ಸೋಷಿಯಲ್ ಮಿಡಿಯಾ ಮೂಲಕ ಒಲಿದು ಬಂದ ಅದೃಷ್ಟ, ರೀಲ್ಸ್ ಮಾಡುವ ಬ್ಯೂಟಿಗೆ ಹಿರೋಯಿನ್ ಮಾಡಿದ ಆರ್.ಜಿ.ವಿ…..!

Follow Us :

ಸೋಷಿಯಲ್ ಮಿಡಿಯಾ ಪ್ರಚಲಿತಕ್ಕೆ ಬಂದ ಬಳಿಕ ಅನೇಕರು ಬಳಕೆ ಮಾಡುತ್ತಾ ಫೇಂ ಪಡೆದುಕೊಂಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಕಂಟೆಟ್ ಗಳ ಮೂಲಕ ಅನೇಕರು ಭಾರಿ ಫೇಮಸ್ ಸಹ ಆಗಿದ್ದಾರೆ. ಇತ್ತೀಚಿಗಂತೂ ರೀಲ್ಸ್ ಮೂಲಕ ಸಾಮಾನ್ಯರು ಸಹ ಸಿನೆಮಾ ತಾರೆಯರಂತೆ ಖ್ಯಾತಿ ಪಡೆದುಕೊಂಡಿದ್ದಾರೆ. ಇದೀಗ ರೀಲ್ಸ್ ಮಾಡುವ ಚೆಲುವೆಗೆ ಸಿನೆಮಾ ನಟಿಯಾಗುವ ಅವಕಾಶ ದೊರೆತಿದೆ. ಅದರಲ್ಲೂ ಸ್ಟಾರ್‍ ನಿರ್ದೇಶಕ ಆರ್‍.ಜಿ.ವಿ ರವರ ಸಿನೆಮಾದಲ್ಲಿ ಆಕೆ ನಟಿಯಾಗಲಿದ್ದಾರೆ ಎನ್ನಲಾಗುತ್ತಿದೆ.

ಸೋಷಿಯಲ್ ಮಿಡಿಯಾದಲ್ಲಿ ಇನ್ಸ್ಟಾ ರೀಲ್ಸ್ ಗಳ ಹವಾ ಜೋರಾಗಿಯೇ ಇದೆ ಎನ್ನಬಹುದಾಗಿದೆ. ಕೇರಳ ಮೂಲದ ಯುವತಿಯೊಬ್ಬರು ಸೀರೆಯನ್ನು ಧರಿಸಿ ವಿವಿಧ ರೀತಿಯ ರೀಲ್ಸ್ ಗಳನ್ನು ಮಾಡಿದ್ದಾರೆ. ಯುವತಿ ಸೀರೆಯಲ್ಲಿ ಮಾಡಿದ ರೀಲ್ಸ್ ಕಂಡ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇಂಪ್ರೆಸ್ ಆಗಿದ್ದಾರೆ. ಆ ಯುವತಿಗೆ ತಮ್ಮ ಸಿನೆಮಾದಲ್ಲಿ ನಾಯಕಿಯಾಗಿ ಅವಕಾಶ ಸಹ ನೀಡಿದ್ದಾರೆ. ಇನ್ನೂ ಈ ಸಂಬಂಧ ಆ ಯುವತಿಯ ರೀಲ್ಸ್ ಬಗ್ಗೆ ಮಾತನಾಡಿ ಆರ್‍.ಜಿ.ವಿ ಸೀರೆ ಎಷ್ಟು ಸುಂದರವಾಗಿರುತ್ತದೆ ಎಂದು ಆಕೆಯನ್ನು ನೋಡಿದ ಮೇಲೆ ತಿಳಿಯಿತು. ಎಲ್ಲರೂ ಸೀರೆ ಸುಂದರವಾಗಿರುತ್ತದೆ ಎಂದು ಹೇಳುತ್ತಿದ್ದರು. ಆದರೆ ನಾನು ಅದನ್ನು ನಂಬಿರಲಿಲ್ಲ. ಆದರೆ ಈ ವಿಡಿಯೋ ನೋಡಿದ ಬಳಿಕ ನನ್ನ ನಿರ್ಧಾರ ಬದಲಾಗಿದೆ. ಯಾರಾದರೂ ಆಕೆಯನ್ನು ಹುಡುಕಿಕೊಡಿ. ಆಕೆಯೊಂದಿಗೆ ಸೀರೆ ಎಂಬ ಸಿನೆಮಾ ಮಾಡಲು ನಿರ್ಧರಿಸಿದ್ದೇನೆ ಎಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು.

ಅಷ್ಟಕ್ಕೂ ಸೀರೆಯುಟ್ಟ ಆ ಚೆಲುವೆಯ ಹೆಸರು ಶ್ರೀಲಕ್ಷ್ಮೀ ಸತೀಶನ್. ಆಕೆ ಕೇರಳ ಮೂಲದ ಮಾಡಲ್ ಆಗಿದ್ದು, ಸೀರೆಯಲ್ಲಿ ಆಕೆ ಕೆಲವೊಂದು ಸುಂದರವಾದ ವಿಡಿಯೋಗಳನ್ನು ಮಾಡಿ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸೀರೆಯಲ್ಲಿ ಆಕೆ ತುಂಬಾನೆ ರೊಮ್ಯಾಂಟಿಕ್ ಆಗಿ ಕಾಣುತ್ತಾರೆ. ಇದೀಗ ಸ್ಟಾರ್‍ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಹ ಆಕೆಯನ್ನು ಹೊಗಳಿದ್ದು, ಆಕೆಯ ಕ್ರೇಜ್ ದಿಡೀರ್‍ ನೆ ಮತಷ್ಟು ಏರಿದೆ. ವರ್ಮಾ ಆಕೆಯ ಬಗ್ಗೆ ಪೋಸ್ಟ್ ಮಾಡಿದ ಬಳಿಕ ಆಕೆ 70 ಸಾವಿರ ಫಾಲೋವರ್ಸ್‌ಗಳನ್ನು ಸಹ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಅಷ್ಟೇಅಲ್ಲದೇ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಶ್ರೀಲಕ್ಷ್ಮೀ ನಾನು ವರ್ಮಾ ರವರ ಜೊತೆಗೆ ಮಾತನಾಡಿದ್ದೇನೆ, ಅವರು ಸಿನೆಮಾ ಮಾಡುವುದಾಗಿ ಸಹ ಹೇಳಿದ್ದಾರೆ. ಆದರೆ ಯಾವುದೇ ರೀತಿಯ ಒಪ್ಪಂದ ಮಾಡಿಕೊಂಡಿಲ್ಲ ಎಂದು ಆಕೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.