ತನ್ನ ಪ್ರಿಯತಮನಿಂದ ಭಾರಿ ಚಿತ್ರಹಿಂಸೆ, ಮಾಜಿ ಪ್ರಿಯಕರನಿಂದ ಹಲ್ಲೆಗೆ ಒಳಗಾಗಿದ್ದರಂತೆ ತಮಿಳು ನಟಿ ಅನಿಕಾ….!

Follow Us :

ಸಿನಿರಂಗದಲ್ಲಿ ತೆರೆಯ ಮೇಲೆ ರಂಜಿಸುವಂತಹ ಅನೇಕ ನಟಿಯರ ನಿಜ ಜೀವನದಲ್ಲಿ ತುಂಬಾನೆ ನೋವುಗಳು ಇರುತ್ತವೆ. ಇದೀಗ ತಮಿಳು ನಟಿ ಅನಿಕಾ ವಿಜಯ್ ವಿಕ್ರಮನ್ ಸಹ ತುಂಬಾ ನೋವನ್ನು ಅನುಭವಿಸಿದ್ದಾರೆ. ತನ್ನ ಮಾಜಿ ಪ್ರಿಯಕರ ಆಕೆಗೆ ತುಂಬಾನೆ ಹಿಂಸೆ ನೀಡಿದ್ದಾನಂತೆ. ಅನಿಕಾ ಈ ಬಗ್ಗೆ ಕೆಲವೊದು ಪೊಟೋಗಳನ್ನು ಹಂಚಿಕೊಂಡಿದ್ದು, ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಇನ್ನೂ ಆಕೆ ಹಂಚಿಕೊಂಡ ಪೊಟೋಗಳನ್ನು ನೋಡಿದ ಆಕೆಯ ಅಭಿಮಾನಿಗಳೂ ಸೇರಿದಂತೆ ಅನೇಕರು ಶಾಕ್ ಆಗಿದ್ದಾರೆ. ಇನ್ನೂ ಆಕೆಗೆ ಕೆಲವರು ಸಪೋರ್ಟ್ ಸಹ ಮಾಡುತ್ತಿದ್ದಾರೆ.

ತಮಿಳು ನಟಿ ಅನಿಕಾ ವಿಜಯ್ ವಿಕ್ರಮನ್ ತನಗೆ ತನ್ನ ಪ್ರಿಯಕರ ನೀಡುತ್ತಿದ್ದ ಚಿತ್ರಹಿಂಸೆಯ ಬಗ್ಗೆ ಮಾಹಿತಿ ರಿವೀಲ್ ಮಾಡಿದ್ದಾರೆ. ಆಕೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಸಹ ಮಾಡಿದ್ದಾನೆ. ಅತ್ಯಂತ ಕ್ರೂರವಾಗಿ ಹೊಡೆದಿದ್ದಾನೆ ಎಂದು ಆರೋಪ ಮಾಡಿರುವ ಅನಿಕಾ ಕೆಲವೊಂದು ಪೊಟೋಗಳನ್ನು ಸಹ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಈ ಪೊಟೋಗಳನ್ನು ಹಂಚಿಕೊಂಡ ಅನಿಕಾ  ನಾನು ಈ ಈ ಕ್ರೂರ ಕೃತ್ಯದಿಂದ ಆದಷ್ಟು ಶೀಘ್ರವಾಗಿ ಹೊರಬರಲು ಪ್ರಯತ್ನಿಸುತ್ತಿದ್ದೇನೆ. ನನ್ನ ಬದುಕನ್ನು ಮರಳಿ ಪಡೆದುಕೊಂಡು ಶೀಘ್ರವಾಗಿ ನಟನೆಗೆ ವಾಪಸ್ಸು ಆಗುತ್ತೇನೆ ಎಂದು ಹೇಳಿದ್ದಾರೆ. ಇನ್ನೂ ಆಕೆ ಹಂಚಿಕೊಂಡಿರುವ ಪೊಟೋಗಳಲ್ಲಿ ಆಕೆಯ ಮುಖದ ಮೇಲೆ ಗಂಭೀರವಾದ ಗಾಯಗಳಾಗಿದೆ. ಕಣ್ಣುಗಳ ಸುತ್ತಲೂ ರಕ್ತ ಹೆಪ್ಪು ಗಟ್ಟಿದೆ. ಮುಖ, ಕೈ ಹಾಗೂ ಎದೆಯ ಮೇಲೆ ಸಹ ಗಾಯಗಳಾಗಿವೆ. ಇನ್ನೂ ಈ ಬಗ್ಗೆ ಅನಿಕಾ ಪೊಲೀಸರಿಗೂ ಸಹ ದೂರು ನೀಡಿದ್ದಾರೆ. ಸದ್ಯ ಆಕೆಯ ಪ್ರಿಯಕರ ಪರಾರಿಯಲ್ಲಿದ್ದಾನಂತೆ. ಆದರೆ ತನಗೂ ಹಾಗೂ ಕುಟುಂಬಕ್ಕೂ ಬೆದರಿಕೆಯಾಕುತ್ತಿದ್ದಾನೆ ಎಂದು ನಟಿ ಗಂಭೀರವಾದ ಆರೋಪಗಳನ್ನು ಮಾಡಿದ್ದಾರೆ.

ಇನ್ನೂ ಈ ಬಗ್ಗೆ ಸುದೀರ್ಘ ನೋಟ್ ಸಹ ಹಂಚಿಕೊಂಡಿದ್ದಾರೆ ಅನಿಕಾ. ನಾನು ಹಾಗೂ ಅನೂಪ್ ಪಿಳ್ಳೈ ಎಂಬಾತ ಸುಮಾರು ದಿನಗಳಿಂದ ಪ್ರೀತಿಸುತ್ತಿದ್ದೇವೆ ಆದರೆ ಆತ ಕೆಲವು ದಿನಗಳಿಂದ ಮಾನಸಿಕ ಹಿಂಸೆ ಹಾಗೂ ದೈಹಿಕವಾಗಿ ಹಿಂಸೆ ಮಾಡುತ್ತಿದ್ದಾನೆ. ಅಂತಹ ವ್ಯಕ್ತಿಯನ್ನು ನಾನು ಎಂದೂ ನೋಡಿಲ್ಲ. ಇಂತಹ ನೋವುಗಳನ್ನುಕೊಡುವುದರ ಜೊತೆಗೆ ಬೆದರಿಕೆ ಸಹ ಹಾಕುತ್ತಿದ್ದಾನೆ. ಆತ ನನಗೆ ಈ ರೀತಿ ಮಾಡುತ್ತಾನೆ ಎಂದು ಊಹೆ ಸಹ ಮಾಡಿರಲಿಲ್ಲ. ಮೊಲದ ಬಾರಿಗೆ ನನ್ನ ಮೇಲೆ ಹಲ್ಲೆ ನಡೆಸಿದಾಗ ನಾನು ಚೆನೈನಲ್ಲಿದ್ದೆ. ನನಗೆ ಎರಡನೇ ಬಾರಿ ಹೊಡೆದಾಗ ನಾನು ಬೆಂಗಳೂರಿನಲ್ಲಿ ಪೊಲೀಸರಿಗೆ ದೂರು ನೀಡಿದ್ದೆ. ಇನ್ನೂ ಪೊಲೀಸರು ಸಹ ಆತನಿಗೆ ಸಪೋರ್ಟ್ ಮಾಡುತ್ತಿದ್ದಾರೆ ಎಂದು ಅಸಮಧಾನ ಹೊರಹಾಕಿದ್ದಾರೆ. ಕೆಲವು ವರ್ಷಗಳಿಂದ ನಾನು ಅವನಿಂದ ಅನೇಕ ಬಾರಿ ಮೋಸ ಹೋಗಿದ್ದೇನೆ. ಇದೀಗ ನಾನು ಅದನ್ನು ಅರ್ಥ ಮಾಡಿಕೊಂಡು ಅವನಿಂದ ದೂರವಾಗಲು ನಿರ್ಧಾರ ಮಾಡಿದ್ದೇನೆ. ಆದರೆ ಅವನು ಅದಕ್ಕೆ ಸಿದ್ದವಾಗಿಲ್ಲ ಎಂದಿದ್ದಾರೆ.

ಇನ್ನೂ ಆತನ ಕಾರಣದಿಂದ ಆಕೆ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಿದ್ದಾಳೆ ಎಂಬುದನ್ನು ಆಕೆ ಸುದೀರ್ಘವಾದ ನೋಟ್ ಮೂಲಕ ತಿಳಿಸಿದ್ದಾರೆ. ಸದ್ಯ ಆಕೆ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅನೇಕರು ಆಕೆಗೆ ಬೆಂಬಲ ಸಹ ಸೂಚಿಸುತ್ತಿದ್ದಾರೆ.