ಶೋಭಿತಾನೂ ಅಲ್ಲ, ಬೇರೆ ನಟಿಯೂ ಅಲ್ಲ, ಆಕೆಯೊಂದಿಗೆ ಮದುವೆಯಾಗಲಿದ್ದಾರಂತೆ ಅಕ್ಕಿನೇನಿ ನಾಗಚೈತನ್ಯ?

ಟಾಲಿವುಡ್ ಅಕ್ಕಿನೇನಿ ಕುಟುಂಬದ ನಾಗಚೈತನ್ಯ ಕೆಲವು ವರ್ಷಗಳ ಹಿಂದೆಯಷ್ಟೆ ಸಮಂತಾ ಜೊತೆಗೆ ವಿಚ್ಚೇದನ ಪಡೆದುಕೊಂಡು ಸಿಂಗಲ್ ಆಗಿದ್ದಾರೆ. ಪ್ರೀತಿಸಿ ಮದುವೆಯಾದ ಈ ಜೋಡಿ ಕಡಿಮೆ ಸಮಯದಲ್ಲೇ ವಿಚ್ಚೇದನ ಪಡೆದುಕೊಂಡರು. ವಿಚ್ಚೇದನ ಬಳಿಕ ನಾಗಚೈತನ್ಯ ಎರಡನೇ ಮದುವೆಯ ಬಗ್ಗೆ ಅನೇಕ ಬಾರಿ ಸುದ್ದಿಗಳು ಕೇಳಿಬಂದವು. ಇದೀಗ ಮತ್ತೊಮ್ಮೆ ನಾಗಚೈತನ್ಯ ಎರಡನೇ ಮದುವೆಯ ಬಗ್ಗೆ ಸುದ್ದಿಯೊಂದು ಕೇಳಿಬರುತ್ತಿದ್ದು, ಆತ ಶೋಭಿತಾ ಅಲ್ಲ, ಬೇರೆ ನಟಿಯಲ್ಲ ಸಿನಿರಂಗಕ್ಕೆ ಸಂಬಂಧವಿಲ್ಲದ ಹುಡುಗಿಯೊಂದಿಗೆ ಮದುವೆಯಾಗಲಿದ್ದಾರೆ ಎಂಬ ರೂಮರ್‍ ಒಂದು ವೈರಲ್ ಆಗುತ್ತಿದೆ.

ಅಕ್ಕಿನೇನಿ ನಾಗಚೈತನ್ಯ ಹಾಗೂ ಸಮಂತಾ ಸುಮಾರು ತಿಂಗಳುಗಳ ಕಾಲ ಪ್ರೀತಿಸಿ ಮದುವೆಯಾದರು. ಮದುವೆಯಾದ ಮೂರು ವರ್ಷಗಳಲ್ಲೇ ಇಬ್ಬರೂ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಚೇದನ ಪಡೆದುಕೊಂಡರು. ವಿಚ್ಚೇದನದ ಬಳಿಕ ಇಬ್ಬರೂ ತಮ್ಮ ತಮ್ಮ ಜೀವನ ನಡೆಸುತ್ತಿದ್ದಾರೆ. ವಿಚ್ಚೇದನದ ಬಳಿಕ ಸಮಂತಾ ಮರುಮದುವೆಗಿಂತ ನಾಗಚೈತನ್ಯ ಮರು ಮದುವೆಯ ಬಗ್ಗೆ ಅನೇಕ ಸುದ್ದಿಗಳು ಕೇಳಿಬಂದವು. ಅದರಲ್ಲೂ ನಾಗಚೈತನ್ಯ ಹಾಗೂ ಯಂಗ್ ಬ್ಯೂಟಿ ಶೋಭಿತಾ ಧೂಳಿಪಾಲ ನಡುವೆ ಅಫೈರ್‍ ಇದೆ ಎಂಬ ಸುದ್ದಿ ಜೋರಾಗಿಯೇ ಕೇಳಿಬಂತು. ಕೆಲವೊಂದು ಬಾರಿ ಅವರಿಬ್ಬರೂ ಒಟ್ಟಿಗೆ ಸಹ ಕಾಣಿಸಿಕೊಂಡು ಈ ರೂಮರ್‍ ಗಳಿಗೆ ಮತಷ್ಟು ಹೈಪ್ ತಂದುಕೊಂಡಿದ್ದರು.

ಶೋಭಿತಾ ಹಾಗೂ ನಾಗಚೈತನ್ಯ ಮದುವೆ ಇನ್ನೇನು ಆಗ ಮದುವೆ, ಈಗ ಮದುವೆ ಎಂಬೆಲ್ಲಾ ಮಾತುಗಳು ಕೇಳಿಬರುತ್ತಿತ್ತು. ಆದರೆ ಇದೀಗ ಮತ್ತೊಂದು ರೂಮರ್‍ ವೈರಲ್ ಆಗುತ್ತಿದೆ. ಅದರಂತೆ ಚೈತು ಎರಡನೇ ಮದುವೆಗೆ ಸಿದ್ದರಾಗಿದ್ದಾರಂತೆ. ನಾಗಾರ್ಜುನ ತನ್ನ ಮಗನಿಗೆ ಎರಡನೇ ಮದುವೆ ಮಾಡಲು ಹುಡುಗಿಯ ಹುಡಕಾಟದಲ್ಲಿದ್ದಾರೆ ಎನ್ನಲಾಗಿದೆ. ಇದೀಗ ನಾಚೈತನ್ಯ ಬ್ಯುಸಿನೆಸ್ ಕುಟುಂಬಕ್ಕೆ ಸೇರಿದ ಯುವತಿಯೊಬ್ಬರನ್ನು ಮದುವೆಯಾಗಲಿದ್ದಾರಂತೆ. ಆಕೆಗೆ ಸಿನಿರಂಗದ ಜೊತೆಗೆ ಯಾವುದೇ ಸಂಬಂಧವಿಲ್ಲ ಎಂದೂ ಸಹ ಹೇಳಲಾಗುತ್ತಿದೆ. ಆದರೆ ಆಕೆ ಯಾರು ಎಂಬ ಬಗ್ಗೆ ಮಾತ್ರ ವಿವರ ಹೊರಬಂದಿಲ್ಲ. ಆದರೆ ಶೀಘ್ರದಲ್ಲೇ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಕ್ಕಿನೇನಿ ಕುಟುಂಬದಿಂದಾಗಲೀ ಅಥವಾ ಬೇರೆಕಡೆಯಿಂದಾಗಲಿ ಅಧಿಕೃತ ಮಾಹಿತಿ ಹೊರಬಂದಿಲ್ಲ.

ಇನ್ನೂ ಶೋಭಿತಾ ಹಾಗೂ ನಾಗಚೈತನ್ಯ ಸುಮಾರು ದಿನಗಳಿಂದ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಲೇ ಇದೆ. ಜೊತೆಗೆ ಕೆಲವೊಂದು ಬಾರಿ ಈ ಜೋಡಿ ವಿದೇಶಗಳಲ್ಲೂ ಸಹ ಸುತ್ತಾಡಿದ್ದರು. ಕೆಲವೊಂದು ಪೊಟೋಗಳೂ ಸಹ ವೈರಲ್ ಆಗಿತ್ತು. ಆದರೆ ಇಬ್ಬರೂ ಅವರ ಡೇಟಿಂಗ್ ಬಗ್ಗೆ ಅಧಿಕೃತ ಹೇಳಿಕೆ ನೀಡಿರಲಿಲ್ಲ. ಇದೀಗ ಶೋಭಿತಾರನ್ನು ಬಿಟ್ಟು ನಾಗಚೈತನ್ಯ ಬೇರೆ ಹುಡುಗಿಯನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಾಟ್ ಟಾಪಿಕ್ ಆಗಿ ಹರಿದಾಡುತ್ತಿದೆ.