News

ಕರ್ತವ್ಯ ನಿಷ್ಠೆಯ ಜೊತೆಗೆ ಮಾನವೀಯತೆ ಮೆರೆದ ಶುಶ್ರೂಷಕಿ, ಎಲ್ಲರಿಂದ ಮೆಚ್ಚುಗೆ…….!

ಕಳೆದ ಭಾನುವಾರ ರಾತ್ರಿ ಸುಮಾರು 7.30 ರ ಸಮಯದಲ್ಲಿ ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನ ಎನ್.ಹೆಚ್-44 ಚೆಂಡೂರು ಕ್ರಾಸ್ ಬಳಿ ಬಾಗೇಪಲ್ಲಿ ಕಡೆಗೆ ಸಂಚರಿಸುತ್ತಿದ್ದ ವಾಹನ ಸವಾರರೊಬ್ಬರು ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಬಿದ್ದು ಅಸ್ವಸ್ಥಗೊಂಡಿದ್ದು, ಆತನನ್ನು ಸ್ಥಳೀಯರು 108 ಅಂಬ್ಯುಲೆನ್ಸ್ ಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ 108 ಸಿಬ್ಬಂದಿ ಆತನನ್ನು ಜಾಗರೂಕತೆಯಿಂದ ಬಾಗೇಪಲ್ಲಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ 108 ತುರ್ತು ವೈದ್ಯಕೀಯ ಸಿಬ್ಬಂದಿಯಾದ ತಂತ್ರಜ್ಞೆ ಅಮೃತ ಮತ್ತು ಚಾಲಕ ಸೋಮಲಿಂಗಪ್ಪ ರವರುಗಳ ಸಮಯ ಪ್ರಜ್ಞೆ ವಾಹನ ಸವಾರ ಸಮೀವುಲ್ಲಾ ರವರ ಪ್ರಾಣ ಕಾಪಾಡಿದೆ. ಇನ್ನೂ ವಾಹನ ಸವಾರ ಸಮಿವುಲ್ಲಾ ಮೂಲತಃ ಹಿಂದೂಪುರದ ನಿವಾಸಿಯಾಗಿದ್ದು ಚೆಂಡೂರಿನ ಕಡೆ ರೇಷ್ಮೇ ವ್ಯಾಪಾರಕ್ಕಾಗಿ ಬಂದಿದ್ದ ಎನ್ನಲಾಗಿದೆ. ಭಾನುವಾರ ಸಂಜೆ ರಾಷ್ಟ್ರೀಯ ಹೆದ್ದಾರಿ ಬಳಿ ಅಸ್ವಸ್ಥರಾಗಿ ಬಿದ್ದಿದ್ದ ಸಮೀವುಲ್ಲಾ ರವರನ್ನು 108 ಸಿಬ್ಬಂದಿ ಪ್ರಾಣ ಕಾಪಾಡಿದ್ದಾರೆ. ಈ ವೇಳೆ ಸಮೀವುಲ್ಲಾ ಅವರೊಂದಿಗೆ ಯಾರೂ ಇರಲಿಲ್ಲ. ಈ ವೇಳೆ ಸವಾರನ ಜೇಬಿನಲ್ಲಿದ್ದ 20 ಸಾವಿರ ಮೊತ್ತವನ್ನು ಹಿಂದಿರುಗಿಸಿದ್ದಾರೆ. ಕರ್ತವ್ಯ ನಿಷ್ಟೆಯ ಜೊತೆಗೆ ಮಾನವೀಯತೆ ಮೆರೆದಂತಹ 108 ಸಿಬ್ಬಂದಿಯಾದ ಅಮೃತ ಹಾಗೂ ಚಾಲಕ ಸೋಮಲಿಂಗಪ್ಪ ರವರನ್ನು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Most Popular

To Top