ಸೌತ್ ಸಿನಿರಂಗದ ಖ್ಯಾತ ಗಾಯಕಿ ಸುನಿತ ಸ್ಟಾರ್ ನಟಿಯರಂತೆ ದೊಡ್ಡ ಅಭಿಮಾನಿ ಬಳಗ ಸಹ ಇದೆ. ಹಾಡುಗಳನ್ನು ಹಾಡುವ ಮೂಲಕ ಹಾಗೂ ಕೆಲವು ಸಿನೆಮಾಗಳಿಗೆ ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಸಹ ಕೆಲಸ ಮಾಡಿದ್ದಾರೆ. ಆಕೆ ಕಳೆದ 2021ರಲ್ಲಿ ರಾಮ್ ವೀರಪನೇನಿ ಎಂಬಾತನೊಂದಿಗೆ ಎರಡನೇ ಮದುವೆಯಾದರು. ಇದೀಗ ಆಕೆಯ ಪುತ್ರ ಆಕಾಶ್ ತಾಯಿಯ ಎರಡನೇ ಮದುವೆ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದು, ಆತನ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
ಸಿಂಗರ್ ಸುನಿತಾ ರವರ ಪುತ್ರ ಆಕಾಶ್ ಸರ್ಕಾರು ನೌಕರಿ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಹಿರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ಸಿನೆಮಾ ಜ.1 ರಂದು ತೆರೆಕಂಡಿದ್ದು, ಪಾಸಿಟೀವ್ ಟಾಕ್ ಪಡೆದುಕೊಂಡಿದೆ. ಈ ಸಿನೆಮಾದಲ್ಲಿನ ಆಕಾಶ್ ನಟನಗೆ ಪ್ರಶಂಸೆ ಸಹ ದೊರೆತಿದೆ. ಇನ್ನೂ ಈ ಸಿನೆಮಾದ ಪ್ರಮೋಷನ್ ನಲ್ಲಿ ಭಾಗಿಯಾಗುತ್ತಿರುವ ಆಕಾಶ್ ತನ್ನ ತಾಯಿಯ ಎರಡನೇ ಮದುವೆಯ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಸಿನಿರಂಗದಲ್ಲಿ ತುಂಬಾನೆ ಕಾಂಪಿಟೇಷನ್ ಇರುತ್ತದೆ. ಅದರಲ್ಲೂ ಮಹಿಳಾ ಕಲಾವಿದರು ತುಂಬಾನೆ ಒತ್ತಡಕ್ಕೆ ಗುರಿಯಾಗುತ್ತಿರುತ್ತಾರೆ. ನಮ್ಮ ತಾಯಿ ಸಹ ಅಂತಹ ಒತ್ತಡಗಳನ್ನು ಭರಿಸುತ್ತಾ ನನ್ನನ್ನು, ತಂಗಿಯನ್ನು ಹಾಗೂ ತಾತನನ್ನು ನೋಡಿಕೊಂಡರು. ನಾವು ಎಲ್ಲರೂ ಒಟ್ಟಿಗೆ ಇದ್ದೆವು. ಎರಡನೇ ಮದುವೆಯಾದ ಬಳಿಕ ನನ್ನ ತಂದೆ ಮನೆಗೆ ಬರುತ್ತಿರುತ್ತಾರೆ. ರಾಮ್ ವೀರಪನೇನಿ (ಸುನಿತಾ ಎರಡನೇ ಪತಿ) ಜೊತೆಗೆ ಅವರು ಫ್ರೆಂಡ್ಲಿಯಾಗಿರುತ್ತಾರೆ. ಕೋಪ, ಹಗೆ ಎಲ್ಲವನ್ನೂ ಬಿಟ್ಟು ಪ್ರಶಾಂತವಾಗಿದ್ದೆವೆ ಎಂದಿದ್ದಾರೆ.
ಇನ್ನೂ ಅಮ್ಮ ಎರಡನೇ ಮದುವೆಯಾಗುವ ವಿಚಾರದಲ್ಲಿ ತುಂಬಾನೆ ಭಯಪಟ್ಟಿದ್ದರು. ಮಕ್ಕಳು ಹೇಗೆ ಅರ್ಥ ಮಾಡಿಕೊಳ್ಳುತ್ತಾರೆ ಎಂದು ತುಂಬಾನೆ ಆತಂಕಕ್ಕೆ ಗುರಿಯಾಗಿದ್ದರು. ರಾಮ್ ಪೋತುನೇನಿ ಅಂದರೇ ನಿಮಗೆ ಇಷ್ಟಾನ ಎಂದು ತಾಯಿಗೆ ಕೇಳಿದ್ದೆ. ಅದಕ್ಕೆ ಅಮ್ಮ ಇಷ್ಟ ಎಂದು ಹೇಳಿದ್ದರು. ನಮ್ಮ ತಾಯಿ ಸುಮಾರು ದಿನಗಳ ಕಾಲ ಎಮೋಷನಲ್ ಸಪೋರ್ಟ್ ಸಹ ಮಿಸ್ ಆಗಿದ್ದರು. ಆಕೆಯ ಸಂತೋಷ ನಮಗೆ ಮುಖ್ಯ ಎಂದು ಆಕಾಶ್ ಕಾಮೆಂಟ್ ಮಾಡಿದ್ದಾರೆ. ಇನ್ನೂ ಆಕಾಶ್ ನೀಡಿದ ಕಾಮೆಂಟ್ ಗಳು ಇದೀಗ ಸಖತ್ ವೈರಲ್ ಆಗುತ್ತಿವೆ. ಅನೇಕರು ತಮ್ಮದೇ ಆದ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಿದ್ದಾರೆ. ರಾಮ್ ಪೋತುನೇನಿ ರವರಿಗೆ ಸಿಂಗರ್ ಸುನಿತಾ ಮೊದಲ ಪತ್ನಿಯೊಂದಿಗೆ ಪರಿಚಯವಿದ್ದು, ಇಬ್ಬರೂ ಸ್ನೇಹಿತರಾಗಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬಹುದಾಗಿದೆ.