ಮೇಲುಕೋಟೆ ಅತಿಥಿ ಶಿಕ್ಷಕಿ ಕೊಲೆ ಪ್ರಕರಣದ ಬಗ್ಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಮಂಡ್ಯ ಎಸ್.ಪಿ, ಅಕ್ಕ ಎಂದವನೇ ಕೊಲೆ ಮಾಡಿದ್ನಾ…..!

Follow Us :

ಕಳೆದೆರಡು ದಿನಗಳ ಹಿಂದೆಯಷ್ಟೆ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಅತಿಥಿ ಶಿಕ್ಷಕಿ ದೀಪಿಕಾ ಹತ್ಯೆಯಾಗಿದ್ದು, ಈ ಪ್ರಕರಣದ ನಾಪತ್ತೆಯಾಗಿದ್ದ ನಿತೇಶ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತನನ್ನು ವಿಚಾರಣೆ ನಡೆಸಿದ ಪೊಲೀಸರು ಅಸಲೀ ಸತ್ಯವನ್ನು ಹೊರತೆಗೆದಿದ್ದಾರೆ. ಅಕ್ಕ ಅಕ್ಕ ಎಂದು ಹೇಳಿಕೊಂಡು ದೀಪಿಕಾಳೊಂದಿಗೆ ಸಂಬಂಧ ಇಟ್ಟುಕೊಂಡಿದ್ದ, ಇಬ್ಬರ ನಡುವೆ ನಡೆದ ಜಗಳದ ಕಾರಣದಿಂದ ಆತ ದೀಪಿಕಾಳನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಶಿಕ್ಷಕಿ ದೀಪಿಕಾ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಿತೇಶ್ ಸುಮಾರು 2 ವರ್ಷಗಳಿಂದ ಆಕೆಯೊಂದಿಗೆ ಪರಿಚಯ ಇಟ್ಟುಕೊಂಡಿದ್ದನಂತೆ. ಅಕ್ಕ ಅಕ್ಕ ಎನ್ನುತ್ತಾ ಆಕೆಯೊಂದಿಗೆ ಸಂಬಂಧ ಹೊಂದಿದ್ದನಂತೆ. ಈ ವಿಚಾರ ಗ್ರಾಮಸ್ಥರಿಗೆ ಗೊತ್ತಾಗಿದ ಬಳಿಕ ನಿತೀಶ್ ನಿಂದ ದೀಪಿಕಾ ಅಂತರ ಕಾಯ್ದುಕೊಂಡಿದ್ದಾರೆ. ಕಳೆದೆರಡು ದಿನಗಳ ಹಿಂದೆ ಹುಟ್ಟುಹಬ್ಬ ಇದೆ ಎಂದು ಬೆಟ್ಟದ ತಪ್ಪಲಿಗೆ ಬರುವಂತೆ ದಿಪೀಕಾಗೆ ನಿತೇಶ್ ಹೇಳಿದ್ದಾನೆ. ಬಳಿಕ ಅಲ್ಲಿ ಜಗಳ ತೆಗೆದು ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ಇನ್ನೂ ಈ ಕುರಿತು ಮಂಡ್ಯ ಎಸ್.ಪಿ.ಯತೀಶ್ ಮಾಹಿತಿ ನೀಡಿದ್ದು, ಆರೋಪಿ ಆಕೆಯನ್ನು ಕೊಲೆ ಮಾಡಲೆಂದೇ ಹುಟ್ಟುಹಬ್ಬ ಎಂದು ಕರೆದಿದ್ದಾನೆ. ಮೊದಲೆ ಗುಂಡಿ ತೋಡಿ ಸಿದ್ದ ಮಾಡಿಕೊಂಡಿದ್ದನಂತೆ. ಈ ಇಬ್ಬರ ನಡುವೆ ಸುಮಾರು ದಿನಗಳಿಂದ ಸ್ನೇಹ ಇತ್ತು. ಇಬ್ಬರೂ ಆಗಾಗ ಪೋನ್ ಮೂಲಕ ಮಾತನಾಡಿಕೊಳ್ಳುವುದು, ಮೆಸೇಜ್ ಮಾಡಿಕೊಳ್ಳುವುದು, ಆಗಾಗ ಭೇಟಿ ಮಾಡುವುದು ಆಗುತ್ತಿತ್ತು. ಆಕೆ ಕರೆದಾಗ ನಿತೇಶ್ ಹೋಗಬೇಕಿತ್ತಂತೆ. ಆದರೆ ನಿತೇಶ್ ಕರೆದಾಗ ಆಕೆ ಹೋಗುತ್ತಿರಲಿಲ್ಲವಂತೆ. ಈ ಕಾರಣದಿಂದಲೇ ಆಕೆಯನ್ನು ಕೊಲೆ ಮಾಡಿದ್ದಾಗಿ ಆರೋಪಿ ನಿತೇಶ್ ಒಪ್ಪಿಕೊಂಡಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. ಇನ್ನೂ ಆರೋಪಿಯ ಹುಟ್ಟುಹಬ್ಬ ಒಂದು ವಾರದ ಹಿಂದೆಯಿತ್ತು. ಒಂದು ವಾರದ ನಂತರ ಆಕೆಯನ್ನು ಕರೆಸಿ ಕೊಲೆ ಮಾಡಿದ್ದಾನೆ. ಅಂದು ಬಸ್ ನಲ್ಲಿ ಹೋಗಿದ್ದ ಶಿಕ್ಷಕಿ ಸ್ಕೂಟರ್‍ ನಲ್ಲಿ ಏಕೆ ಹೋದಳು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಇಬ್ಬರ ನಡುವೆ ಅಕ್ರಮ ಸಂಬಂಧ ಬಗ್ಗೆ ಇನ್ನೂ ನಿಖರ ಮಾಹಿತಿ ಸಿಗಬೇಕಿದೆ ಎಂದು ವಿವರಿಸಿದ್ದಾರೆ.