ಹೋಮ್ಲಿ ಬ್ಯೂಟಿ ಸ್ನೇಹಾ ರವರನ್ನು ಆ ನಿದೇರ್ಶಕ ಆ ಕಾರಣಕ್ಕಾಗಿ ಒಡೆದಿದ್ದರಂತೆ…..!

ನಟಿ ಸ್ನೇಹಾ ಸೌತ್ ಸಿನೆಮಾಗಳಲ್ಲಿ ಹೋಮ್ಲಿ ಬ್ಯೂಟಿ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ. ಆಕೆ ಅಭಿನಯದ ಬಹುತೇಕ ಎಲ್ಲಾ ಸಿನೆಮಾಗಳಲ್ಲೂ ಸಂಪ್ರದಾಯಬದ್ದವಾಗಿಯೇ ಕಾಣಿಸಿಕೊಂಡಿದ್ದಾರೆ. ನಾಗಾರ್ಜುನ್, ಬಾಲಕೃಷ್ಣ ರಂತಹ ಸ್ಟಾರ್‍ ನಟರ ಸಿನೆಮಾಗಳಲ್ಲೂ ಸಹ ನಟಿಸಿದ್ದಾರೆ. ಹನುಮಾನ್…

ನಟಿ ಸ್ನೇಹಾ ಸೌತ್ ಸಿನೆಮಾಗಳಲ್ಲಿ ಹೋಮ್ಲಿ ಬ್ಯೂಟಿ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ. ಆಕೆ ಅಭಿನಯದ ಬಹುತೇಕ ಎಲ್ಲಾ ಸಿನೆಮಾಗಳಲ್ಲೂ ಸಂಪ್ರದಾಯಬದ್ದವಾಗಿಯೇ ಕಾಣಿಸಿಕೊಂಡಿದ್ದಾರೆ. ನಾಗಾರ್ಜುನ್, ಬಾಲಕೃಷ್ಣ ರಂತಹ ಸ್ಟಾರ್‍ ನಟರ ಸಿನೆಮಾಗಳಲ್ಲೂ ಸಹ ನಟಿಸಿದ್ದಾರೆ. ಹನುಮಾನ್ ಜಂಕ್ಷನ್, ಶ್ರೀರಾಮದಾಸು, ಸಂಕ್ರಾಂತಿ ಸೇರಿದಂತೆ ಅನೇಕ ಹಿಟ್ ಸಿನೆಮಾಗಳು ಆಕೆಯ ಖಾತೆಯಲ್ಲಿವೆ. ಈಕೆಯನ್ನು ತೆಲುಗು ಸಿನಿರಂಗದಲ್ಲಿ ಮತ್ತೊರ್ವ ಸೌಂದರ್ಯ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಆಕೆಯನ್ನು ನಿರ್ದೇಶಕರೊಬ್ಬರು ಆ ಕಾರಣಕ್ಕಾಗಿ ಒಡೆದಿದ್ದರಂತೆ. ಅಷ್ಟಕ್ಕೂ ನಡೆದಿದ್ದು ಏನು ಎಂಬ ವಿಚಾರಕ್ಕೆ ಬಂದರೇ,

ತೆಲುಗು ಸಿನಿರಂಗದಲ್ಲಿ ಓವರ್‍ ಗ್ಲಾಮರ್‍ ಶೋ ಮಾಡದೇ ಕ್ರೇಜ್ ಪಡೆದುಕೊಂಡ ನಟಿಯರಲ್ಲಿ ಸ್ನೇಹಾ ಸಹ ಒಬ್ಬರಾಗಿದ್ದಾರೆ. ಪ್ರಿಯಮೈನ ನೀಕು ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. 2001 ರಲ್ಲಿ ಈ ಸಿನೆಮಾ ಬಿಡುಗಡೆಯಾಗಿದ್ದು, ಒಳ್ಳೆಯ ಕಲೆಕ್ಷನ್ ಮಾಡಿ ಸೂಪರ್‍ ಹಿಟ್ ಆಗಿತ್ತು. ರೊಮ್ಯಾಂಟಿಕ್ ಲವ್ ಸ್ಟೋರಿಯುಳ್ಳ ಈ ಸಿನೆಮಾದ ಬಳಿಕ ಸ್ನೇಹಾಗೆ ಮತಷ್ಟು ಸಿನೆಮಾಗಳ ಆಫರ್‍ ಗಳು ಹರಿದುಬಂದವು. ಈ ಸಿನೆಮಾದ ಬಳಿಕ ಆಕೆಯ ಖಾತೆಯಲ್ಲಿ ಹನುಮಾನ್ ಜಂಕ್ಷನ್, ಶ್ರೀರಾಮದಾಸು, ಸಂಕ್ರಾಂತಿ, ವೆಂಕಿ, ರಾಧಾಗೋಪಾಲಂ ಸೇರಿದಂತೆ ಅನೇಕ ಹಿಟ್ ಸಿನೆಮಾಗಳಿವೆ. ತೆಲುಗು ಸ್ಟಾರ್‍ ನಟಿ ಸೌಂದರ್ಯ ರವರ ಬಳಿಕ ಸ್ನೇಹಾ ರವರೇ ಎಮದು ಹೇಳಲಾಗುತ್ತಿತ್ತು. ಈ ಹಿಂಧೆ ಶ್ರೀರಾಮದಾಸು, ಪಾಂಡುರಂಗಡು ಮೊದಲಾದ ಸಿನೆಮಾಗಳಿಗೆ ನಿರ್ದೇಶಕ ಕೆ.ರಾಘವೇಂದ್ರರಾವ್ ಸೌಂದರ್ಯರವರನ್ನೇ ತೆಗೆದುಕೊಳ್ಳಬೇಕು ಎಂದುಕೊಂಡಿದ್ದರು. ಬಳಿಕ ಸ್ನೇಹಾ ರವರನ್ನು ಆಯ್ಕೆ ಮಾಡಿಕೊಂಡರು. ಇದೀಗ ಸ್ನೇಹಾ ರವರನ್ನು ಓರ್ವ ನಿರ್ದೇಶಕ ಶೂಟಿಂಗ್ ಸಮಯದಲ್ಲಿ ಒಡೆದಿದ್ದರಂತೆ.

ನಟಿ ಸ್ನೇಹಾರವರನ್ನು ಒಡೆದ ನಿರ್ದೇಶಕ ಬೇರೆ ಯಾರೂ ಅಲ್ಲ ನಿರ್ದೇಶಕ ಸುಶಿ ಗಣೇಶನ್. ಕೆರಿಯರ್‍ ಆರಂಭದಲ್ಲಿ ಸ್ನೇಹಾ  ಆತನೊಂದಿಗೆ ಸಿನೆಮಾ ಒಂದನ್ನು ಮಾಡಿದ್ದರು. ಈ ಸಿನೆಮಾದಲ್ಲಿ ಪ್ರಶಾಂತ್ ಹಿರೋ ಆಗಿದ್ದರು. ಶೂಟಿಂಗ್ ಸಮಯದಲ್ಲಿ ಸ್ನೇಹಾ ಪ್ರಶಾಂತ್ ಜೊತೆಗೆ ಪ್ರೀತಿಗೆ ಬಿದ್ದಿದ್ದರಂತೆ. ಆದರೆ ಆಕೆಯ ತಿಳಿಯದೇ ನಿರ್ದೇಶಕ ಸುಶಿ ಗಣೇಶನ್ ಸಹ ಸ್ನೇಹಾರವರನ್ನು ಪ್ರೀತಿಸಿದ್ದರಂಎ. ಆದರೆ ಸ್ನೇಹಾ ಪ್ರಶಾಂತ್ ರನ್ನು ಲವ್ ಮಾಡುತ್ತಿದ್ದಾರಂತೆ ಎಂದು ಶೂಟಿಂಗ್ ಸಮಯದಲ್ಲಿ ಆಕೆ ಸರಿಯಾಗಿ ನಟಿಸುತ್ತಿಲ್ಲ ಎಂದು ಆಕೆಗೆ ರಕ್ತ ಬರುವಂತೆ ಒಡೆದಿದ್ದರಂತೆ. ಇನ್ನೂ ಈ ಸುದ್ದಿ ಎಷ್ಟರ ಮಟ್ಟಿಗೆ ನಿಜ ಸುಳ್ಳು ಎಂಬುದು ಮಾತ್ರ ಸ್ಪಷ್ಟನೆ ಇಲ್ಲ. ಆದರೆ ಸುಮಾರು ವರ್ಷಗಳಿಂದ ಸಿನಿರಂಗದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುತ್ತವೆ ಎಂದು ಹೇಳಲಾಗುತ್ತಿದೆ.

ಇನ್ನೂ ನಟಿ ಸ್ನೇಹಾ ಸದ್ಯ ಸೆಕೆಂಡ್ ಇನ್ನಿಂಗ್ಸ್ ಸಹ ಶುರು ಮಾಡಿದ್ದಾರೆ. ಕೆಲವೊಂದು ಕಿರು ತೆರೆ ಶೋಗಳಲ್ಲೂ ಸಹ ಭಾಗಿಯಾಗುತ್ತಿದ್ದಾರೆ. ಅತ್ತ ಸೋಷಿಯಲ್ ಮಿಡಿಯಾದಲ್ಲೂ ಆಕ್ಟಿವ್ ಆಗಿದ್ದು ಆಗಾಗ ಕೆಲವೊಂದು ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಯಂಗ್ ನಟಿಯರನ್ನು ಸಹ ನಾಚಿಸುವಂತೆ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿರುತ್ತಾರೆ.