Film News

ಬುಟ್ಟಬೊಮ್ಮ ಪೂಜಾ ಹೆಗ್ಡೆಯನ್ನು ಸೈಡ್ ಮಾಡಿದ ಶ್ರೀಲೀಲಾ? ಪೂಜಾ ಹೆಗ್ಡೆ ಬದಲಿಗೆ ಶ್ರೀಲೀಲಾ ಆಯ್ಕೆ?

ಇತ್ತೀಚಿಗೆ ಸೌತ್ ನಲ್ಲಿ ಕನ್ನಡ ಮೂಲದ ನಟಿಯರ ಜೋರು ಸಾಗುತ್ತಿದೆ. ಈ ಹಾದಿಯಲ್ಲೇ ಕನ್ನಡದ ನಟಿ ಶ್ರೀಲೀಲಾ ಸಹ ಪೆಳ್ಳಿಸಂದD ಎಂಬ ಸಿನೆಮಾದ ಮೂಲಕ ತೆಲುಗು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಬಳಿಕ ಆಕೆ ಮಾಸ್ ಮಹಾರಾಜ ರವಿತೇಜ ಜೊತೆಗೆ ಧಮಾಕಾ ಎಂಬ ಸಿನೆಮಾದಲ್ಲೂ ಸಹ ನಟಿಸಿದ್ದರು. ಈ ಸಿನೆಮಾ ಭಾರಿ ಸಕ್ಸಸ್ ಕಂಡುಕೊಂಡಿದ್ದು, ಬಾಕ್ಸ್ ಆಫೀಸ್ ನಲ್ಲಿ ಕೋಟಿಗಟ್ಟಲೇ ಕಲೆಕ್ಷನ್ ಸಹ ಮಾಡಿತ್ತು. ಇದೀಗ ಶ್ರೀಲೀಲಾ ಮತ್ತೊಂದು ಸಿನೆಮಾದಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಸೌತ್ ನಲ್ಲಿರುವ ಸ್ಟಾರ್‍ ನಟಿಯರಿಗೆ ಶ್ರೀಲೀಲಾ ಭಾರಿ ಪೈಪೋಟಿ ನೀಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸದ್ಯ ಸೌತ್ ನ ಟಾಲಿವುಡ್ ಸಿನಿರಂಗದಲ್ಲಿ ಶ್ರೀಲೀಲಾ ಹಾಟ್ ಟಾಪಿಕ್ ಆಗಿದ್ದಾರೆ. ಧಮಾಕಾ ಸಿನೆಮಾದ ಮೂಲಕ ಭಾರಿ ಸಕ್ಸಸ್ ಕಂಡುಕೊಂಡ ಶ್ರೀಲೀಲಾ ಈ ಸಿನೆಮಾದಲ್ಲಿ ಭರ್ಜರಿಯಾಗಿ ಸ್ಟೆಪ್ಸ್ ಸಹ ಹಾಕಿದ್ದರು. ಈ ಸಿನೆಮಾದ ಮೂಲಕ ಆಕೆಯ ಕ್ರೇಜ್ ಸಹ ದೊಡ್ಡ ಮಟ್ಟದಲ್ಲೇ ಹೆಚ್ಚಾಗಿದೆ ಎನ್ನಬಹುದು. ಈ ಹಾದಿಯಲ್ಲೇ ನಟಿ ಶ್ರೀಲೀಲಾ ತ್ರಿವಿಕ್ರಮ್ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ SSMB28 ಸಿನೆಮಾದಲ್ಲಿ ಸಹ ನಟಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ಈಗಾಗಲೇ ಪೂಜಾ ಹೆಗ್ಡೆ ಸಹ ಹಿರೋಯಿನ್ ಆಗಿ ನಟಿಸಿದ್ದಾರೆ. ಎರಡನೇ ಹಿರೋಯಿನ್ ಆಗಿ ಶ್ರೀಲೀಲಾ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನೆಮಾದಲ್ಲಿ ಇಬ್ಬರೂ ನಟಿಯರಿಗೂ ಸಮಾನ ಆದ್ಯತೆ ಇರುತ್ತದೆ ಎಂದು ಹೇಳಲಾಗುತ್ತಿದೆ. ಇದೀಗ ಮತ್ತೊಂದು ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಪೂಜಾ ಹೆಗ್ಡೆ ಆಯ್ಕೆಯಾದ ಸಿನೆಮಾದಲ್ಲಿ ಪೂಜಾ ಹೆಗ್ಡೆ ಬದಲಿಗೆ ಶ್ರೀಲೀಲಾ ರವರನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಇದೀಗ ಕೇಳಿಬರುತ್ತಿರುವ ಸುದ್ದಿಯಂತೆ ನಟಿ ಶ್ರೀಲೀಲಾ ಪವನ್ ಕಲ್ಯಾಣ್ ಜೊತೆಗೆ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಪವನ್ ಕಲ್ಯಾಣ್ ಹಾಗೂ ಹರೀಷ್ ಶಂಕರ್‍ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಉಸ್ತಾದ್ ಭಗತ್ ಸಿಂಗ್ ಸಿನೆಮಾದಲ್ಲಿ ಶ್ರೀಲೀಲಾ ನಟಿಸಲಿದ್ದಾರಂತೆ. ಮೊದಲಿಗೆ ಈ ಸಿನೆಮಾಗಾಗಿ ಪೂಜಾ ಹೆಗ್ಡೆಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತಂತೆ. ಆದರೆ ಪೂಜಾ ಹೆಗ್ಡೆಯನ್ನು ರೀಪ್ಲೇಸ್ ಮಾಡಿ ಆ ಸ್ಥಾನದಲ್ಲಿ ಶ್ರೀಲೀಲಾ ರವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಆ ಪಾತ್ರಕ್ಕಾಗಿ ಶ್ರೀಲೀಲಾರವರ ಪೊಟೋಶೂಟ್ಸ್ ಸಹ ಮಾಡಿಸಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ಜೊತೆಗೆ ಪವನ್ ಕಲ್ಯಾಣ್ ಹಾಗೂ ಸಾಯಿಧರಮ್ ತೇಜ್ ನಟಿಸುತ್ತಿರುವ ವಿನೋದಿಯ ಸೀತಂ ಎಂಭ ಸಿನೆಮಾದಲ್ಲೂ ಶ್ರೀಲೀಲಾ ಐಟಂ ಸಾಂಗ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸದ್ಯ ಸೌತ್ ಸಿನಿರಂಗದಲ್ಲಿ ಬಹುಬೇಡಿಕೆ ಹೊಂದಿರುವ ಸ್ಟಾರ್‍ ನಟಿಯರಾದ ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ ರವರಂತಹ ನಾಯಕಿಯರಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ ಶ್ರೀಲೀಲಾ. ಈಕೆಯ ಕಾರಣದಿಂದ ಅನೇಕ ನಟಿಯರು ಭಯಪಡುತ್ತಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.

Most Popular

To Top