Film News

ನನ್ನನ್ನು ಕೆಣಕಿದ್ದೀರಾ ಸುಮ್ಮನೆ ಇರುವುದಿಲ್ಲ, ನಾನು ಏನು ಎಂಬುದನ್ನು ತೋರಿಸುತ್ತೇನೆ ಎಂದು ಖಡಕ್ ವಾರ್ನ್ ಕೊಟ್ಟ ಅನಸೂಯ…!

ಜಬರ್ದಸ್ತ್ ಮೂಲಕ ಫೇಂ ಪಡೆದುಕೊಂಡ ಸ್ಟಾರ್‍ ಬ್ಯೂಟಿ ಅನಸೂಯ ಸದ್ಯ ಕಿರುತೆರೆ ಶೋಗಳಿಂದ ದೂರವುಳಿದು ಸಿನೆಮಾಗಳಲ್ಲೇ ಪುಲ್ ಬ್ಯುಸಿಯಾಗಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಆಕ್ಟೀವ್ ಆಗಿರುತ್ತಾರೆ. ಆಕೆ ಕೆಲವೊಮ್ಮೆ ಹಂಚಿಕೊಳ್ಳುವಂತಹ ಪೋಸ್ಟ್ ಗಳ ಕಾರಣದಿಂದ ಸಿಕ್ಕಾಪಟ್ಟೆ ಟ್ರೋಲ್ ಸಹ ಆಗುತ್ತಿರುತ್ತಾರೆ. ಆ ಟ್ರೋಲ್ ಗಳಿಗೆ ಸ್ಟ್ರಾಂಗ್ ಕೌಂಟರ್‍ ಸಹ ಕೊಡುತ್ತಿರುತ್ತಾರೆ. ಇದೀಗ ಆಕೆ ಟ್ರೋಲರ್‍ ಗಳಿಗೆ ಮತ್ತೊಮ್ಮೆ ಸ್ಟ್ರಾಂಗ್ ಕೌಂಟರ್‍ ಕೊಟ್ಟಿದ್ದಾರೆ.

ನಟಿ ಅನಸೂಯ ಇತ್ತೀಚಿಗೆ ವಿಜಯ್ ದೇವರಕೊಂಡ ರನ್ನು ಟಾರ್ಗೆಟ್ ಮಾಡಿಕೊಂಡು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಖುಷಿ ಸಿನೆಮಾದ ಪೋಸ್ಟರ್‍ ಉದ್ದೇಶಿಸಿ ಆಕೆ ಪರೋಕ್ಷವಾಗಿ ವಿಜಯ್ ದೇವರಕೊಂಡ ರನ್ನು ಕೆಣಕಿದ್ದರು. ಈ ಕಾರಣದಿಂದ ಆಕೆ ಹಾಗೂ ವಿಜಯ್ ದೇವರಕೊಂಡ ಫ್ಯಾನ್ಸ್ ನಡುವೆ ಹೋರಾಟ ಶುರುವಾಗಿದೆ. ಈ ವಿವಾದ ದಿನೇ ದಿನೇ ಹೆಚ್ಚಾಗುತ್ತಲೆ ಇದ್ದು, ಅನಸೂಯ ವಿರುದ್ದ ಅನೇಕ ವಿಮರ್ಶೆಗಳು ಎದುರಾಗುತ್ತಲೇ ಇದೆ. ಆದರೆ ಅನಸೂಯ ಮಾತ್ರ ತಗ್ಗೆದೇ ಲೇ ಎಂದು ಸ್ಟ್ರಾಂಗ್ ಆಗಿಯೇ ವಿಮರ್ಶೆಗಳನ್ನು ಎದುರಿಸುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಮತ್ತೊಮ್ಮೆ ತನ್ನ ಇನ್ಸ್ಟಾ ಸ್ಟೇಟಸ್ ನಲ್ಲಿ ಸುಧೀರ್ಘವಾದ ಪೋಸ್ಟ್ ಹಂಚಿಕೊಂಡು ವಿಮರ್ಶೆ ಮಾಡುವವರಿಗೆ ಎಚ್ಚರಿಕೆಯ ಸಂದೇಶ ಹಾಕಿದ್ದಾರೆ. ಆಕೆಯ ಪೋಸ್ಟ್ ಗಳು ದಿನೇ ದಿನೇ ಮತಷ್ಟು ಸ್ಟ್ರಾಂಗ್ ಆಗಿಯೇ ಕೌಂಟರ್‍ ಕೊಡುತ್ತಿದ್ದಾರೆ.

ಇನ್ನೂ ಅನಸೂಯ ತನ್ನ ಪೋಸ್ಟ್ ನಲ್ಲಿ ಈ ರೀತಿ ಹೇಳಿದ್ದಾರೆ. ನೀನು ಮಾಡಿದಂತಹ ತಪ್ಪುಗಳನ್ನು ತಿಳಿದುಕೊಳ್ಳುವವರೆಗೂ ನಾನು ಇದೇ ರೀತಿ ಮಾಡುತ್ತಲೇ ಇರುತ್ತೇನೆ. ಅದರಿಂದ ನಾನು ಮತಷ್ಟು ವಿರೋಧ ಎದುರಿಸುತ್ತೇನೆ ಆದರೂ ಸಹ ನಾನು ಅದನ್ನು ಬಿಡುವ ಪ್ರಶ್ನೆಯಿಲ್ಲ. ನೀನು ಮಾಡಿದಂತಹದ್ದರಿಂದ ನೀನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನನಗೆ ನ್ಯಾಯ ಹಾಗೂ ಧರ್ಮದ ಮೇಲೆ ನಂಬಿಕೆ ಇದೆ. ಅಳುತ್ತಾ ಕಣ್ಣಿರು ಹಾಕಿ ಸಿಂಪತಿ ಪಡೆದುಕೊಳ್ಳಲು ನಾನು ಮೋಸಗಾತಿಯಲ್ಲ. ನೀವು ಎಷ್ಟು ಕಳೆಗೆ ಎಳೆದರೂ, ನನ್ನ ಮೇಲೆ ಕೆಸರು ಎರಚಿದರೂ ನನ್ನ ಹೋರಾಟ ನಿಲ್ಲುವುದಿಲ್ಲ. ಈ ವಿವಾದದಲ್ಲಿ ಯಾರು ತಪ್ಪು ಯಾರು ಸರಿ ಎಂಬುದು ತಿಳಿಯುವ ದಿನ ಬಂದೇ ಬರುತ್ತದೆ. ನನಗೆ ನಂಬಿಕೆ ಇದೆ. ನನಗೆ ನನ್ನ ವರ್ಕ್, ಟ್ಯಾಲೆಂಟ್ ಅಟೆನ್ಷನ್ ತಂದು ಕೊಡುತ್ತವೆ. ಅದಕ್ಕೆ ನಾನು ಅರ್ಹಳು. ಅಟೆನ್ಷನ್ ಎಂಬುದು ನನ್ನ ವೃತ್ತಿಯಲ್ಲಿನ ಭಾಗ. ನನ್ನಲ್ಲಿನ ತಾಯಿಯನ್ನು ಟಾರ್ಗೆಟ್ ಮಾಡಿದ್ದಾರೆ. ಆಕೆ ತಿರುಗಿ ಬಿದ್ದರೇ ಹೇಗಿರುತ್ತದೆ ಎಂಬುದನ್ನು ತೋರಿಸುತ್ತೇನೆ. ಹಣ ಕೊಟ್ಟು ಟ್ರೋಲ್ ಮಾಡುವುದಕ್ಕೆ ನಾನು ಬಲಹೀನಳ್ಳಲ್ಲ ಎಂದು ಸ್ಟ್ರಾಂಗ್ ವಾರ್ನ್ ಕೊಟ್ಟಿದ್ದಾರೆ.

ಸದ್ಯ ಅನಸೂಯ ಹಂಚಿಕೊಂಡ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಹಿಂದೆ ಸಹ ಆಕೆ ವಿಡಿಯೋ ಮೂಲಕ ಸಹ ಯೂಟ್ಯೂಬ್ ಚಾನೆಲ್ ಗಳು, ವೆಬ್ ಸೈಟ್ ಗಳ ಮೇಲೆ ಆಕೆ ಆಕ್ರೋಷ ಹೊರಹಾಕಿದರು. ಇನ್ನೂ ಈ ವಿವಾದ ಎಲ್ಲಿಯವರೆಗೂ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top