ರೆಡ್ ಡ್ರೆಸ್ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಕನ್ನಡ ನಿರೂಪಕಿ ಅನುಪಮಾ ಗೌಡ, ರೆಡ್ ಬ್ಯೂಟಿ ಎಂದ ಫ್ಯಾನ್ಸ್…..!

Follow Us :

ಸ್ಯಾಂಡಲ್ ವುಡ್ ನಟಿ ಕಂ ನಿರೂಪಕಿ ಅನುಪಮಾ ಗೌಡ ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಸಿನೆಮಾಗಳಿಗಿಂತ ಆಕೆ ಕಿರುತೆರೆಯಲ್ಲಿ ಭಾರಿ ಫೇಂ ಪಡೆದುಕೊಂಡರು. ಕನ್ನಡದ ಅನೇಕ ಕಿರುತೆರೆ ಶೋಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆ ಜೋರನ್ನು ಏರಿಸಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಕ್ರೇಜಿ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ನಟಿ ಕಂ ಆಂಕರ್‍ ಅನುಪಮಾ ಗೌಡ ಲಂಕೇಶ್ ಪತ್ರಿಕೆ ಎಂಬ ಸಿನೆಮಾದ ಮೂಲಕ ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಬಳಿಕ ಆಕೆ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದರೂ ಸಹ ಆಕೆ ಅಷ್ಟೊಂದು ಕ್ರೇಜ್ ಪಡೆದುಕೊಳ್ಳಲಿಲ್ಲ. ಆ ಕರಾಳ ರಾತ್ರಿ ಎಂಬ ಸಿನೆಮಾದ ಮೂಲಕ ನಟಿಯಾಗಿ ಪಾದಾರ್ಪಣೆ ಮಾಡಿದರು. ಆದರೆ ಆಕೆ ಸಿನೆಮಾಗಳಿಗಿಂತ ಕಿರುತೆರೆಯಲ್ಲಿ ಭಾರಿ ಫೇಂ ಪಡೆದುಕೊಂಡರು. ಕಿರುತೆರೆಯಲ್ಲಿ ಸೀರಿಯಲ್ ಗಳು, ಹಾಗೂ ಶೋಗಳ ಮೂಲಕ ಖ್ಯಾತಿ ಪಡೆದುಕೊಂಡ ಆಕೆ ಬಿಗ್ ಬಾಸ್ ನಲ್ಲೂ ಸಹ ಭಾಗವಹಿಸಿದ್ದರು. ಎರಡು ಭಾರಿ ಬಿಗ್ ಬಾಸ್ ಕನ್ನಡದಲ್ಲಿ ಸ್ಪರ್ಧಿಯಾಗಿದ್ದರು. ಇನ್ನೂ ಸ್ಟಾರ್‍ ನಟಿಯರಿಗಿಂತ ಕಡಿಮೆಯಿಲ್ಲ ಎಂಬಂತೆ ಆಗಾಗ ಆಕೆ ಸೋಷಿಯಲ್  ಮಿಡಿಯಾದಲ್ಲೂ ಸಹ ಭಾರಿ ಸದ್ದು ಮಾಡುತ್ತಿರುತ್ತಾರೆ.

ಇದೀಗ ಅನುಪಮಾ ಗೌಡ ರೆಡ್ ಕಲರ್‍ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಆಕೆ ಈ ಪೊಟೋಗಳಲ್ಲಿ ತುಂಬಾನೆ ಬ್ಯೂಟಿಪುಲ್ ಆಗಿ ಕಾಣಿಸಿಕೊಂಡಿದ್ದಾರೆ. ದುಂಡು ಮುಖಕ್ಕೆ ಹೊಂದಿಕೊಳ್ಳುವಂತಹ ರೆಡ್ ಡ್ರೆಸ್ ನಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಅಷ್ಟೆಅಲ್ಲದೇ ಅನುಪಮಾ ಪ್ರತಿಯೊಂದು ಮ್ಯಾಚ್ ಆಗುವಂತೆ ವಿಶೇಷ ಕಾಳಜಿಯಿಂದ ಸಿಂಗಾರಗೊಂಡಿದ್ದಾರೆ. ಆಕೆಯ ಮೇಕಪ್, ಲುಕ್ ಸೂಪರ್‍ ಎಂದೇ ಹೇಳಲಾಗುತ್ತಿದೆ. ಇನ್ನೂ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಆಕೆಯ ಬ್ಯೂಟಿಪುಲ್ ಪೊಟೋಗಳನ್ನು ಕಂಡು ಫಿದಾ ಆದ ನೆಟ್ಟಿಗರು ಹಾಗೂ ಅಭಿಮಾನಿಗಳು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಜೊತೆಗೆ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ನಟಿ ಅನುಪಮಾ ಕಿರುತೆರೆಯ ನಮ್ಮಮ್ಮ ಸೂಪರ್‍ ಸ್ಟಾರ್‍, ರಾಜಾರಾಣಿ, ಮಜಾ ಭಾರತ ಮೊದಲಾದ ಶೋ ಗಳ ಮೂಲಕ ಭಾರಿ ಫೇಂ ಪಡೆದುಕೊಂಡಿದ್ದಾರೆ. ಅದರ ಜೊತೆಗೆ ಕೆಲವೊಂದು ಸ್ಪೇಷಲ್ ಈವೆಂಟ್ ಗಳಲ್ಲೂ ಸಹ ಆಕೆ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳಂತೂ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ ಎನ್ನಲಾಗುತ್ತಿದೆ.