ಅದ್ದೂರಿಯಾಗಿ ನಡೆದ ಶರ್ವಾನಂದ್ ರಕ್ಷಿತಾ ಮದುವೆ, ವೈರಲ್ ಆದ ಪೊಟೋಗಳು……!

ಟಾಲಿವುಡ್ ಯಂಗ್ ಹಿರೋ ಶರ್ವಾನಂದ್ ಹಾಗೂ ರಕ್ಷಿತಾ ರೆಡ್ಡಿ ಮದುವೆ ಭಾನುವಾರ ಬೆಳಗಿನ ಜಾವ ಅದ್ದೂರಿಯಾಗಿ ನಡೆದಿದೆ. ಹೈಕೋರ್ಟ್ ವಕೀಲ ಪಸುನೂರಿ ಮಧುಸೂಧನ್ ರೆಡ್ಡಿರವರ ಪುತ್ರಿ ರಕ್ಷಿತಾ ರೆಡ್ಡಿ ಜೊತೆಗೆ ಶರ್ವಾನಂದ್ ಸಪ್ತಪದಿ ತುಳಿದಿದ್ದಾರೆ. ರಾಜಸ್ಥಾನದ ಜೈಪುರದ ಪ್ಯಾಲೆಸ್ ನಲ್ಲಿ ಈ ಜೋಡಿಯ ಮದುವೆ ಅದ್ದೂರಿಯಾಗಿ ನೆರವೇರಿದ್ದು, ಕೆಲವೇ ಮಂದಿ ಬಂಧುಮಿತ್ರರು ಹಾಗೂ ಸಿನೆಮಾ ಸೆಲೆಬ್ರೆಟಿಗಳ ಸಮ್ಮುಖದಲ್ಲಿ ಮದುವೆ ಸಮಾರಂಭ ನೆರವೇರಿದೆ. ಇನ್ನೂ ಈ ಜೋಡಿಯ ಮದುವೆ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟ ಶರ್ವಾನಂದ್ ಹಾಗೂ ರಕ್ಷಿತಾ ರೆಡ್ಡಿ ಮದುವೆ ಸಂಭ್ರಮ ಅದ್ದೂರಿಯಾಗಿ ನೆರವೇರಿದೆ. ರಾಜಸ್ಥಾನದ ಜೈಪುರ ಪ್ಯಾಲೆಸ್ ನಲ್ಲಿ ಮದುವೆ ನಡೆದಿದ್ದು, ಅದಕ್ಕಾಗಿ ಭರ್ಜರಿ ಸಿದ್ದತೆಗಳನ್ನು ಸಹ ಮಾಡಲಾಗಿತ್ತು. ವಧು ವರರು ಸಹ ಭಾರಿ ಗ್ರಾಂಡ್ ಆಗಿಯೇ ರೆಡಿಯಾಗಿದ್ದರು. ರಾಯಲ್ ಲುಕ್ಸ್ ನಲ್ಲಿ ಕಾಣಿಸಿಕೊಂಡಿದ್ದರು. ಭಾರಿ ಡಿಸೈನಿಂಗ್ ಇರುವಂತಹ ಮದುವೆ ವಸ್ತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಸಂಬಂಧ ಕೆಲವೊಂದು ಪೊಟೋಗಳನ್ನು ಸಹ ತೆಗೆಯಲಾಗಿದ್ದು, ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಇನ್ನೂ ಅವರ ವೇಷಧಾರಣೆಯನ್ನು ನೋಡುತ್ತಿದ್ದರೆ, ರಾಜಕುಟುಂಬಕ್ಕೆ ಸೇರಿದ ದಂಪತಿ ಎಂದು ಭಾವನೆ ಬರುತ್ತಿದೆ ಎನ್ನಲಾಗಿದೆ.

ಇನ್ನು ಮದುವೆಯಲ್ಲಿ ಒಬ್ಬರ ಮೇಲೋಬ್ಬರು ಹೂವುಗಳನ್ನು ಚೆಲ್ಲಿಕೊಂಡು, ಅತ್ಯಂತ ಸಂತೋಷಕರವಾದ ವಾತವರಣದಲ್ಲಿ ಮದುವೆಯಾಗಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅನೇಕ ಸಿನೆಮಾ ಸೆಲಬ್ರೆಟಿಗಳು ಈ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಅದರಲ್ಲೂ ಈ ಮದುವೆಗೆ ಗ್ಲೋಬಲ್ ಸ್ಟಾರ್‍ ರಾಮ್ ಚರಣ್ ಸೆಂಟರ್‍ ಆಫ್ ಅಟ್ರಾಕ್ಷನ್ ಆಗಿದ್ದರು ಎಂದರೇ ತಪ್ಪಾಗಲಾರದು. ಇನ್ನೂ ಶರ್ವಾನಂದ್ ಹಾಗೂ ರಾಮ್ ಚರಣ್ ಬಾಲ್ಯದಿಂದ ಒಳ್ಳೆಯ ಸ್ನೇಹಿತರು. ಈ ಕಾರಣದಿಂದ ರಾಮ್ ಚರಣ್ ಎರಡು ದಿನಗಳಿಂದ ಮದುವೆಯಲ್ಲಿ ಇದ್ದಾರೆ.

ಇನ್ನೂ ಹಿಂದೂ ಸಂಪ್ರದಾಯದಂತೆ ಶರ್ವಾನಂದ್ ಹಾಗೂ ರಕ್ಷಿತಾ ರೆಡ್ಡಿ ಮದುವೆ ನೆರವೇರಿದೆ. ಕಳೆದ ಜನವರಿ ಮಾಹೆಯಲ್ಲಿ ಈ ಜೋಡಿಯ ಎಂಗೇಜ್ ಮೆಂಟ್ ನಡೆದಿತ್ತು. ಶರ್ವಾನಂದ್ ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಕಾರಣ ಮದುವೆ ತಡವಾಗಿ ನೆರವೇರಿದೆ . ಇನ್ನೂ ಶರ್ವಾನಂದ್ ಅಭಿಮಾನಿಗಳೂ ಸೇರಿದಂತೆ ಅನೇಕರು ನೂತನ ವಧು ವರರಿಗೆ ಶುಭಾಷಯಗಳನ್ನು ಹರಿಬಿಡುತ್ತಿದ್ದಾರೆ.