News

ಟಿಟಿಡಿ ಬಜೆಟ್ ನ ಶೇ.1 ರಷ್ಟು ತಿರುಪತಿ ಅಭಿವೃದ್ದಿಗಾಗಿ ಪ್ರಸ್ತಾವನೆ, ಟಿಟಿಡಿ ಪ್ರಸ್ತಾವನೆ ತಿರಸ್ಕರಿಸಿ ಸಿಎಂ ಜಗನ್..….!

ಭಾರತದಲ್ಲಿ ಅತ್ಯಂತ ಪ್ರಖ್ಯಾತ ಪಡೆದುಕೊಂಡಿರುವ ಹಾಗೂ ಶ್ರೀಮಂತ ದೇಗುಲಗಳಲ್ಲಿ ತಿರುಪತಿಯ ತಿಮ್ಮಪ್ಪನ ದೇಗುಲ ಸಹ ಒಂದಾಗಿದ್ದು, ಪ್ರತಿನಿತ್ಯ ಲಕ್ಷಾಂತರ ಭಕ್ತರು ದೇವಾಯಲಕ್ಕೆ ಭೇಟಿ ನೀಡಿ ವೆಂಕಟೇಶ್ವರನ ದರ್ಶನ ಪಡೆದುಕೊಳ್ಳುತ್ತಾರೆ. ಇದೀಗ ತಿರುಮಲ ತಿರುಪತಿ ದೇವಸ್ಥಾನ ಮಂಡಳಿಯು ತನ್ನ ವಾರ್ಷಿಕ ಬಜೆಟ್ ನಲ್ಲಿ ಶೇ.1 ರಷ್ಟು ಹಣ ತಿರುಪತಿ ನಗರದ ಅಭಿವೃದ್ದಿಗೆ ಮೀಸಲಿಡುವ ಪ್ರಸ್ತಾವನೆಯನ್ನು ಆಂಧ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ತಿರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ.

ತಿರುಮಲ ತಿರುಪತಿ ದೇವಸ್ಥಾನ ಮಂಡಳಿಯ ವಾರ್ಷಿಕ ಬಜೆಟ್ ನಾಲ್ಕು ಸಾವಿರ ಕೋಟಿಯಿದ್ದು, ಅದರಲ್ಲಿ ಶೇ.1 ರಷ್ಟು ಅಂದರೇ ಸುಮಾರು ನಲವತ್ತು ಕೋಡಿ ಗಳನ್ನು ತಿರುಪತಿ ನಗರದ ಅಭಿವೃದ್ದಿಗಾಗಿ ನೀಡಲು ತೀರ್ಮಾನಿಸಿದ್ದಾಗಿ ಅ.9 ರಂದು ಟಿಟಿಡಿ ಘೋಷಣೆ ಮಾಡಿತ್ತು. ಈ ಪ್ರಸ್ತಾವನೆಯನ್ನು ಅನುಮೋದನೆ ಮಾಡುವಂತೆ ಆಂಧ್ರಪ್ರದೇಶದ ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಮಾತ್ರ ಟಿಟಿಡಿಯ ಪ್ರಸ್ತಾವನೆಯನ್ನು ತಿರಸ್ಕಾರ ಮಾಡಿದೆ. ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಕ್ರಮಗಳನ್ನು ಬಿಟ್ಟು ಬೇರೆ ಕೆಲಸಕ್ಕೆ ಬಳಸುವುದು ಸೂಕ್ತವಲ್ಲ ಎಂದು ಸಂಘ ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳೂ ಸಹ ವಿರೋಧ ಮಾಡಿತ್ತು.

ಇನ್ನೂ ಅ.20 ರಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿಗೆ ಸರ್ಕಾರದ ವಿಶೇಷ ಮುಖ್ಯ ಕಾರ್ಯದರ್ಶಿ ಟಿಟಿಡಿಯ ಈ ಪ್ರಸ್ತಾವನೆಯನ್ನು ಸರ್ಕಾರ ಒಪ್ಪಿಕೊಳ್ಳುವುದಿಲ್ಲ ಎಂದು, ತಿರುಪತಿ ನಗರದ ಅಭಿವೃದ್ದಿಗೆ ಟಿಟಿಡಿಯ ವಾರ್ಷಿಕ ಬಜೆಟ್ ನಲ್ಲಿ ಶೇ.1 ರಷ್ಟು ಅನುದಾನ ಮೀಸಲಿಡುವ ಪ್ರಸ್ತಾವನೆಗೆ ಸರ್ಕಾರದಿಂದ ಒಪ್ಪಿಗೆ ಇಲ್ಲ ಎಂದು ಟಿಟಿಡಿ ಅಧಿಕಾರಿಗೆ ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಬಿಜೆಪಿ ನಾಯಕಿ ಸಾದಿನೇನಿ ಯಾಮಿನಿ ಶರ್ಮಾ ಸೇರಿದಂತೆ ಹಲವರು ಸರ್ಕಾರ ತೆಗೆದುಕೊಡ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

Most Popular

To Top