ನಿನ್ನ ಚಿನ್ನದ ಪೋನ್ ಬೇಕಾದ್ರೆ ನನ್ನ ಬಯಕೆ ಈಡೇರಿಸು ಎಂದ ಭೂಪ, ಆತನ ಬಯಕೆ ಆದರೂ ಏನು…..!

ಕಳೆದೆರಡು ದಿನಗಳ ಹಿಂದೆಯಷ್ಟೆ ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ವರ್ಲ್ಡ್ ಕಪ್ ಟೂರ್ನಿಯನ್ನು ನೋಡಲು ಬಾಲಿವುಡ್ ನಟಿ ಊರ್ವಶಿ ರೌಟೇಲಾ ಸಹ ಹೋಗಿದ್ದು, ಮ್ಯಾಚ್ ಸಮಯದಲ್ಲಿ…

ಕಳೆದೆರಡು ದಿನಗಳ ಹಿಂದೆಯಷ್ಟೆ ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ವರ್ಲ್ಡ್ ಕಪ್ ಟೂರ್ನಿಯನ್ನು ನೋಡಲು ಬಾಲಿವುಡ್ ನಟಿ ಊರ್ವಶಿ ರೌಟೇಲಾ ಸಹ ಹೋಗಿದ್ದು, ಮ್ಯಾಚ್ ಸಮಯದಲ್ಲಿ ಚಿನ್ನದ ಪೋನ್ ಕಳೆದುಕೊಂಡಿದ್ದರು. ಇದೀಗ ಒರ್ವ ಅಜ್ಞಾತ ವ್ಯಕ್ತಿ ನಿನ್ನ ಚಿನ್ನದ ಪೋನ್ ನನ್ನ ಬಳಿಯಿದೆ. ಅದು ಬೇಕಾದರೇ ನನ್ನ ಬಯಕೆ ಈಡೇರಿಸಬೇಕು ಎಂದು ಇ-ಮೇಲ್ ಮಾಡಿದ್ದಾನಂತೆ. ಅಷ್ಟಕ್ಕೂ ಆ ಅಜ್ಞಾತ ವ್ಯಕ್ತಿ ಊರ್ವಶಿಯ ಬಳಿ ಇಟ್ಟಿರುವ ಬಯಕೆಯಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ಕಳೆದ ಅ.14 ರಂದು ಗುಜರಾತ್ ನ ಅಹಮದಾಬಾದ್ ನಲ್ಲಿ ಭಾರತ ಮತ್ತು ಪಾಕಿಸ್ತಾನದ ಹೈ ವೋಲ್ಟೇಜ್  ಕ್ರಿಕೆಟ್ ಪಂದ್ಯಾವಳಿಯನ್ನು ವೀಕ್ಷಣೆ ಮಾಡಲು ಬಾಲಿವುಡ್ ಖ್ಯಾತ ನಟಿ ಊರ್ವಶಿ ರೌಟೇಲಾ 24 ಕ್ಯಾರೆಟ್ ಚಿನ್ನದ ಐಪೋನ್ ಕಳೆದುಕೊಂಡಿದ್ದರು. ಈ ಬಗ್ಗೆ ಆಕೆ ಟ್ವೀಟ್ ಮೂಲಕ ತಮ್ಮ ಪೋನನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದರು. ದಯವಿಟ್ಟು ನನಗೆ ಸಹಾಯ ಮಾಡಿ, ನನ್ನ ಮೊಬೈಲ್ ಪೋನ್ ಯಾರಿಗಾದರೂ ಸಿಕ್ಕರೇ ಮತ್ತೆ ನೀಡಿ, ನನ್ನನ್ನು ಸಂಪರ್ಕ ಮಾಡಿ ಎಂದು ಪೋಸ್ಟ್ ಮಾಡಿ, ಅದನ್ನು ಅಹಮದಾಬಾದ್ ಪೋಲೀಸರಿಗೆ ಹಾಗೂ ನರೇಂದ್ರ ಮೋದಿ ಸ್ಟೇಡಿಯಂನ ಅಧಿಕೃತ ಟ್ವಿಟರ್‍ ಖಾತೆಯನ್ನು ಟ್ಯಾಗ್ ಮಾಡಿದ್ದರು. ದಿನಗಳು ಕಳೆದರೂ ಸಹ ಆಕೆಯ ಪೋನ್ ಸಿಗದ ಕಾರಣ ಪೊಲೀಸರಿಗೆ ದೂರು ನೀಡಿ ಆ ಪ್ರತಿಯನ್ನು ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಜೊತೆಗೆ ತಮ್ಮ ಪೋನ್ ಹುಡುಕಿ ಕೊಟ್ಟವರಿಗೆ ಭರ್ಜರಿ ಬಹುಮಾನ ಸಹ ಘೋಷಣೆ ಮಾಡಿದ್ದರು.

ಇನ್ನೂ ತನ್ನ ಮೊಬೈಲ್ ಹುಡುಕಿಕೊಟ್ಟವರಿಗೆ ಬಹುಮಾನ ನೀಡುವುದಾಗಿ ಹೇಳಿದ ಊರ್ವಸಿ ಆ ಬಹುಮಾನ ಯಾವುದು, ಹಣದ ರೂಪದಲ್ಲಿರುತ್ತಾ ಅಥವಾ ವಸ್ತು ರೂಪದಲ್ಲಿ ಇರುತ್ತಾ ಎಂಬುದನ್ನು ಮಾತ್ರ ಹೇಳಿಲ್ಲ. ಆಕೆಯ ಪೋನ್ ಹುಡುಕಿಕೊಡಲು ಪೊಲೀಸರು ಸಹ ಕಾಳಜಿ ವಹಸಿದ್ದರು. ಇನ್ನೂ ಊರ್ವಶಿ ರವರಿಗೆ ಓರ್ವ ಅಜ್ಞಾತ ವ್ಯಕ್ತಿ ಮೇಲ್ ಮಾಡಿದ್ದಾರಂತೆ. ಆ ಮೇಲ್ ಅನ್ನು ಊರ್ವಶಿ ತಮ್ಮ ಇನ್ಸ್ಟಾ ಖಾತೆಯಲ್ಲಿ ಶೇರ್‍ ಮಾಡಿಕೊಂಡಿದ್ದಾರೆ. ಆತ ಕಳುಹಿಸಿರುವ ಮೇಲ್ ನಲ್ಲಿ ನಿಮ್ಮ ಪೋನ್ ನನ್ನ ಬಳಿಯಿದೆ. ವಾಪಸ್ಸು ಬೇಕು ಅಂದರೇ ನನಗೆ ಒಂದು ಸಹಾಯ ಮಾಡಬೇಕು. ನನ್ನ ಸಹೋದರ ಕ್ಯಾನ್ಸರ್‍ ವ್ಯಾದಿಯಿಂದ ಬಳಲುತ್ತಿದ್ದಾನೆ. ನೀವು ಅವನ ಕ್ಯಾನ್ಸರ್‍ ಚಿಕಿತ್ಸೆಗೆ ಸಹಾಯ ಮಾಡಬೇಕು ಎಂದು ಮೇಲ್ ಮಾಡಿದ್ದಾನೆ. ಈ ಮೇಲ್ ಗೆ ಊರ್ವಶಿ ಒಕೆ ಎಂದು ಥಮ್ಸ್ ಅಪ್ ಎಮೋಜಿ ಹಾಕಿದ್ದಾರೆ. ಇನ್ನೂ ಈ ಬಗ್ಗೆ ಊರ್ವಶಿ ಯಾವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.