Film News

ರಶ್ಮಿಕಾ ರನ್ನೂ ಹಿಂದೆ ಹಾಕುತ್ತಿರುವ ಶ್ರೀಲೀಲಾ, ವಿಜಯ್ ದೇವರಕೊಂಡ ಸಿನೆಮಾದಲ್ಲಿ ಶ್ರೀಲೀಲಾ ಅಂತೆ…?

ಸದ್ಯ ತೆಲುಗು ಸಿನಿರಂಗದಲ್ಲಿ ಕನ್ನಡದ ಬ್ಯೂಟಿ ಶ್ರೀಲೀಲಾ ಸಿಕ್ಕಾಪಟ್ಟೆ ಫೇಂ ಸಂಪಾದಿಸಿದ್ದಾರೆ. ಸ್ಟಾರ್‍ ನಟಿಯರನ್ನೂ ಮೀರಿ ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಮಹೇಶ್ ಬಾಬು ರವರ SSMB28 ಸಿನೆಮಾದಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆಂಬ ಸುದ್ದಿ ಇದೆ. ಇದರ ಜೊತೆಗೆ ಪವನ್ ಕಲ್ಯಾಣ್ ರವರ ಉಸ್ತಾದ್ ಭಗತ್ ಸಿಂಗ್ ಸಿನೆಮಾದಲ್ಲೂ ಶ್ರೀಲೀಲಾ ನಟಿಸಲಿದ್ದಾರಂತೆ. ಇದೀಗ ರೌಡಿ ಹಿರೋ ವಿಜಯ್ ದೇವರಕೊಂಡ ಸಿನೆಮಾದಲ್ಲಿ ಸಹ ಶ್ರೀಲೀಲಾ ಬಣ್ಣ ಹಚ್ಚಲಿದ್ದಾರೆ ಎಂಬ ಮಾತುಗಳು ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ಸದ್ಯ ತೆಲುಗು ಸಿನಿರಂಗದಲ್ಲಿ ಶ್ರೀಲೀಲಾ ಹಾಟ್ ಟಾಪಿಕ್ ಆಗುತ್ತಿದ್ದಾರೆ. ಆಕೆ ಸ್ಟಾರ್‍ ನಟಿಯರನ್ನೂ ಸಹ ಹಿಂದಿಕ್ಕಿ ಮುನ್ನುಗ್ಗುತ್ತಿದ್ದಾರೆ. ಸಾಲು ಸಾಲು ಕ್ರೇಜಿ ಸಿನೆಮಾಗಳಲ್ಲಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಧಮಾಕಾ ಸಿನೆಮಾದ ಬಳಿಕ ಆಕೆ ಮತಷ್ಟು ಕ್ರೇಜ್ ಪಡೆದುಕೊಂಡಿದ್ದಾರೆ. ಧಮಾಕಾ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಆದ ಹಿನ್ನೆಲೆಯಲ್ಲಿ ಆಕೆಗೆ ಭಾರಿ ಆಫರ್‍ ಗಳು ಹರಿದು ಬರುತ್ತಿವೆ. ತ್ರಿವಿಕ್ರಮ್ ಶ್ರೀನಿವಾಸ್ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ನ SSMB28 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಪವನ್ ಕಲ್ಯಾಣ್ ರವರ ಸಿನೆಮಾದಲ್ಲಿ ಸಹ ಶ್ರೀಲೀಲಾ ಐಟಂ ಸಾಂಗ್ ಮಾಡಲಿದ್ದಾರೆ. ಇದರ ಜೊತೆಗೆ ಪವನ್ ಕಲ್ಯಾಣ್ ರವರ ಮತ್ತೊಂದು ಸಿನೆಮಾ ಉಸ್ತಾದ್ ಭಗತ್ ಸಿಂಗ್ ಸಿನೆಮಾದಲ್ಲೂ ಸಹ ಶ್ರೀಲೀಲಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನೆಮಾದಲ್ಲಿ ಮೊದಲಿಗೆ ಪೂಜಾ ಹೆಗ್ಡೆ ಹಿರೋಯಿನ್ ಆಗಿ ಅಂದುಕೊಂಡಿದ್ದರಂತೆ. ಆದರೆ ಇದೀಗ ಶ್ರೀಲೀಲಾ ಎಂಬ ಮಾತುಗಳು ಕೇಳಿಬರುತ್ತಿವೆ.

ಇದೀಗ ಶ್ರೀಲೀಲಾ ಮತ್ತೊಂದು ಕ್ರೇಜಿ ಪ್ರಾಜೆಕ್ಟ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಟಾಲಿವುಡ್ ರೌಡಿ ಹಿರೋ ವಿಜಯ್ ದೇವರಕೊಂಡ ರವರ ಸಿನೆಮಾದಲ್ಲಿ ಹಿರೋಯಿನ್ ಆಗಿ ಶ್ರೀಲೀಲಾ ಬಣ್ಣ ಹಚ್ಚಲಿದ್ದಾರಂತೆ. ಸಿತಾರಾ ಬ್ಯಾನರ್‍ ನಡಿ ವಿಜಯ್ ದೇವರಕೊಂಡ ರವರ ಸಿನೆಮಾ ಒಂದು ಮೂಡಿಬರಲಿದ್ದು, ಈ ಸಿನೆಮಾವನ್ನು ಗೌತಮ್ ತಿನ್ನನೂರಿ  ನಿರ್ದೇಶನ ಮಾಡಲಿದ್ದಾರೆ. ಈ ಸಿನೆಮಾ ಸ್ಪೈ ಥ್ರಿಲ್ಲರ್‍ ಕಥೆಯನ್ನು ಒಳಗೊಂಡಿದೆ ಎನ್ನಲಾಗಿದೆ. ಶೀಘ್ರದಲ್ಲೇ ಈ ಸಿನೆಮಾದ ಶೂಟೀಂಗ್ ಸಹ ಶುರುವಾಗಲಿದೆಯಂತೆ. ವಿಜಯ್ ದೇವರಕೊಂಡ ರವರ 12ನೇ ಸಿನೆಮಾ ಇದಾಗಿದೆ. ಈ ಸಿನೆಮಾದಲ್ಲಿ ನಾಯಕಿಯಾಗಿ ಶ್ರೀಲೀಲಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಟಾಲಿವುಡ್ ನಲ್ಲಿ ಜೋರಾಗಿಯೇ ಕೇಳಿಬರುತ್ತಿದೆ.

ಸದ್ಯ ಶ್ರೀಲೀಲಾ ಮಹೇಶ್ ಬಾಬು ರವರ SSMB28 ಸಿನೆಮಾದಲ್ಲಿ, ಬಾಲಕೃಷ್ಣ ರವರ NBK108 ಸಿನೆಮಾದಲ್ಲಿ ಬಾಲಕೃ‌ಷ್ಣ ರವರ ಮಗಳ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಆಕೆಯ ಕೈಯಲ್ಲಿ ಮತಷ್ಟು ಸಿನೆಮಾಗಳಿವೆ. ಇನಷ್ಟು ಸಿನೆಮಾಗಳು ಮಾತುಕತೆ ಹಂತದಲ್ಲಿವೆ ಎಂದೂ ಸಹ ಹೇಳಲಾಗುತ್ತಿದೆ. ಸದ್ಯ ಆಕೆ ಒಪ್ಪಿಕೊಂಡ ಸಿನೆಮಾಗಳಲ್ಲಿ ಕನಿಷ್ಟ ಮೂರು ಸಿನೆಮಾಗಳು ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದರೇ ಆಕೆ ಸದ್ಯ ಸ್ಟಾರ್‍ ನಟಿಯರಾಗಿ ಟಾಪ್ ಸ್ಥಾನದಲ್ಲಿರುವ ಎಲ್ಲಾ ನಟಿಯರನ್ನು ಹಿಂದಿಕ್ಕುತ್ತಾರೆ ಎಂದೇ ಹೇಳಲಾಗುತ್ತಿದೆ.

Most Popular

To Top