Film News

ಫೆಬ್ರವರಿಯಲ್ಲಿ ರಶ್ಮಿಕಾ-ವಿಜಯ್ ದೇವರಕೊಂಡ ಎಂಗೇಜ್ ಮೆಂಟ್, ಈ ಕುರಿತು ಕ್ಲಾರಿಟಿ ಕೊಟ್ಟ ವಿಜಯ್ ದೇವರಕೊಂಡ…..!

ಸಿನಿರಂಗದಲ್ಲಿ ಸೆಲೆಬ್ರೆಟಿಗಳ ಮದ್ಯೆ ರೂಮರ್‍ ಗಳು ಬರೋದು ತುಂಬಾನೆ ಸಹಜ. ಅದರಲ್ಲೂ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಒಂದು ಜೋಡಿ ನಟಿಸಿದರೇ ಅವರ ನಡುವೆ ಪ್ರೇಮಾಂಕುರವಾಗಿದೆ, ಅಫೈರ್‍ ನಡೆಯುತ್ತಿದೆ ಎಂಬ ರೂಮರ್‍ ಹರಿದಾಡುತ್ತಲೇ ಇರುತ್ತದೆ. ಈ ಹಾದಿಯಲ್ಲೇ ಸುಮಾರು ದಿನಗಳಿಂದ ನ್ಯಾಷನಲ್ ಕ್ರಷ್ ರಶ್ಮಿಕಾ ಹಾಗೂ ರೌಡಿ ಹಿರೋ ವಿಜಯ್ ದೇವರಕೊಂಡ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ರೂಮರ್‍ ಹರಿದಾಡುತ್ತಲೇ ಇದೆ. ಅದರಲ್ಲೂ ಕೆಲವು ದಿನಗಳ ಹಿಂದೆಯಷ್ಟೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ರವರ ಎಂಗೇಜ್ ಮೆಂಟ್ ಇದೇ ಫೆಬ್ರವರಿ ಮಾಹೆಯಲ್ಲಿ ನಡೆಯಲಿದೆ ಎಂಬ ಸುದ್ದಿ ಭಾರಿ ಸದ್ದು ಮಾಡಿದ್ದು, ಇದೀಗ ಈ ಕುರಿತು ವಿಜಯ್ ದೇವರಕೊಂಡ ಕ್ಲಾರಿಟಿ ಕೊಟ್ಟಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಕಡಿಮೆ ಸಮಯದಲ್ಲೇ ಸ್ಟಾರ್‍ ನಟಿಯಾದರು. ಕನ್ನಡದ ಕಿರಿಕ್ ಪಾರ್ಟಿ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಸದ್ಯ ಸೌತ್ ಅಂಡ್ ನಾರ್ತ್ ನಲ್ಲಿ ಬಹುಬೇಡಿಕೆ ಸೃಷ್ಟಿಸಿಕೊಂಡಿದ್ದಾಳೆ. ಇನ್ನೂ ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ಸುದ್ದಿ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಲೇ ಇರುತ್ತದೆ. ಇಬ್ಬರೂ ಮೊದಲಿಗೆ ಗೀತಾ ಗೋವಿಂದಂ ಸಿನೆಮಾದಲ್ಲಿ ನಟಿಸಿದ್ದರು. ಬಳಿಕ ಡಿಯರ್‍ ಕಾಮ್ರೇಡ್ ಎಂಬ ಸಿನೆಮಾದಲ್ಲೂ ಅವರಿಬ್ಬರು ಜೋಡಿಯಾಗಿ ಕಾಣಿಸಿಕೊಂಡರು. ಈ ಎರಡೂ ಸಿನೆಮಾಗಳ ಬಳಿಕ ಅವರಿಬ್ಬರ ನಡುವೆ ಪ್ರೇಮಾಂಕುರವಾಗಿದೆ ಎಂಬ ಸುದ್ದಿ ಭಾರಿ ಸದ್ದು ಮಾಡುತ್ತಿದೆ. ಜೊತೆಗೆ ಇಬ್ಬರ ನಡುವಳಿಕೆ ಸಹ ಆಗಾಗ ಈ ರೂಮರ್‍ ಗೆ ಮತಷ್ಟು ಬಲ ತಂದುಕೊಡುತ್ತದೆ. ಆದರೆ ಕೆಲವು ದಿನಗಳ ಹಿಂದೆಯಷ್ಟೆ ಈ ಜೋಡಿ ಫೆಬ್ರವರಿ ಮಾಹೆಯಲ್ಲಿ ಎಂಗೇಜ್ ಮೆಂಟ್ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಸಖತ್ ವೈರಲ್ ಆಗಿತ್ತು. ಈ ಬಗ್ಗೆ ವಿಜಯ್ ದೇವರಕೊಂಡ ಕ್ಲಾರಿಟಿ ಕೊಟ್ಟಿದ್ದಾರೆ.

ಇನ್ನೂ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ವಿಜಯ್ ದೇವರಕೊಂಡ ಈ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ನನ್ನ ಎಂಗೇಜ್ ಮೆಂಟ್, ಮದುವೆ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳಲ್ಲಿ ಹುರುಳಿಲ್ಲ. ಎಲ್ಲವೂ ಸುಳ್ಳು ಸುದ್ದಿ. ಎರಡು ವರ್ಷಕ್ಕೆ ಒಮ್ಮೆ ಸೋಷಿಯಲ್ ಮಿಡಿಯಾದಲ್ಲಿ ಮದುವೆ ಮಾಡಬೇಕು ಎಂದು ಮಿಡಿಯಾ ಅಂದುಕೊಳ್ಳುತ್ತಿದೆ. ಈ ಕಾರಣದಿಂದಲೇ ಅಂತಹ ಕಥೆಗಳು ಕೇಳಿಬರುತ್ತಿದೆ. ಈ ರೂಮರ್‍ ಗಳ ನನಗೆ ರೂಢಿಯಾಗುತ್ತಿದೆ. ನನ್ನನ್ನು ಮದುವೆಯಾಗು ಎಂದು ಅಂತಹ ಕಥನಗಳ ಮೂಲಕ ಬಲವಂತ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ತಮ್ಮ ಬಗ್ಗೆ ಹರಿದಾಡಿದಂತಹ ರೂಮರ್‍ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ. ವಿಜಯ್ ದೇವರಕೊಂಡ ಈ ಕ್ಲಾರಿಟಿಯ ಕಾರಣದಿಂದ ವಿಜಯ್ ಹಾಗೂ ರಶ್ಮಿಕಾ ಎಂಗೇಜ್ ಮೆಂಟ್ ರೂಮರ್‍ ಗೆ ಚೆಕ್ ಇಟ್ಟಿದ್ದಾರೆ.

ಇನ್ನೂ ವಿಜಯ್ ದೇವರಕೊಂಡ ಕೊನೆಯದಾಗಿ ಖುಷಿ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಸದ್ಯ ಫ್ಯಾಮಿಲಿ ಸ್ಟಾರ್‍ ಎಂಬ ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ರಶ್ಮಿಕಾ ಸಹ ತನ್ನ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ಆಕೆ ಬಾಲಿವುಡ್ ನಲ್ಲಿ ಯಾನಿಮಲ್ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಸದ್ಯ ಆಕೆ ಪುಷ್ಪಾ-2 ಸಿನೆಮಾದ ಮೇಲೆ ತುಂಬಾನೆ ನಿರೀಕ್ಷೆ ಸಹ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.

Most Popular

To Top