ಅದ್ದೂರಿಯಾಗಿ ನಡೆದ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಅರಶಿಣಾ ಶಾಸ್ತ್ರ, ಮಿಂಚಿದ ಸೆಲೆಬ್ರೆಟಿಗಳು….!

Follow Us :

ಕನ್ನಡ ಸಿನಿರಂಗದ ಮೇರು ನಟ ದಿವಂಗತ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಇಬ್ಬರೂ ಸುಮಾರು ದಿನಗಳಿಂದ ಪ್ರೀತಿಸಿ ದೊಡ್ಡವರ ಒಪ್ಪಿಗೆಯ ಮೇರೆಗೆ ಸಪ್ತಪದಿ ತುಳಿಯಲಿದ್ದಾರೆ. ಕಳೆದ ವರ್ಷದ ಡಿಸೆಂಬರ್‍ 11 ರಂದು ಅವರಿಬ್ಬರ ಎಂಗೇಜ್ ಮೆಂಟ್ ಅದ್ದೂರಿಯಾಗಿ ನಡೆದಿತ್ತು. ಇನ್ನೇನು ಎರಡು ದಿನಗಳಲ್ಲಿ ಈ ಜೋಡಿಯ ಮದುವೆ ನೆರವೇರಲಿದ್ದು, ಇದೀಗ ಅರಶಿಣಾ ಶಾಸ್ತ್ರ ಅದ್ದೂರಿಯಾಗಿ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಕನ್ನಡ ಸಿನಿರಂಗದ ಅನೇಕ ಸೆಲೆಬ್ರೆಟಿಗಳು ಸಹ ಸಖತ್ ಸದ್ದು ಮಾಡಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ರೆಬೆಲ್ ಸ್ಟಾರ್‍ ಅಂಬರೀಶ್ ಹಾಗೂ ಸುಮಲತಾ ರವರ ಪುತ್ರ ನಟ ಅಭಿಷೇಕ್ ಅಂಬರೀಶ್ ಹಾಗೂ ಖ್ಯಾತ ಫ್ಯಾಷನ್ ಡಿಸೈನರ್‍ ಪ್ರಸಾದ್ ಬಿದ್ದಪ್ಪ ರವರ ಪುತ್ರಿ ಅವಿವಾ ಬಿದ್ದಪ್ಪ ಪ್ರೀತಿಸುತ್ತಿದ್ದರು. ಬಳಿಕ ತಮ್ಮ ಪೋಷಕರ ಒಪ್ಪಿಗೆ ಮೇರೆಗೆ ಮದುವೆಯಾಗುತ್ತಿದ್ದಾರೆ. ಹಿಂದೂ ಸಂಪ್ರದಾಯದಂತೆ ಈ ಜೋಡಿಯ ಮದುವೆ ಕಾರ್ಯಕ್ರಮಗಳು ಶುರುವಾಗಿದೆ. ಇಬ್ಬರ ಮನೆಯಲ್ಲೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಅರಿಶಿಣ ಶಾಸ್ತ್ರ ನೆರವೇರಿದೆ. ಇಬ್ಬರ ಮನೆಗಳನ್ನೂ ದೀಪಗಳೊಂದಿಗೆ ಅಲಂಕಾರ ಮಾಡಲಾಗಿದೆ. ಇನ್ನೂ ಈ ಸಂಬಂಧ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲೂ ಸಹ ಹರಿದಾಡುತ್ತಿವೆ.

ಇನ್ನೂ ಈ ವೇಳೆ ಕನ್ನಡ ಸಿನಿರಂಗದ ನಟಿ ಪ್ರಿಯಾಂಕಾ ಉಪೇಂದ್ರ, ಮೇಘನಾ ರಾಜ್ ಸರ್ಜಾ ಸೇರಿದಂತೆ ಅನೇಕ ನಟ ನಟಿಯರು ಭಾಗವಹಿಸಿದ್ದರು. ಜೂನ್ 2ರಂದು ಮೆಹೆಂದಿ ಶಾಸ್ತ್ರ ನಡೆದಿದ್ದು,  ಅಭಿಷೇಕ್ ಅಂಬರೀಷ್ ಅವರು ಕೈ ಮೇಲೆ ಅವಿವಾ, ಸುಮಲತಾ, ರೆಬೆಲ್ ಹಾಗೂ ಮಂಡ್ಯದ ಹೆಸರನ್ನು ಬರೆದುಕೊಂಡಿದ್ದಾರೆ. ಇನ್ನೂ ಸುಮಲತಾ ರವರು ತಮ್ಮ ಮಗನ ಮದುವೆಯ ಆಮಂತ್ರಣವನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮೆಗಾಸ್ಟಾರ್‍ ಚಿರಂಜೀವಿ, ಸೂಪರ್‍ ಸ್ಟಾರ್‍ ರಜನಿಕಾಂತ್ ಸೇರಿದಂತೆ ಅನೇಕ ಗಣ್ಯರಿಗೆ ನೀಡಿದ್ದು, ಮದುವೆಗೆ ಅವರೂ ಸಹ ಆಗಮಿಸುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.

ಇನ್ನೂ ಅಂಬರೀಶ್ ರವರ ಹುಟ್ಟುಹಬ್ಬದಂದು ಅಭಿಷೇಕ್ ಹಾಗೂ ಅವಿವಾ ಅಂಬಿರವರ ಸ್ಪೇಷಲ್ ಹಾಡುಗಳಿಗೆ ರೊಮ್ಯಾಂಟಿಕ್ ಆಗಿ ನೃತ್ಯ ಮಾಡಿದ್ದರು. ಈ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಜೂ.4 ರಂದು ಅಂಬಿ ನಿವಾಸದಲ್ಲಿ ಚಪ್ಪರ, ಜೂ.5 ರಂದು ಮೂಹೂರ್ತ, ಜೂ.7 ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡನಲ್ಲಿರುವ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ ಅದ್ದೂರಿಯಾಗಿ ನಡೆಯಲಿದೆ.