಾಗುತ್ತಿದ್ದಂತೆ ತಮಿಳುನಾಡು ರಾಜಕೀಯದಲ್ಲಿ ಹೊಸ ತಿರುವು ಪಡೆದುಕೊಳ್ಳಲಿದೆ ಎಂದು ಹೇಳಲಾಗಿದೆ.

ಕಾಲಿವುಡ್ ಸೂಪರ್‍ ಸ್ಟಾರ್‍ ದಳಪತಿ ವಿಜಯ್ ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಭಾರಿ ಫೇಂ ಪಡೆದುಕೊಂಡಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ತಮಿಳುನಾಡಿನಲ್ಲಿ 2026 ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಚುನಾವಣೆಯಲ್ಲಿ ವಿಜಯ್ ದಳಪತಿಯವರ ಹೊಸ ಪಕ್ಷ ಸ್ಪರ್ಧೆ ಮಾಡಲಿದೆ. ತಮಿಳಗ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷರಾಗಿ ವಿಜಯ್ ರವರನ್ನು ಆಯ್ಕೆ ಮಾಡಲಾಗಿದೆ. ಚುನಾವಣಾ ಆಯೋಗದಲ್ಲಿ ಹೊಸ ಪಕ್ಷದ ಹೆಸರನ್ನು ಸಹ ನೊಂದಣಿ ಮಾಡಲಾಗಿದೆ. ಸುಮಾರು 200 ಮಂದಿ ಸದಸ್ಯರು ಪಕ್ಷದ ಸಾಮಾನ್ಯ ಮಂಡಳಿ ಸಭೆಯಲ್ಲಿ ಭಾಗವಹಿಸಿದ್ದು, ಕೆಲವೊಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಇನ್ನೂ ಚುನಾವಣೆಯ ಕಾರಣದಿಂದ ವಿಜಯ್ ಒಪ್ಪಿಕೊಂಡಂತಹ ಸಿನೆಮಾಗಳನ್ನು ಸಹ ಪೂರ್ಣಗೊಳಿಸುತ್ತಿದ್ದಾರಂತೆ. ಬಳಿಕ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡು ಸಕ್ರೀಯವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜಕೀಯವಾಗಿ ಸ್ಥಿರಗೊಂಡ ಬಳಿಕ ಮತ್ತೆ ಸಿನೆಮಾಗಳಲ್ಲಿ ನಟಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ತನ್ನ ಪಕ್ಷದ ಕೆಲಸಗಳನ್ನು ಸಹ ತ್ವರಿತವಾಗಿ ಪೂರ್ಣಗೊಳಿಸುತ್ತಿದ್ದಾರೆ. ಇನ್ನೂ ದಳಪತಿ ವಿಜಯ್ ಕೈಯಲ್ಲಿ ಎರಡುಮೂರು ದೊಡ್ಡ ಸಿನೆಮಾಗಲಿವೆ. ನಿರ್ಮಾಪಕ ಡಿವಿವಿ ದಾನಯ್ಯ ಜೊತೆಗೂ ಸಹ ವಿಜಯ್ ಸಿನೆಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನೆಮಾ ರಾಜಕೀಯ ವಲಯಕ್ಕೆ ಸಂಬಂಧಿಸಿದ ಸಿನೆಮಾ ಆಗಲಿದ್ದು, ಈ ಸಿನೆಮಾದ ಬಳಿಕ ವಿಜಯ್ ಸಿನೆಮಾಗಳಿಂದ ದೂರ ಉಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.