ತನ್ನನ್ನು ಮದುವೆಯಾಗುವ ಯುವಕನಲ್ಲಿರಬೇಕಾದ ಗುಣಗಳ ಬಗ್ಗೆ ರಿವೀಲ್ ಮಾಡಿದ ಅನನ್ಯಾ ನಾಗಳ್ಳ, ಅಂತಹ ಯುವಕನೇ ಪತಿಯಾಗಬೇಕಂತೆ…!

Follow Us :

ಟಾಲಿವುಡ್ ನಟಿ ಅನನ್ಯ ನಾಗಳ್ಳ ಸದ್ಯ ಸೋಷಿಯಲ್ ಮಿಡಿಯಾದ ಮೂಲಕ ಎಲ್ಲರ ಕ್ರಷ್ ಆಗಿಬಿಟ್ಟಿದ್ದಾರೆ. ವಕೀಲ್ ಸಾಭ್ ಸಿನೆಮಾದ ಬಳಿಕ ಅನನ್ಯ ಕ್ರೇಜ್ ಮತಷ್ಟು ಹೆಚ್ಚಾಗಿದೆ. ಇದೀಗ ಸಿನೆಮಾಗಳಲ್ಲಿ ಆಕೆ ತನ್ನದೇ ಆದ ಕ್ರೇಜ್ ದಕ್ಕಿಸಿಕೊಳ್ಳುತ್ತಾ ಸಿನಿರಂಗದಲ್ಲಿ ಬ್ಯುಸಿಯಾಗುತ್ತಿದ್ದಾರೆ. ಜತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿದ್ದು ಆಕೆ ತನ್ನ ಗ್ಲಾಮರ್‍ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದ್ದಾರೆ. ಇದೀಗ ಆಕೆ ತನ್ನನ್ನು ಮದುವೆಯಾಗುವ ಯುವಕನಲ್ಲಿ ಏನೆಲ್ಲಾ ಗುಣಗಳಿರಬೇಕು ಎಂಬುದರ ಬಗ್ಗೆ ರಿವೀಲ್ ಮಾಡಿದ್ದಾರೆ. ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಯಂಗ್ ಬ್ಯೂಟಿ ಅನನ್ಯಾ ನಾಗಳ್ಳ ವಕೀಲ್ ಸಾಭ್ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ನಟಿಯಾಗಿದ್ದಾರೆ. ಟ್ಯಾಲೆಂಟೆಡ್ ನಟಿ ಅನನ್ಯಾ ನಾಗಳ್ಳ ಇದೀಗ ಹಂತ ಹಂತವಾಗಿ ಸಿನೆಮಾಗಳಲ್ಲಿ ಕ್ರೇಜ್ ಹೆಚ್ಚಿಸಿಕೊಳ್ಳಲು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ವಕೀಲ್ ಸಾಬ್ ಸಿನೆಮಾದಲ್ಲಿ ಮುಗ್ದ ಹುಡುಗಿಯಂತೆ ಅಭಿನಯಿಸಿದ್ದಾರೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ತನ್ನ ವರಸೆ ಬೇರೆಯದ್ದೇ ಇದೆ. ಇನ್ನೂ ತಾನು ಗ್ಲಾಮರಸ್ ಸಿನೆಮಾಗಳಲ್ಲೂ ಸಹ ನಟಿಸಲು ಸಿದ್ದವಾಗಿದ್ದಾರೆ ಎಂಬುದನ್ನು ಸಾರಿ ಹೇಳುವಂತೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರಸ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಸದ್ಯ ಆಕೆ ತಂತ್ರ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದು, ಈ ಸಿನೆಮಾದ ಪ್ರಮೋಷನ್ ನಿಮಿತ್ತ ಕೆಲವೊಂದು ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ತಾನು ಮದುವೆಯಾಗುವ ಯುವಕನ ಕ್ವಾಲಿಟೀಸ್ ಬಗ್ಗೆ ಮಾತನಾಡಿದ್ದಾರೆ.

ನಟಿ ಅನನ್ಯಾ ತಂತ್ರ ಸಿನೆಮಾದ ಪ್ರಮೋಷನ್ ನಿಮಿತ್ತ ಕೆಲವೊಂದು ಸಂದರ್ಶನಗಳಲ್ಲಿ ಭಾಗಿಯಾಗುತ್ತಾ ಅನೇಕ ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಆಕೆ ತನ್ನ ವೈಯುಕ್ತಿಕ ವಿಚಾರಗಳ ಬಗ್ಗೆ ಸಹ ಮಾತನಾಡುತ್ತಿದ್ದಾರೆ. ಇದಈಗ ಆಕೆ ಜಬರ್ದಸ್ತ್ ಬ್ಯೂಟಿ ರೀತೂ ಚೌದರಿ ನಡೆಸುತ್ತಿರುವ ಟಾಕ್ ಶೋ ನಲ್ಲಿ ಆಕೆ ಭಾಗಿಯಾಗಿದ್ದಾರೆ. ಈ ವೇಳೆ ರೀತೂ ಚೌದರಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಈ ಶೋ ನಲ್ಲಿ ಅನನ್ಯಾ ತಾನು ಮದುವೆಯಾಗಲಿರುವ ವ್ಯಕ್ತಿಯ ಗುಣಗಳ ಬಗ್ಗೆ ಮಾತನಾಡಿದ್ದಾರೆ. ನನ್ನ ಮದುವೆಯಾಗುವ ವ್ಯಕ್ತಿಗೆ ಕಡ್ಡಾಯವಾಗಿ ಗಡ್ಡ ಇರಬೇಕು, ಹೈಟ್, ಕಲರ್‍ ಹಾಗೂ ಹಣದ ವಿಚಾರಗಳ ಬಗ್ಗೆ ಇಂಟ್ರಸ್ಟ್ ಇಲ್ಲ. ನೋಡಿದರೇ ನನ್ನನ್ನು ಇಂಪ್ರೆಸ್ ಮಾಡುವಂತಿದ್ದರೇ ಸಾಕು ಎಂದು ಸಿಂಪಲ್ ಆಗಿ ಉತ್ತರ ಕೊಟ್ಟಿದ್ದಾರೆ. ಆಕೆಯ ಈ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಯಂಗ್ ಬ್ಯೂಟಿ ಅನನ್ಯಾ ನಾಗಳ್ಳ ತಂತ್ರ ಸಿನೆಮಾದ ಮೂಲಕ ಒಳ್ಳೆಯ ಸಕ್ಸಸ್ ಪಡೆದುಕೊಳ್ಳುತ್ತಿದ್ದಾರೆ ಎನ್ನಬಹುದಾಗಿದೆ. ಪೊಟ್ಟೆಲ್, ಶ್ರೀಕಾಕುಳಂ ಶೆರ್ಲಾಕ್ ಹೋಮ್ಸ್ ಎಂಬ ಎರಡು ಸಿನೆಮಾಗಳಲ್ಲಿ ನಟಿಸಿದ್ದು, ಈ ಸಿನೆಮಾಗಳು ಸಹ ಶೀಘ್ರದಲ್ಲೇ ತೆರೆಕಾಣಲಿದೆ. ಇದೀಗ ಅನನ್ಯಾ ಹಂಚಿಕೊಳ್ಳುತ್ತಿರುವ ವೈಯುಕ್ತಿಕ ವಿಚಾರಗಳು ಭಾರಿ ಸುದ್ದಿಯಾಗುತ್ತಿವೆ.