Film News

ಸಂಪ್ರದಾಯಬದ್ದವಾಗಿ ಮಧು ಮಗಳಂತೆ ಮಿಂಚಿದ ಪ್ರಣಿತಾ, ಸೀರೆಗೆ ಸೌಂದರ್ಯ ತಂದುಕೊಟ್ಟ ಕನ್ನಡ ನಟಿ…..!

ಕನ್ನಡ ನಟಿ ಪ್ರಣಿತಾ ಸುಭಾಷ್ ಇತ್ತೀಚಿಗಷ್ಟೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟರು. ಮದುವೆ, ಮಗು ಕಾರಣದಿಂದ ಸಿನೆಮಾಗಳಿಂದ ದೂರವುಳಿದ ಈಕೆ ಇದೀಗ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಮಾಡಿದ್ದಾರೆ. ಆಕೆ ಸಿನೆಮಾಗಳಿಂದ ದೂರ ಉಳಿದರೂ ಸಹ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳಿಗೆ ಟಚ್ ನಲ್ಲೇ ಇದ್ದರು. ಇದೀಗ ಮತ್ತೆ ಆಕೆ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಆಗಿದ್ದು, ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಸೀರೆಯಲ್ಲಿ ಆಕೆ ಮಧುಮಗಳಂತೆ ಕಾಣಿಸಿಕೊಂಡಿದ್ದು, ಪೊಟೋಗಳು ಇಂಟರ್‍ ನೆಟ್ ನಲ್ಲಿ ವೈರಲ್ ಆಗಿದೆ.

ಕನ್ನಡ ಸಿನೆಮಾಗಳ ಮೂಲಕ ಕೆರಿಯರ್‍ ಆರಂಭಿಸಿದ ಪ್ರಣಿತಾ ಸುಭಾಷ್ ಕಡಿಮೆ ಸಮಯದಲ್ಲೇ ಭಾರಿ ಕ್ರೇಜ್ ಪಡೆದುಕೊಂಡರು. ಜೊತೆಗೆ ತೆಲುಗು ಸಿನೆಮಾಗಳಲ್ಲಿ ಸಹ ನಟಿಸುವ ಅವಕಾಶಗಳನ್ನು ಪಡೆದುಕೊಂಡರು. ಸ್ಟಾರ್‍ ನಟರೊಂದಿಗೆ ಸಹ ನಟಿಸುವ ಅವಕಾಶ ಪಡೆದುಕೊಂಡು ಸ್ಪೇಷಲ್ ಇಮೇಜ್ ಸಹ ಗಿಟ್ಟಿಸಿಕೊಂಡರು. ಕಳೆದ 2021 ರಲ್ಲಿ ಬೆಂಗಳೂರು ಮೂಲದ ಉದ್ಯಮಿ ನಿತಿನ್ ರಾಜ್ ಎಂಬಾತನನ್ನು ವಿವಾಹವಾದರು. ಇವರ ಮದುವೆ ಸೀಕ್ರೇಟ್ ಆಗಿಯೇ ನಡೆದಿತ್ತು. ಕಳೆದ ವರ್ಷ ಆಕೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟರು. ಇದೀಗ ತಾಯಿಯಾಗಿ, ನಟಿಯಾಗಿಯೂ ಕುಟುಂಬ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ಇನ್ನೂ ಪತಿಯ ಅನುಮತಿಯೊಂದಿಗೆ ಮತ್ತೆ ಸಿನೆಮಾಗಳಲ್ಲಿ ಕೆರಿಯರ್‍ ಸಾಗಿಸುತ್ತಿದ್ದಾರೆ.

ಯಂಗ್ ಅಂಡ್ ಗ್ಲಾಮರಸ್ ಬ್ಯೂಟಿ ಪ್ರಣಿತಾ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಗೋಲ್ಡ್ ಕಲರ್‍ ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡ ಪ್ರಣಿತಾ ಅನೇಕರ ಹೃದಯ ಕದಿಯುತ್ತಿದ್ದಾರೆ. ಗೋಲ್ಡ್ ಕಲರ್‍ ಸೀರೆ, ಆಕರ್ಷಣೆಯಾಗಿರುವ ಆಭರಣಗಳನ್ನು ಧರಿಸಿ ಕೋಹಿನೂರ್‍ ವಜ್ರದಂತೆ ಮಿಂಚಿದ್ದಾರೆ. ಇನ್ನೂ ಆಕೆಯ ಈ ಲುಕ್ಸ್ ಗೆ ಅಭಿಮಾನಿಗಳು ಫಿದಾ ಆಗುತ್ತಿದ್ದಾರೆ. ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಾ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ಪ್ರಣಿತಾ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ವೈಯುಕ್ತಿಕ ವಿಚಾರಗಳ ಜೊತೆಗೆ ಸಿನೆಮಾ ಅಪ್ಡೇಟ್ ಗಳನ್ನು ನೀಡುತ್ತಾ, ಸಾಲು ಸಾಲು ಪೊಟೋಶೂಟ್ಸ್ ಮಾಡುತ್ತಾ ಅಭಿಮಾನಿಗಳಿಗೆ ಮತಷ್ಟು ಹತ್ತಿರವಾಗಿದ್ದಾರೆ. ಮೊದಲ ಬಾರಿಗೆ ಪ್ರಣಿತಾ ಮಲಯಾಳಂ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ದಿಲೀಪ್ ಕುಮಾರ್‍ ರವರ 148 ಸಿನೆಮಾದ ಮೂಲಕ ಮಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ.

Most Popular

To Top