ಬಾಲಿವುಡ್ ನಲ್ಲಿ ಕ್ರೇಜಿ ಲವ್ ಬರ್ಡ್ಸ್ ಎಂತಲೇ ಕರೆಯಲಾಗುವ ಸ್ಟಾರ್ ನಟ ಸಿದ್ದಾರ್ಥ್ ಮೆಲ್ಹೋತ್ರಾ ಹಾಗೂ ನಟಿ ಕಿಯಾರಾ ಅಡ್ವಾನಿ ಸುಮಾರು ವರ್ಷಗಳಿಂದ ಪ್ರೇಮ ಪಯಣ ಸಾಗಿಸಿ ಫೆ.7 ರಂದು ರಾಜಸ್ಥಾನದ ಜೈಸಲ್ಮೇರ್ ನಲ್ಲಿನ ಸೂರ್ಯ ಘರ್ ಪ್ಯಾಲೆಸ್ ನಲ್ಲಿ ಅದ್ದೂರಿಯಾಗಿ ನಡೆದಿದೆ. ಇನ್ನೂ ಈ ಜೋಡಿಯ ರಿಸೆಪ್ಷನ್ ಸಹ ಅದ್ದೂರಿಯಾಗಿ ನೆರವೇರಿದ್ದು, ಮದುವೆ ಹಾಗೂ ರಿಸೆಪ್ಷನ್ ಗೆ ಸಂಬಂಧಿಸಿದ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದೀಗ ಕಿಯಾರಾ ಮದುವೆಗೂ ಮುಂಚೆ ಗರ್ಭಿಣಿಯಾಗಿದ್ದಾರೆ ಈ ಕಾರಣದಿಂದಲೇ ಆಕೆ ತ್ವರಿತವಾಗಿ ಮದುವೆಯಾದರು ಎಂಬ ಟ್ವೀಟ್ ಒಂದು ಸಖತ್ ಸದ್ದು ಮಾಡುತ್ತಿದೆ.
ಬಾಲಿವುಡ್ ನ ವಿವಾದಾತ್ಮಕ ಕ್ರಿಟಿಕ್ ಕಮಲ್ ಆರ್ ಖಾನ್ ಅಲಿಯಾಸ್ ಕೆ.ಆರ್.ಕೆ ನಟಿ ಕಿಯಾರಾ ಕುರಿತು ಸಂಚಲನಾತ್ಮಕ ಟ್ವೀಟ್ ಮಾಡಿದ್ದಾರೆ. ಮದುವೆಗೂ ಮುಂಚೆಯೆ ಕಿಯಾರಾ ಗರ್ಭಿಣಿಯಾಗಿದ್ದಾರೆ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ. ಬಾಲಿವುಡ್ ನಲ್ಲಿ ಹೊಸ ಟ್ರೆಂಡ್ ಶುರುವಾಗಿ ಎಂದು ಕಾಮೆಂಟ್ ಮಾಡಿದ್ದಾರೆ. ಕೆಆರ್ ಕೆ ಪರೋಕ್ಷವಾಗಿ ಟ್ವೀಟ್ ಮಾಡಿದ್ದಾರೆ. ಬಾಲಿವುಡ್ ನಲ್ಲಿ ಹೊಸದಾಗಿ ಮದುವೆಯಾದ ಜೋಡಿ ಎಂದು ಹೇಳಿದ್ದಾರೆ. ಈ ಹಿಂದೆ ಸಹ ಆಲಿಯಾ ಭಟ್ ಸಹ ಗರ್ಭಿಣಿಯಾದ ಬಳಿಕವೇ ಮದುವೆಯಾದರು. ಮೊನ್ನೆ ಆಲಿಯಾ, ಈಗ ಕಿಯಾರಾ ಗರ್ಭಿಣಿಯಾಗಿದ್ದಾರೆ ಎಂದು ಇದು ಲೇಟೆಸ್ಟ್ ಟ್ರೆಂಡ್ ಎಂದು ಸೈಟೈರ್ಸ್ ಹಾಕಿದ್ದಾರೆ. ಸದ್ಯ ಕೆ.ಆರ್.ಕೆ ಈ ಟ್ವೀಟ್ ಬಾಲಿವುಡ್ ನಲ್ಲಿ ಹಾಟ್ ಟಾಪಿಕ್ ಆಗಿದೆ. ಇನ್ನೂ ಕೆ.ಆರ್.ಕೆ ಮಾಡಿರುವಂತಹ ಆರೋಪಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
ಇನ್ನೂ ಕಿಯಾರಾ ಹಾಗೂ ಸಿದ್ದಾರ್ಥ್ ಸುಮಾರು ಐದು ವರ್ಷಗಳಿಂದ ಪ್ರೇಮಪಯಣ ಸಾಗಿಸಿ, ಅನೇಕ ವೆಕೇಷನ್ ಗಳಿಗೂ ಸಹ ಹೋಗಿದ್ದರು. ಲವ್ ಸ್ಟೋರಿಸ್ ಎಂಬ ಸೀರಿಸ್ ಸಮಯದಲ್ಲಿ ಕಿಯಾರಾ ಹಾಗೂ ಸಿದ್ದಾರ್ಥ್ ಮೊದಲ ಬಾರಿಗೆ ಭೇಟಿಯಾದರು. ಬಳಿಕ ಷೇರ್ಷಾ ಸಿನೆಮಾದ ಬಳಿಕ ಅವರಿಬ್ಬರ ನಡುವೆ ಪ್ರೇಮಾಂಕುರ ಆಗಿದ್ದು, ಅಂದಿನಿಂದ ಅವರ ಪ್ರೇಮ ಪಯಣ ಸಾಗಿತ್ತು. ಆದರೆ ಈ ಜೋಡಿ ಎಂದೂ ಸಹ ತಮ್ಮ ಪ್ರೀತಿಯ ಬಗ್ಗೆ ಅಧಿಕೃತವಾಗಿ ಪ್ರಕಟನೆ ಮಾಡಿರಲಿಲ್ಲ. ಅನೇಕ ಬಾರಿ ಅವರ ಕುರಿತು ಏರ್ಪಟ್ಟ ಸುದ್ದಿಗಳನ್ನು ಸಹ ಖಂಡಿಸುತ್ತಾ ಬಂದರು. ಆದರೆ ಫೆ.7 ರಂದು ಕುಟುಂಬಸ್ಥರು ಹಾಗೂ ಬಂಧುಮಿತ್ರರ ಸಮ್ಮುಖದಲ್ಲಿ ಮದುವೆಯಾದರು. ಇನ್ನೂ ಅವರ ಮದುವೆ ಅದ್ದೂರಿಯಾಗಿ ನಡೆದಿದ್ದು, ಆ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಇನ್ನೂ ಈ ಜೋಡಿಯ ಮದುವೆಯ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇನ್ನೂ ಮದುವೆಗೆ ಎಲ್ಲರನ್ನೂ ಆಹ್ವಾನಿಸಿರಲಿಲ್ಲ. ಈ ಕಾರಣದಿಂದ ಮುಂಬೈನಲ್ಲಿ ಅದ್ದೂರಿಯಾಗಿ ರಿಸೆಪ್ಷನ್ ಸಹ ಸಿದ್ದಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ದೊಡ್ಡ ದೊಡ್ಡ ಸಿನೆಮಾ ಸ್ಟಾರ್ ಗಳೂ ಸೇರಿದಂತೆ ಅನೇಕರು ಹಾಜರಾಗಿದ್ದರು.