ಮತ್ತೆ ಮದುವೆ ಸಿನೆಮಾಗಾಗಿ ಭಾರಿ ಸಂಭಾವನೆ ಪಡೆದುಕೊಂಡ ನಟಿ ಪವಿತ್ರಾ ಲೋಕೇಶ್, ಸ್ಟಾರ್ ನಟಿಯರಿಗಿಂತ ಜಾಸ್ತಿಯಂತೆ….!

ಸೌತ್ ಸಿನಿರಂಗದ ಸೀನಿಯರ್‍ ನಟಿ ಪವಿತ್ರಾ ಲೋಕೇಶ್ ಅನೇಕ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡಿದ್ದು, ಇದೀಗ ಆಕೆ ನರೇಶ್ ಜೊತೆಗೆ ಪವಿತ್ರಾ ಲೋಕೇಶ್ ಮತ್ತೆ ಮದುವೆ ಎಂಬ ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾ ಕನ್ನಡ…

ಸೌತ್ ಸಿನಿರಂಗದ ಸೀನಿಯರ್‍ ನಟಿ ಪವಿತ್ರಾ ಲೋಕೇಶ್ ಅನೇಕ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡಿದ್ದು, ಇದೀಗ ಆಕೆ ನರೇಶ್ ಜೊತೆಗೆ ಪವಿತ್ರಾ ಲೋಕೇಶ್ ಮತ್ತೆ ಮದುವೆ ಎಂಬ ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾ ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಬಿಡುಗಡೆಯಾಗಿದ್ದು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಆದರೆ ಈ ಸಿನೆಮಾಗಾಗಿ ಆಕೆ ಸ್ಟಾರ್‍ ನಟಿಯರಿಗಿಂತ ಹೆಚ್ಚು ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಕ್ಯಾರೆಕ್ಟರ್‍ ಆರ್ಟಿಸ್ಟ್ ಪವಿತ್ರಾ ಲೊಕೇಶ್ ಒಂದು ದಿನ ಶೆಡ್ಯೂಲ್ಡ್ ಗೆ 50-60 ಸಾವಿರ ಸಂಭಾವನೆ ಪಡೆಯು‌ತ್ತಾರಂತೆ. ಆದರೆ ಕಳೆದೆರಡು ದಿನಗಳ ಹಿಂದ ತೆರೆ ಕಂಡ ಮಳ್ಳಿಪೆಳ್ಳಿ ಸಿನೆಮಾಗಾಗಿ ಆಕೆ ಭಾರಿ ಮೊತ್ತದ ಸಂಭಾವನೆಯನ್ನು ಪಡೆದುಕೊಂಡಿದ್ದಾರಂತೆ. ಮೂಲಕಗಳ ಪ್ರಕಾರ ಆಕೆ ಬರೊಬ್ಬರಿ 10 ಕೋಟಿ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ. ಈ ಸಂಭಾವನೆ ಸೌತ್ ಸಿನಿರಂಗದ ಸ್ಟಾರ್‍ ನಟಿಯರ ಸಂಭಾವನೆಗಿಂತ ಹೆಚ್ಚು ಎಂದು ಹೇಳಬಹುದಾಗಿದೆ. ಇನ್ನೂ ಈ ಸಿನೆಮಾಗಾಗಿ ಆಕೆ ಎಷ್ಟು ದಿನಗಳ ಶೂಟಿಂಗ್ ಮಾಡಿರಬಹುದು ಎಂಬ ಚರ್ಚೆಗಳು ಶುರುವಾಗಿದೆ. ಜೊತೆಗೆ ಆಕೆಯ ಸಂಭಾವನೆಯ ಬಗ್ಗೆ ಸಹ ಸೋಷಿಯಲ್ ಮಿಡಿಯಾದಲ್ಲಿ ವಿವಿಧ ರೀತಿಯ ಚರ್ಚೆಗಳು ನಡೆಯುತ್ತಿವೆ.

ಇನ್ನೂ ನರೇಶ್ ಹಾಗೂ ಪವಿತ್ರಾ ರವರ ಡೇಟಿಂಗ್ ವಿಚಾರ ಸೋಷಿಯಲ್ ಮಿಡಿಯಾದಲ್ಲಿ ಸದಾ ಸುದ್ದಿಯಾಗುತ್ತಲೇ ಇದೆ. ಸುಮಾರು ವರ್ಷಗಳಿಂದ ಇಬ್ಬರೂ ಸಹಜೀವನ ನಡೆಸುತ್ತಿರುವ ಬಗ್ಗೆ ಕಥನಗಳೂ ಸಹ ಕೇಳಿಬಂದವು. ಇದೀಗ ಮಳ್ಳಿ ಪೆಳ್ಳಿ ಸಿನೆಮಾದ ಪ್ರಮೋಷನ್ ನಿಮಿತ್ತ ನಡೆದಂತಹ ಅನೇಕ ಸಂದರ್ಶನಗಳಲ್ಲಿ ಅವರು ಡೇಟಿಂಗ್ ನಡೆಸುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಗಂಡ ಹೆಂಡತಿಯಂತೆ ಅವರಿಬ್ಬರು ಜೀವನ ಸಾಗಿಸುತ್ತಿದ್ದಾರೆ ಎಂದು ಸಹ ಹೇಳಲಾಗುತ್ತಿದೆ. ಇನ್ನೂ ನರೇಶ್ ರವರೇ ಮಳ್ಳಿ ಪೆಳ್ಳಿ ಎಂಬ ಸಿನೆಮಾದ ನಿರ್ಮಾಪಕರಾಗಿರುವ ಹಿನ್ನೆಲೆಯಲ್ಲಿ ಆಕೆಗೆ 10 ಕೋಟಿ ಸಂಭಾವನೆಯನ್ನು ನೀಡಲಾಗಿದೆ ಎಂದೂ ಸಹ ಹೇಳಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೆ ನಿಖರವಾದ ಸುದ್ದಿ ತಿಳಿದು ಬರಬೇಕಿದೆ.

ಇನ್ನೂ ನರೇಶ್ ಹಾಗೂ ಪವಿತ್ರಾ ಲೊಕೇಶ್ ಸುಮಾರು ದಿನಗಳಿಂದ ಡೇಟಿಂಗ್ ನಡೆಸುತ್ತಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರಂತೆ. ಅವರ ಮದುವೆಗೆ ಮಹೇಶ್ ಬಾಬು ರವರೂ ಸಹ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ರಿಲೇಷನ್ ಶಿಪ್ ಬಗ್ಗೆ ಅವರಿಬ್ಬರೂ ಕೆಲವೊಂದು ಸಂದರ್ಶನದಲ್ಲಿ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇನ್ನೂ ಈ ಜೋಡಿಯ ವ್ಯವಹಾರ ಹಾಗೂ ಅವರ ಕಥೆ ಎಲ್ಲಿಯವರೆಗೂ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.