ಬಿಜೆಪಿ ಲೋಕಸಭೆಯಲ್ಲಿ ಸೋಲುವ ಭೀತಿಯಿಂದ ತುರ್ತಾಗಿ ಸಿಎಎ ಜಾರಿ ಮಾಡಿದೆ ಎಂದ ಗೃಹ ಸಚಿವ ಪರಮೇಶ್ವರ್….!

Follow Us :

ನಿನ್ನೆಯಷ್ಟೆ ಕೇಂದ್ರ ಸರ್ಕಾರ ಸಿಎಎ ಜಾರಿ ಸಂಬಂಧ ಅಧಿಸೂಚನೆ ಹೊರಡಿಸಿದ್ದು, ಈ ಕುರಿತು ವಿರೋಧ ಪಕ್ಷಗಳು ತಮ್ಮದೇ ಆದ ಶೈಲಿಯಲ್ಲಿ ವಿರೋಧ ಮಾಡುತ್ತಿದ್ದಾರೆ. ಇದೀಗ ಕರ್ನಾಟಕ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್‍ ಈ ಕುರಿತು ರಿಯಾಕ್ಟ್ ಆಗಿದ್ದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಭೀತಿ ಶುರುವಾಗಿದ್ದು, ಈ ಕಾರಣದಿಂದಲೇ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡಿದೆ ಎಂದು ವ್ಯಂಗವಾಡಿದ್ದಾರೆ.

ಸಿಎಎ ಜಾರಿ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಈಗಾಗಲೇ ಜನರು ವಿರೋಧ ಮಾಡಿದ್ದಾರೆ. ಅನೇಕ ಪ್ರತಿಭಟನೆಗಳೂ ಸಹ ನಡೆದಿದೆ. ಆದರೆ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಚುನಾವಣಾ ದೃಷ್ಟಿಯಿಂದ ಬಿಜೆಪಿ ಈ ನಿರ್ಧಾರ ತೆಗೆದುಕೊಂಡಿದೆ. ಇದರಲ್ಲಿ ರಾಜಕೀಯ ಅಡಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಬಿಜೆಪಿಯವರಿಗೆ ಎಲ್ಲೋ ಸೋಲುವ ಆತಂಕ ಕಾಡುತ್ತಿದೆ. ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಮದು ಹೇಳಿಕೊಳ್ಳುತ್ತಿದೆಯಾದರೂ ಅವರಿಗೆ ಸೋಲಿನ ಭೀತಿಯಿದೆ. ಅವರಿಗೆ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸಿಎಎ ಜಾರಿಯಂತಹ ತೀರ್ಮಾನ ಮಾಡಿದೆ ಎಂದು ಕಿಡಿಕಾರಿದರು.

ಇನ್ನೂ ಈ ಕುರಿತು ಪಶ್ವಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಸಹ ಆಕ್ರೋಷ ಹೊರಹಾಕಿದ್ದಾರೆ. ಸಿಎಎ ಹಾಗೂ ಎನ್.ಆರ್‍.ಸಿ ಪಶ್ವಿಮ ಬಂಗಾಳ ಹಾಗೂ ಈಶಾನ್ಯ ಭಾಗಗಳಿಗೆ ಸೂಕ್ಷ್ಮವಾದ ವಿಚಾರವಾಗಿದೆ. ಲೋಕಸಭಾ ಚುನಾವಣೆಗೆ ಮುನ್ನ ಅಶಾಂತಿಯನ್ನು ಸೃಷ್ಟಿ ಮಾಡಲು ಬಿಜೆಪಿ ಈ ಹುನ್ನಾರ ಮಾಡಿದೆ. ಚುನಾವಣೆಗೂ ಮುನ್ನಾ ಅಶಾಂತಿಯನ್ನು ನಾವು ಬಯಸೊಲ್ಲ. ಆರು ತಿಂಗಳ ಹಿಂದೆ ನೀವು ಈ ನಿಯಮಗಳನ್ನು ತಿಳಿಸಬೇಕಿತ್ತು. ಅದರಲ್ಲಿ ಒಳ್ಳೆಯ ವಿಚಾರಗಳಿದ್ದರೇ ಟಿಎಂಸಿ ಸಹ ಬೆಂಬಲಿಸುತ್ತದೆ. ಕೆಟ್ಟದಾಗುವ ವಿಚಾರ ವಿದ್ದರೇ ವಿರೋಧ ಸಹ ಮಾಡುತ್ತೇವೆ. ರಂಜಾನ್ ಹಬ್ಬಕ್ಕೂ ಮುಂಚಿನ ದಿನಾಂಕವನ್ನು ಏಕೆ ಆಯ್ಕೆ ಮಾಡಲಾಗಿದೆ ಎಂಬುದು ಸಹ ನನಗೆ ಗೊತ್ತಿದೆ. ಯಾವುದೇ ವದಂತಿಗಳನ್ನು ಹಬ್ಬಿಸದಂತೆ ನಾನು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.