Film News

ಕ್ಲಬ್ ನಲ್ಲಿ ಪಬ್ಲಿಕ್ ಇಸ್ಪೀಟ್ ಆಡುತ್ತಾ ಕಾಣಿಸಿಕೊಂಡ ಮಹೇಶ್ ಬಾಬು – ವೆಂಕಟೇಶ್, ಇಂಟರ್ ನೆಟ್ ಶೇಖ್ ಮಾಡಿದ ಪೊಟೋ…..!

ಸಿನೆಮಾ ಸೆಲೆಬ್ರೆಟಿಗಳು ಏನಾದರೂ ಮಾಡಿದರೇ ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತದೆ. ಅದು ಸತ್ಯವಿರಲಿ, ಸುಳ್ಳಾಗಿರಲಿ ಮೊದಲು ಸಖತ್ ವೈರಲ್ ಆಗುತ್ತದೆ. ಈ ಹಾದಿಯಲ್ಲೇ ಸ್ಟಾರ್‍ ನಟರಾದ ಮಹೇಶ್ ಬಾಬು ಹಾಗೂ ವೆಂಕಟೇಶ್ ರವರು ಕ್ಲಬ್ ಒಂದರಲ್ಲಿ ಇಸ್ಪೀಟ್ ಆಡುತ್ತಾ ಕಾಣಿಸಿಕೊಂಡ ಪೊಟೋ ಒಂದು ಸೋಷಿಯಲ್ ಮಿಡಿಯಾ ಶೇಕ್ ಮಾಡುತ್ತಿದೆ.

ನಟ ವೆಂಕಟೇಶ್ ಹಾಗೂ ಮಹೇಶ್ ಬಾಬು ತುಂಬಾನೆ ರಿಸರ್ವ್ ಆಗಿರುತ್ತಾರೆ. ಕೆಲಸವಿದ್ದಾಗ, ಸಿನೆಮಾ ಪ್ರಮೋಷನ್ ಸಮಯದಲ್ಲಿ ಮಾತ್ರ ಹೊರಗೆ ಕಾಣಿಸಿಕೊಳ್ಳುತ್ತಾರೆ. ಆದರೆ ಈ ಇಬ್ಬರೂ ಸ್ಟಾರ್‍ ನಟರು ಕ್ಲಬ್ ನಲ್ಲಿ ಕಾಣಸಿಕೊಂಡಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಟೇಬಲ್ ಮಧ್ಯೆ ಒಂದು ಲಕ್ಷ ಹಣ ವಿದ್ದು, ಮಹೇಶ್ ಬಾಬು ಕೈಯಲ್ಲಿ ಇಸ್ಪೀಟ್ ಎಲೆ ಇದೆ, ವೆಂಕಟೇಶ್ ಮುಂಭಾಗದಲ್ಲಿ ಇಸ್ಪೀಟ್ ಎಲೆಗಳಿವೆ. ಇನ್ನೂ ಇಷ್ಟು ಪಬ್ಲಿಕ್ ಆಗಿ ಇಸ್ಪೀಟ್ ಆಡುವ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಎಲ್ಲರೂ ಪುಲ್ ಶಾಕ್ ಆಗಿದ್ದಾರೆ. ಆದರೆ ಈ ಪೊಟೋದ ಅಸಲಿಯತ್ತು ಬೇರೆನೇ ಇದೆ.

ಮಹೇಶ್ ಬಾಬು ಹಾಗೂ ವೆಂಕಟೇಶ್ ರವರ ಅತೀ ಹತ್ತಿರದ ಸ್ನೇಹಿತರು ಹೊಸ ಕ್ಲಬ್ ಓಪೆನ್ ಮಾಡಿದ್ದಾರೆ. ಈ ಒಪೆನಿಂಗ್ ಕಾರ್ಯಕ್ರಮಕ್ಕೆ ವೆಂಕಟೇಶ್ ಹಾಗೂ ಮಹೇಶ್ ಬಾಬು ಮುಖ್ಯ ಅತಿಥಿಗಳಾಗಿ ಹಾಜರಾಗಿದ್ದರು. ಅದು ಕ್ಯಾಸಿನೋ ಮಾದರಿಯ ಕ್ಲಬ್ ಆದರಿಂದ ಇಬ್ಬರೂ ಸ್ಟಾರ್‍ ನಟರು ಸ್ವಲ್ಪ ಸಮಯ ಇಸ್ಪೀಟ್ ಆಡಿದ್ದಾರೆ. ಆದರೆ ಯಾರೋ ಈ ಪೊಟೋವನ್ನು ದೂರದಿಂದ ತೆಗೆದು ಸೋಷಿಯಲ್ ಮಿಡಿಯಾದಲ್ಲಿ ಹರಿಬಿಟಿದ್ದಾರೆ. ಈ ಪೊಟೋ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಈ ಹಿಂದೆ ಮಹೇಶ್ ಹಾಗೂ ವೆಂಕಟೇಶ್ ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ ಅಣ್ಣ ತಮ್ಮಂದಿರಾಗಿ ನಟಿಸಿ ಒಳ್ಳೆಯ ಮನರಂಜನೆ ನೀಡಿದ್ದರು.

Most Popular

To Top