ಸಾರ್ವಜನಿಕ ಸ್ಥಳದಲ್ಲೇ ಪ್ಯಾಂಟ್ ಲೆಸ್ ಆಗಿ ವಿಭಿನ್ನ ಪೋಟೋ ಹಂಚಿಕೊಂಡ ತಾಪ್ಸಿ, ವೈರಲ್ ಆದ ಶಾಕಿಂಗ್ ಪೊಟೋ….!

Follow Us :

ನಟಿ ತಾಪ್ಸಿ ಪನ್ನು ಮೊದಲಿಗೆ ಟಾಲಿವುಡ್ ನಲ್ಲಿ ಸಾಕಷ್ಟು ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದರು. ಆಕೆಯ ಬ್ಯಾಡ್ ಲಕ್ ನಿಂದಾಗಿ ಕ್ರಮೇಣ ಸಿನೆಮಾಗಳಲ್ಲಿ ಅವಕಾಶಗಳನ್ನು ಕಳೆದುಕೊಂಡರು. ಆದರೆ ನಿರಾಸೆಯಾಗದ ಈಕೆ ಬಾಲಿವುಡ್ ನತ್ತ ಸಾಗಿದರು. ಬಾಲಿವುಡ್ ನಲ್ಲಿ ಒಳ್ಳೆಯ ಅವಕಾಶಗಳನ್ನು ಪಡೆದುಕೊಂಡ ಈಕೆ ಇದೀಗ ಬಾಲಿವುಡ್ ನಲ್ಲಿ ಅನೇಕ ಸಿನೆಮಾಗಳನ್ನು ಮಾಡುತ್ತಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿರುವ ತಾಪ್ಸಿ ಹಂಚಿಕೊಂಡ ಪೊಟೋ ಒಂದು ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದೆ. ಸಾರ್ವಜನಿಕ ಸ್ಥಳದಲ್ಲೇ ಪ್ಯಾಂಟ್ ಲೆಸ್ ಆಗಿ ಶಾಕ್ ಆಗುವಂತ ಪೋಸ್ ಕೊಟ್ಟಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ತುಂಭಾ ಆಕ್ಟೀವ್ ಆಗಿರುವ ತಾಪ್ಸಿ ಪನ್ನು ಪೊಟೋಗಳು, ವಿಡಿಯೋಗಳ ಜೊತೆಗೆ ತಮ್ಮ ವೈಯುಕ್ತಿಕ ಜೀವನ ಹಾಗೂ ಸಿನೆಮಾಗಳ ಬಗ್ಗೆ ಸಹ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಪೊಟೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಅದೂ ಸಾರ್ವಜನಿಕವಾಗಿ ಆಕೆ ಪ್ಯಾಂಟ್ ಲೆಸ್ ಆಗಿ ಪಕ್ಕದಲ್ಲಿ ಸ್ನೇಹಿತೆಯ ಮೇಲೆ ಕಾಲು ಹಾಕಿಕೊಂಡು ಗಟ್ಟಿಯಾಗಿ ತಬ್ಬಿಕೊಂಡ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಇನ್ನೂ ತಾಪ್ಸಿ ಹಾಕಿಕೊಂಡ ಡ್ರೆಸ್ ಸಹ ತುಂಬಾ ಚಿಕ್ಕದಾಗಿದೆ. ಇನ್ನೂ ಈ ಪೊಟೋಗೆ ತಾಪ್ಸಿ ಟ್ರೀ ಅಂಡ್ ಮಂಕಿ ಎಂದ ಕ್ಯಾಪ್ಷನ್ ಸಹ ನೀಡಿದ್ದಾರೆ. ಆಕೆಯ ಸ್ನೇಹಿತೆಯನ್ನು ಮರಕ್ಕೆ ತನ್ನನ್ನು ಕೋತಿಗೆ ಹೋಲಿಕೆ ಮಾಡಿಕೊಂಡಿದ್ದಾರೆ. ಇನ್ನೂ ತಾಪ್ಸಿ ಹಂಚಿಕೊಂಡ ಈ ಪೊಟೋ ಸಖತ್ ವೈರಲ್ ಆಗುತ್ತಿದೆ ಜೊತೆಗೆ ಆಕೆಯನ್ನು ಟ್ರೋಲ್ ಸಹ ಮಾಡುತ್ತಿದ್ದಾರೆ.

ತಾಪ್ಸಿ ಹಂಚಿಕೊಂಡ ಪೊಟೋ ಕಡಿಮೆ ಸಮಯದಲ್ಲೇ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದೇ ರೀತಿಯಲ್ಲಿ ಟ್ರೋಲ್ ಗಳು ಸಹ ಎದುರಾಗಿದೆ. ಇದೇನು ಪೋಸ್ ಎಂದು, ಸಾರ್ವಜನಿಕವಾಗಿ ಈ ರೀತಿಯ ಪೊಟೋ ಶೇರ್‍ ಮಾಡುವುದು ಅವಸರವೇ, ಹುಡುಗಿಯಾದರೇ ಏನು ಅಂತಹ ಪೋಸ್ ಕೊಡೋದಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಜೊತೆಗೆ ಟ್ರೋಲ್ ಸಹ ಮಾಡುತ್ತಿದ್ದಾರೆ. ಇನ್ನೂ ಈ ಪೊಟೋಗಳಿಗೆ ಕೆಲವು ಸೆಲಬ್ರೆಟಿಗಳೂ ಸಹ ರಿಯಾಕ್ಟ್ ಆಗಿರುವುದು ವಿಶೇಷ ಎನ್ನಬಹುದಾಗಿದೆ. ಕೆಲವು ದಿನಗಳ ಹಿಂದೆ ಸಹ ತಾಪ್ಸಿ ಪನ್ನು ಬ್ಲಾಕ್ ಅಂಡ್ ವೈಟ್ ಮೋಡ್ ನಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದರು. ಈ ಪೊಟೋಗಳೂ ಸಹ ಸಖತ್ ವೈರಲ್ ಆಗಿತ್ತು.

ಇನ್ನೂ ತಾಪ್ಸಿ ಪನ್ನು ತನ್ನ ಸಂಪೂರ್ಣ ಗಮನವನ್ನು ಬಾಲಿವುಡ್ ಸಿನೆಮಾಗಳ ಮೇಲೆ ಇಟ್ಟಿದ್ದು, ಬಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಆಕೆ ಬದ್ಲಾ, ಗೇಮ್ ಓವರ್‍, ರಶ್ಮಿ ರಾಕೇಟ್, ಸಾಂದ್ ಕಿ ಆಂಕ್, ಶಭಾಷ್ ಮಿಥು ಮೊದಲಾದ ಸಿನೆಮಾಗಳ ಮೂಲಕ ಒಳ್ಳೆಯ ಹೆಸರು ತಂದುಕೊಂಡಿದ್ದಾರೆ. ಇದೀಗ ಆಕೆ ಲಡ್ಕಿ ಹೈ ಕಹಾ, ಡನ್ಕಿ, ಫಿರ್‍ ಯಾ ಹಾಸಿನ್ ದಿಲ್ ರೂಬಾ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.