ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ಮೃತಿ, ಬುಧವಾರ ಅಂತ್ಯಕ್ರಿಯೆ

Follow Us :

ಕನ್ನಡ ಸಿನಿರಂಗದಲ್ಲಿ ಕ್ಯೂಟ್ ಅಂಡ್ ಅಪರೂಪದ ಜೋಡಿಯೆಂದೇ ಕರೆಯಲಾಗುವ ಜೋಡಿಗಳಲ್ಲಿ ವಿಜಯ ರಾಘವೇಂದ್ರ ಹಾಗೂ ಸ್ಪಂಧನಾ ಜೋಡಿ ಸಹ ಒಂದಾಗಿದ್ದು, ವಿವಾಹ ವಾರ್ಷಿಕೋತ್ಸವ ಆಚರಣೆಗಾಗಿ ಕೆಲವು ದಿನಗಳ ಹಿಂದೆಯಷ್ಟೆ ಈ ಜೋಡಿ ಬ್ಯಾಂಕಾಂಕ್ ಗೆ ತೆರಳಿದ್ದರು. ವೆಕೇಷನ್ ನಲ್ಲೇ ಆಕೆ ಹೃದಯಾಘಾತವಾಗಿ ಇಹಲೋಕ ತ್ಯೆಜಿಸಿದ್ದು, ವಿಜಯ್ ರಾಘವೇಂದ್ರ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಇನ್ನೂ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರ ಅಭಿಮಾನಿಗಳು, ಸಿನಿ ಗಣ್ಯರು, ರಾಜಕೀಯ ನಾಯಕರು ಪ್ರಾರ್ಥಿಸಿದ್ದಾರೆ.

ನಟ ವಿಜಯ್ ರಾಘವೇಂದ್ರ ಹಾಗೂ ಆತನ ಪತ್ನಿ ಸ್ಪಂದನಾ ಬ್ಯಾಂಕಾಂಕ್ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸದಲ್ಲಿರುವಾಗಲೇ ಆಕೆಗೆ ಹೃದಯಾಘಾತವಾಗಿ ಇಹಲೋಕ ತ್ಯೆಜಿಸಿದ್ದಾರೆ. ಆಕೆಯ ಅಕಾಲಿಕ ಮರಣಕ್ಕೆ ಸಿನಿರಂಗದ ಜೊತೆಗೆ ಅನೇಕರು ಸಂತಾಪ ಸೂಚಿಸಿದ್ದಾರೆ. ಇನ್ನೂ ಆಕೆಯ ಮರಣೋತ್ತರ ಪರೀಕ್ಷೆ ಥಾಯ್ಲೆಂಟ್ ನಲ್ಲಿ ನಡೆದಿದ್ದು, ಇಂದು ಮದ್ಯಾಹ್ನ 12 ಗಂಟೆಗೆ ಆರಂಭವಾದ ಮರಣೋತ್ತರ ಪರೀಕ್ಷೆ ಸಂಜೆಯ ವೇಳೆಗೆ ಮುಕ್ತಯಾಗೊಂಡಿದೆ. ಇದೀಗ ಪಾರ್ಥೀವ ಶರೀರವನ್ನು ಬೆಂಗಳೂರಿಗೆ ತರುವ ನಿಟ್ಟಿನಲ್ಲಿ ಎಲ್ಲಾ ತಯಾರಿಗಳು ನಡೆಯುತ್ತಿದ್ದು, ಮಂಗಳವಾರ ಸಂಜೆ ವೇಳೆಗೆ ಮೃತದೇಹ ಬೆಂಗಳೂರಿಗೆ ಬರಲಿದೆ. ಇನ್ನೂ ಬುಧವಾರ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದ್ದು, ಅಂತ್ಯಕ್ರಿಯೆ ಎಲ್ಲಿ ನಡೆಸಬೇಕೆಂಬುದು ವಿಜಯ್ ರಾಘವೇಂದ್ರ ಹಾಗೂ ಅವರ ಕುಟುಂಬ ನಿರ್ಧರಿಸಲಿದೆ ಎಂದು ಸ್ಪಂದನಾ ದೊಡ್ಡಪ್ಪ ಕಾಂಗ್ರೇಸ್ ನಾಯಕ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.

ಸದ್ಯ ಥಾಯ್ಲೆಂಟ್ ನಲ್ಲಿ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದೆ. ವಿದೇಶಾಂಗ ಇಲಾಖೆಯ ಪ್ರಕ್ರಿಯೆಗಳೂ ಮುಗಿದ ಬಳಿಕ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಕರೆತರಲಾಗುತ್ತದೆ.  ಕೆಲವೊಂದು ಸಣ್ಣ ಪುಟ್ಟ ವಿಚಾರಣೆಗಳಿದ್ದು, ವಿಚಾರಣೆ ಮುಗಿದ ಬಳಿಕ ಮೃತದೇಹ ತರುವ ಪ್ರಕ್ರಿಯೆಗಳು ನಡೆಯಲಿದೆ ಎಂದು ತಿಳಿದುಬಂದಿದೆ. ಮಂಗಳವಾರ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಮೃತದೇಹ ಬೆಂಗಳೂರಿಗೆ ಬರಬಹುದಾಗಿದೆ. ಈಡಿಗ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳು ನಡೆಸಲು ತೀರ್ಮಾನ ತೆಗೆದುಕೊಳ್ಳಲಾಗಿದೆಯಂತೆ. ಇನ್ನೂ ಸ್ಪಂದನಾ ವಿಜಯ್ ರಾಘವೇಂದ್ರ ರವರ ಮರಣಕ್ಕೆ ಕರ್ನಾಟಕ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.