News

ತನ್ನ ಮಗುವಿಗೆ ರಾಮ ರಹೀಮ ಎಂದು ಹೆಸರಿಟ್ಟ ಮುಸ್ಲೀಂ ಮಹಿಳೆ, ಭಾವೈಕ್ಯತೆ ಮೆರೆದ ರಾಮಮಂದಿರ…..!

ದೇಶದ ಕೋಟ್ಯಂತರ ಹಿಂದೂಗಳ ಕನಸು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ. ಇದೀಗ ಆ ಕನಸು ನನಸಾಗಿದೆ. ಶ್ರೀರಾಮ ಪ್ರಭು ಜನಿಸಿದ ಅಯೋಧ್ಯೆಯಲ್ಲಿಯೇ ಭವ್ಯ ರಾಮಮಂದಿರ ನಿರ್ಮಾಣ ಮಾಡಿದ್ದು, ರಾಮಲಲ್ಲಾ ಪ್ರಾಣ ಪ್ರತಿಷ್ಟಾಪನೆ ಸಹ ಆಗಿದೆ. ಈ ಧಾರ್ಮಿಕ ಕಾರ್ಯಕ್ರಮಲ್ಲಿ ಹಿಂದೂಗಳು ಮಾತ್ರವಲ್ಲದೇ, ಮುಸ್ಲೀಂ, ಸಿಖ್, ಕ್ರಿಶ್ಚಿಯನ್, ಜೈನ ಹಾಗೂ ಬೌಧ ಸೇರಿದಂತೆ ಹಲವು ಧರ್ಮಗಳ ಪ್ರಮುಖರು ಸಹ ಭಾಗಿಯಾಗಿದ್ದರು. ಜ.22 ರಂದೇ ಅನೇಕ ಮಹಿಳೆಯರು ಮಕ್ಕಳಿಗೆ ಜನ್ಮ ಕೊಟ್ಟಿದ್ದಾರೆ. ಆ ಮಕ್ಕಳಿಗೆ ರಾಮ, ಸೀತೆ ಎಂಬ ಹೆಸರುಗಳನ್ನು ಸಹ ಇಟ್ಟಿದ್ದಾರೆ. ಅದರಲ್ಲೂ ಮುಸ್ಲೀಂ ಮಹಿಳೆಯೊಬ್ಬರು ತಮ್ಮ ಮಗುವಿಗೆ ರಾಮ ರಹೀಮ್ ಎಂದು ಹೆಸರಿಡುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.

ಉತ್ತರ ಪ್ರದೇಶದ ಫಿರೋಜಾಬಾದ್ ನಲ್ಲಿ ಮುಸ್ಲಿಂ ಮಹಿಳೆ ಎಂಬಾಕೆ ಗಂಡು ಮಗುವಿಗೆ ಜ.22 ರಂದು ರಾಮಲಲ್ಲಾ ಪ್ರಾಣ ಪ್ರತಿಷ್ಟಾಪನೆ ದಿನದಂದೇ ಜನ್ಮ ಕೊಟ್ಟರು. ಅನೇಕ ಮಹಿಳೆಯರು ಇದೇ ದಿನ ತಮ್ಮ ಮಗುವಿಗೆ ಜನ್ಮ ನೀಡಬೇಕೆಂದು ಕಾಯುತ್ತಿದ್ದರು. ಜ.22 ರಂದು ಜನಿಸಿದ ಅನೇಕ ಮಕ್ಕಳಿಗೆ ರಾಮ, ಸೀತೆ ಎಂಬ ಹೆಸರುಗಳನ್ನು ಸಹ ಇಟ್ಟಿದ್ದಾರೆ. ಆದರೆ ಈ ಮುಸ್ಲಿಂ ಮಹಿಳೆ ತನ್ನ ಮಗನಿಗೆ ರಾಮ್ ರಹೀಮ್ ಎಂದು ಹೆಸರಿಡುವ ಮೂಲಕ ಧರ್ಮ ಸಮನ್ವಯತೆ ಸಾರಿದ್ದಾಳೆ. ಈ ಮುಸ್ಲಿಂ ಕುಟುಂಬದ ಹಿರಿಯಳಾದ ಹುಸ್ನಾ ಭಾನು ಎಂಬುವವರು ರಾಮ ರಹೀಮ ಎಂಬ ಹೆಸರಿಡುವಂತೆ ಸಲಹೆ ನೀಡಿದ್ದರಂತೆ. ಅದಕ್ಕೆ ಇಡೀ ಕುಟುಂಬ ಸಹ ಒಪ್ಪಿಗೆ ನೀಡಿದ್ದರಂತೆ. ಕುಟುಂಬಸ್ಥರ ಸಮ್ಮತಿಯ ಮೇರೆಗೆ ರಾಮ ರಹೀಮ ಎಂದು ಹೆಸರನ್ನಿಟ್ಟು ಭಾವೈಕ್ಯತೆಗೆ ಹೊಸ ಭಾಷ್ಯ ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಪರ ವಿರೋಧದ ನಡುವೆ ಅಯೋಧ್ಯೆಯಲ್ಲಿ ಜ.22 ರಂದು ರಾಮಮಂದಿರ ಉದ್ಘಾಟನೆಯಾಗಿದ್ದು, ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನಾ ಕಾರ್ಯ ಸಹ ನಡೆದಿದೆ. ಈ ದೈವಿಕ ಕಾರ್ಯಕ್ಕೆ ದೇಶದ ಮೂಲೆ ಮೂಲೆಗಳಿಂದ ಸಾಧು ಸಂತರು, ಸಿನಿರಂಗದ ಗಣ್ಯರು, ಕ್ರೀಡಾಪಟುಗಳು ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಇದೇ ದಿನ ಮಗುವಿಗೆ ಜನ್ಮ ನೀಡಬೇಕೆಂದು ಅನೇಕ ಜೋಡಿಗಳೂ ಸಹ ಕಾದಿದ್ದರು ಎಂದು ಹೇಳಲಾಗಿದೆ. ಈ ಸಮಯದಲ್ಲಿ ಜನಿಸಿದ ಗಂಡು ಮಗುವಿಗೆ ರಾಮ ಎಂತಲೂ, ಹೆಣ್ಣು ಮಗುವಿಗೆ ಸೀತೆ ಎಂತಲೂ ಹೆಸರನ್ನಿಟ್ಟಿದ್ದಾರೆ.

Most Popular

To Top