Film News

ಅದ್ದೂರಿಯಾಗಿ ನಡೆದ ಕಿಯಾರಾ-ಸಿದ್ದಾರ್ಥ್ ಮದುವೆ, ವೈರಲ್ ಆದ ಪೊಟೋಗಳು…!

ಬಾಲಿವುಡ್ ನಲ್ಲಿ ಕ್ರೇಜಿ ಲವ್ ಬರ್ಡ್ಸ್ ಎಂತಲೇ ಕರೆಯಲಾಗುವ ಸ್ಟಾರ್‍ ನಟ ಸಿದ್ದಾರ್ಥ್ ಮೆಲ್ಹೋತ್ರಾ ಹಾಗೂ ನಟಿ ಕಿಯಾರಾ ಅಡ್ವಾನಿ ಸುಮಾರು ವರ್ಷಗಳಿಂದ ಪ್ರೇಮ ಪಯಣ ಸಾಗಿಸುತ್ತಿದ್ದಾರೆ. ವೆಕೇಷನ್ ಗಳಿಗೆ ಹಾರುತ್ತಾ ಮತಷ್ಟು ಹಾಟ್ ಟಾಪಿಕ್ ಆಗುತ್ತಿರುತ್ತಾರೆ. ಆದರೆ ಈ ಇಬ್ಬರೂ ಎಂದಿಗೂ ಸಹ ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡಿಲ್ಲ. ಕೆಲವೊಂದು ಸಮಯದಲ್ಲಿ ಅವರು ಬೇರೆಯಾಗುತ್ತಿದ್ದಾರೆ ಸುದ್ದಿ ಸಹ ಹರಿದಾಡಿತ್ತು. ಇದೀಗ ಅವರ ಮದುವೆ ಅದ್ದೂರಿಯಾಗಿ ನಡೆದಿದ್ದು, ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಜೊತೆಗ ಅಭಿಮಾನಿಗಳು ಸೇರಿದಂತೆ ಸಿನೆಮಾ ಸೆಲೆಬ್ರೆಟಿಗಳು ಶುಭಾಷಯಗಳನ್ನು ಕೋರುತ್ತಿದ್ದಾರೆ.

ಸುಮಾರು ದಿನಗಳ ಕಾಲ ಕಿಯಾರಾ ಹಾಗೂ ಸಿದ್ದಾರ್ಥ್ ಪ್ರೇಮ ಪಯಣ ಸಾಗಿಸುತ್ತಿದ್ದರು. ಅವರು ಜಂಟಿಯಾಗಿ ಸುಮಾರು ಪ್ರದೇಶಗಳಲ್ಲಿ ಕಾಣಿಸಿಕೊಂಡರು. ಈ ವೇಳೆ ಅನೇಕರು ಪ್ರೀತಿಯ ಬಗ್ಗೆ ಕೇಳಿದರೇ ಅಂತಹುದು ಏನು ಇಲ್ಲ. ನಾವು ಇಬ್ಬರೂ ಒಳ್ಳೆಯ ಸ್ನೇಹಿತರು ಮಾತ್ರ ಎಂದು ಸಬೂಬು ಹೇಳಿಕೊಳ್ಳು‌ತ್ತಾ ಬಂದರು. ಇನ್ನೂ ಇದೀಗ ಅವರ ಮದುವೆ ಅಧಿಕೃತವಾಗಿ ನಡೆದಿದೆ. ಕುಟುಂಬಸ್ಥರು ಹಾಘು ಕೆಲವೇ ಅತಿಥಿಗಳ ಸಮ್ಮುಖದಲ್ಲಿ ಈ ಮದುವೆ ನಡೆದಿದೆ. ರಾಜಸ್ಥಾನದ ಜೈಸಲ್ಮೇರ್‍ ನಲ್ಲಿನ ಸೂರ್ಯ ಘರ್‍ ಪ್ಯಾಲೆಸ್ ನಲ್ಲಿ ಫೆ.7 ಮಂಗಳವಾರ ರಾತ್ರಿ ಅದ್ದೂರಿಯಾಗಿ ನಡೆದಿದೆ. ಇನ್ನೂ ಈ ಮದುವೆ ಸಮಾರಂಭಕ್ಕೆ ಕರಣ್ ಜೋಹರ್‍, ಷಾಹಿದ್ ಕಪೂರ್‍, ಜೂಹಿ ಚಾವ್ಲಾ ಸೇರಿದಂತೆ ಅನೇಕ ಸ್ಟಾರ್‍ ಗಳು ಹಾಜರಾಗಿದ್ದರು.

ಇನ್ನೂ ಫೆ.5 ರಿಂದ ಈ ಜೋಡಿಯ ಮದುವೆ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಿತು. ಹಿಂದೂ ಸಂಪ್ರದಾಯದಂತೆ ಮದುವೆ ಸಮಾರಂಭ ಅದ್ದೂರಿಯಾಗಿ ನೆರವೇರಿದೆ. ವಿವಿಧ ದೇಶಕ್ಕೆ ಸೇರಿದ ಊಟದ ವ್ಯವಸ್ಥೆಯನ್ನು ಸಹ ಮಾಡಿದ್ದರು. ಇನ್ನೂ ಪೊಟೋಗಳು ಹಾಗೂ ವಿಡಿಯೋಗಳನ್ನು ತೆಗೆಯಬಾರದೆಂದು ಈ ಮೊದಲೇ ಕಿಯಾರಾ ಹಾಗೂ ಸಿದ್ದಾರ್ಥ್ ಮನವಿ ಮಾಡಿಕೊಂಡಿದ್ದರು. ಸಿನೆಮಾ ತಾರೆಯರು ಹಾಗೂ ಸ್ನೇಹಿತರಿಗಾಗಿ ಮುಂಬೈನಲ್ಲಿ ಅದ್ದೂರಿಯಾಗಿ ರಿಸೆಪ್ಷನ್ ಸಹ ಪ್ಲಾನ್ ಮಾಡಿದ್ದಾರಂತೆ. ಮೆಹಂದಿ, ಹಲ್ದಿ, ಸಂಗೀತ್ ಕಾರ್ಯಕ್ರಮಗಳೂ ಸಹ ತುಂಬಾ ಅದ್ದೂರಿಯಾಗಿ ನಡೆದಿದೆ. ಇನ್ನೂ ಮೆಹಂದಿಯಲ್ಲಿ ಕಿಯಾರಾ ಸಿದ್ದಾರ್ಥ್ ಕೆಲವೊಂದು ಹಾಡುಗಳಿಗೆ ಭರ್ಜರಿ ಡ್ಯಾನ್ಸ್ ಸಹ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಇವರ ಮದುವೆ ಸಮಾರಂಭಕ್ಕೆ ಕೊಟಿಗಟ್ಟಲೇ ಖರ್ಚು ಮಾಡಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಮುಂಬೈ ಮೂಲದ ವೆಡ್ಡಿಂಗ್ ಪ್ಲಾನಿಂಗ್ ಕಂಪನಿಯೊಂದು ಈ ಮದುವೆ ಸಮಾರಂಭವನ್ನು ನಡೆಸಿಕೊಟ್ಟಿದೆ ಎನ್ನಲಾಗುತ್ತಿದೆ. ದಿನಕ್ಕೆ ಬರೊಬ್ಬರಿ ಎರಡು ಕೋಟಿಯಷ್ಟು ಖರ್ಚು ಮಾಡಲಾಗಿದೆ ಎಂದು ಸಹ ಹೇಳಲಾಗುತ್ತಿದೆ.

Most Popular

To Top