News

ಚಿಕ್ಕ ವಯಸ್ಸಿನಲ್ಲೇ ಸಮಾಜಕ್ಕೆ ಮಾದರಿಯಾದ ಪುಟ್ಟ ಬಾಲಕಿ, ಕ್ಯಾನ್ಸರ್ ರೋಗಿಗಳಿಗಾಗಿ ಕೂದಲು ದಾನ ಮಾಡಿದ ಬಾಲಕಿ…..!

ಇತ್ತೀಚಿಗೆ ಕ್ಯಾನ್ಸರ್‍ ರೋಗಿಗಳಿಗಾಗಿ ಸಿನೆಮಾ ನಟಿಯರಿಂದ ಹಿಡಿದು ಅನೇಕರು ತಮ್ಮ ಕೇಶ ದಾನ ಮಾಡುತ್ತಿರುವ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಕೆಲವು ದಿನಗಳ ಹಿಂದೆಯಷ್ಟೆ ಖ್ಯಾತ ಕ್ರಿಕೆಟಿಗ ಯುವರಾಜ್ ಸಿಂಗ್ ಪತ್ನಿ ಹಜೀಲ್ ಕೀಚ್ ಸಹ ತಮ್ಮ ಕೂದಲನ್ನು ಕ್ಯಾನ್ಸರ್‍ ರೋಗಿಗಳಿಗೆ ದಾನ ಮಾಡಿದ್ದರು. ಇದೀಗ ಉತ್ತರಕನ್ನಡ ಜಿಲ್ಲೆಯ ಪುಟ್ಟ ಬಾಲಕಿಯೊಬ್ಬಳು ಚಿಕ್ಕ ವಯಸ್ಸಿನಲ್ಲೇ ತನ್ನ ಕೂದಲನ್ನು ಕ್ಯಾನ್ಸರ್‍ ರೋಗಿಗಳಿಗೆ ದಾನ ಮಾಡಿ ಅನೇಕರಿಗೆ ಮಾದರಿಯಾಗಿದ್ದು, ಎಲ್ಲರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದಾಳೆ.

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೈರುಂಬೆ ಗ್ರಾಮದ ವ್ಯಾಪ್ತಿಯ ಪುಟಾಣಿ ಬಾಲಕಿಯೊಬ್ಬರು ತನ್ನ ಉದ್ದನೆಯ ಕೂದಲನ್ನು ಕ್ಯಾನ್ಸರ್‍ ರೋಗಿಗಳಿಗಾಗಿ ದಾನ ಮಾಡಿದ್ದಾರೆ. ಈ ಪುಟಾಣಿ ಬಾಲಕಿಯ ಹೆಸರು ಆದ್ಯಾ ಭಟ್, ಆಕೆಯ ವಯಸ್ಸು ಕೇವಲ 3 ವರ್ಷ 7 ತಿಂಗಳು ಮಾತ್ರ. ಬೈರುಂಬೆಯ ಕಿರನ್ ಭಟ್ ಹಾಗೂ ತಾಯಿ ಪ್ರಾರ್ಥನಾ ಭಟ್ ರವರ ಮುದ್ದಿನ ಮಗಳು ಆದ್ಯಾ ಗ್ರಾಮದಲ್ಲಿರುವ ಅಂಗನವಾಡಿಗೆ ಹೋಗುತ್ತಿದ್ದಾಳೆ. ತಾನು ಹುಟ್ಟಿದಾಗಿನಿಂದ ಬೆಳೆಸಿಕೊಂಡಿದ್ದ 12 ಇಂಚಿನ ಉದ್ದದ ಕೂದಲನ್ನು ದಾನ ಮಾಡಿದ್ದಾಳೆ. ಇನ್ನೂ ಆದ್ಯಾ ಹವ್ಯಕ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದವರಾಗಿದ್ದಾರೆ. ಸಾಮಾನ್ಯವಾಗಿ ಹವ್ಯಕ ಸಮುದಾಯದ ಹೆಣ್ಣು ಮಕ್ಕಳ ಕೂದಲು ತೆಗೆಸುವುದಿಲ್ಲ. ಆದರೆ ಆದ್ಯಾ ಎಂಬ ಪುಟಾಣಿ ಬಾಲಕಿ ಮಾತ್ರ ತನ್ನ ಉದ್ದನೆಯ ಕೂದಲನ್ನು ಕ್ಯಾನ್ಸರ್‍ ರೋಗಿಗಳಿಗೆ ದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಸಾಮಾನ್ಯವಾಗಿ ಪುಟಾಣಿ ಮಕ್ಕಳು ಬೆಳೆದ ಕೂದಲನ್ನು ಕಟ್ಟಿಂಗ್ ಮಾಡಿಸಲು ಹೋದರೇ ರಂಪಾಟ ಮಾಡುವುದನ್ನು ನಾವು ಕಂಡಿದ್ದೇವೆ. ಆದರೆ ಆದ್ಯಾ ಮಾತ್ರ ತುಂಬು ಹೃದಯದಿಂದ ಸಂತೋಷದಿಂದ ಕೂದಲನ್ನು ದಾನ ಮಾಡಿದ್ದಾಳೆ. ಇನ್ನೂ ಪುಟಾಣಿ ಬಾಲಕಿಯ ತಾಯಿ ಪ್ರಾರ್ಥನಾ ಕ್ಯಾನ್ಸರ್‍ ರೋಗಿಗಳ ಬಗ್ಗೆ ತುಂಭಾ ಕಾಳಜಿ ಹೊಂದಿದ್ದು, ಕಿಮೋಥೆರಪಿ ಬಳಿಕ ಕ್ಯಾನ್ಸರ್‍ ರೋಗಿಗಳ ಕೂದಲು ಉದುರುತ್ತದೆ. ಇದರಿಂದ ಹೆಂಗಸರು ತುಂಬಾನೆ ಮುಜುಗರ ಅನುಭವಿಸುತ್ತಾರೆ. ಈ ಬಗ್ಗೆ ಅನೇಕ ವಿಡಿಯೋಗಳನ್ನು ಸಹ ಆಕೆ ನೋಡಿದ್ದಾರೆ. ಸಣ್ಣ ಮಕ್ಕಳೂ ಸಹ ಕ್ಯಾನ್ಸರ್‍ ರೋಗಕ್ಕೆ ತುತ್ತಾಗಿರುತ್ತಾರೆ. ಅಂತಹ ಮಕ್ಕಳಿಗಾಗಿ ನನ್ನ ಮಗಳ ಕೂದಲನ್ನು ಸಹ ಕೊಡಲು ತೀರ್ಮಾನ ಮಾಡಿದ್ದೇನೆ. ಕಿರಿಯ ವಯಸ್ಸಿನಲ್ಲೇ ಸಮಾಜಮುಖಿಯಾಗಲು ನನ್ನ ಮಗಳಿಗೆ ಇದು ಸೂಕ್ತ ಸಮಯವಾಗಿದ್ದು, ಈ ನಿಟ್ಟಿನಲ್ಲಿ ನಾವು ನಮ್ಮ ಮಗಳ ಕೇಶದಾನಕ್ಕೆ ಮುಂದಾಗಿದ್ದೆವೆ ಎಂದು ಹೇಳಿದ್ದಾರೆ. ಇನ್ನೂ ತಾಯಿಯ ಮಾತಿನಂತೆ ಆದ್ಯಾ ಭಟ್ ಸಹ ಕೂದಲನ್ನು ದಾನ ಮಾಡಿದ್ದಾರೆ. ಇನ್ನೂ ಎಲ್ಲಾ ಕಡೆಯಿಂದ ಆದ್ಯಾಗೆ ಮೆಚ್ಚಗೆ ವ್ಯಕ್ತವಾಗುತ್ತಿದೆ.

Most Popular

To Top