ರಶ್ಮಿಕಾ ಬಗ್ಗೆ ಯಾಕೆ ಮತ್ತೆ ಪ್ರಶ್ನೆಗಳು, ಅನೇಕ ಕಲಾವಿದರನ್ನು ಲಾಂಚ್ ಮಾಡಿದ್ದೇವೆ, ಅವರ ಕಥೆ ಬಿಡಿ ಎಂದ ರಿಷಭ್ ಶೆಟ್ಟಿ….!

ಕನ್ನಡ ಸಿನೆಮಾದ ಮೂಲಕ ಸ್ಟಾರ್‍ ಡಮ್ ಗಿಟ್ಟಿಸಿಕೊಂಡು ಬ್ಯಾಕ್ ಟು ಬ್ಯಾಕ್ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯ ಸಿನೆಮಾಗಳಲ್ಲಿ ಬ್ಯುಸಿಯಾಗಿರು ರಶ್ಮಿಕಾ ಮಂದಣ್ಣ ಅನೇಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕನ್ನಡದ ಸಿನೆಮಾದ ಮೂಲಕ…

ಕನ್ನಡ ಸಿನೆಮಾದ ಮೂಲಕ ಸ್ಟಾರ್‍ ಡಮ್ ಗಿಟ್ಟಿಸಿಕೊಂಡು ಬ್ಯಾಕ್ ಟು ಬ್ಯಾಕ್ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯ ಸಿನೆಮಾಗಳಲ್ಲಿ ಬ್ಯುಸಿಯಾಗಿರು ರಶ್ಮಿಕಾ ಮಂದಣ್ಣ ಅನೇಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕನ್ನಡದ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡ ರಶ್ಮಿಕಾ ಕನ್ನಡವನ್ನೇ ಮರೆತಿದ್ದಾರೆ. ಕನ್ನಡದ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆನೇಕ ಆರೋಪಗಳು ಆಕೆಯ ವಿರುದ್ದ ಕೇಳಿಬರುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ಆಕೆ ತನ್ನನ್ನು ಸಿನೆಮಾರಂಗಕ್ಕೆ ಪರಿಚಯಿಸಿದ ಪ್ರೊಡಕ್ಷನ್ ಹೌಸ್ ಹೆಸರು ಹೇಳದೇ ಸನ್ನೆ ಮಾಡಿ ಮಾತನಾಡಿದ್ದರು. ಇದಕ್ಕೆ ಕನ್ನಡಿಗರಿಂದ ತೀವ್ರ ಆಕ್ರೋಷ ಎದುರಾಗಿತ್ತು.

ನಟ ರಿಷಭ್ ಶೆಟ್ಟಿ ಅಭಿನಯದ ಬ್ಲಾಕ್ ಬ್ಲಸ್ಟರ್ ಹಿಟ್ ಕಾಂತಾರ ಸಿನೆಮಾ ಸಹ ನೋಡಿಲ್ಲ ಎಂದು ಹೇಳಿ ಟ್ರೋಲ್ ಆಗಿದ್ದರು. ಆ ಸಮಯದಲ್ಲಿ ರಿಷಭ್ ಸಹ ಆಕೆಗೆ ಪರೋಕ್ಷವಾಗಿ ಟಾಂಗ್ ನೀಡುತ್ತಲೇ ಇದ್ದರು. ಇನ್ನೂ ರಶ್ಮಿಕಾ ಸಹ ಈ ಬಗ್ಗೆ ರಿಯಾಕ್ಟ್ ಆಗಿದ್ದರು. ನನ್ನನ್ನು ಪದೇ ಪದೇ ಟ್ರೋಲ್ ಮಾಡುತ್ತಿದ್ದಾರೆ. ನನ್ನನ್ನು ನೆಗೆಟೀವ್ ಆಗಿಯೇ ನೋಡುತ್ತಿದ್ದಾರೆ. ನಾನು ಆಯ್ಕೆ ಮಾಡಿಕೊಂಡ ಸಿನಿರಂಗ ಅಂತಹುದು ಎಂದು ಅನೇಕ ವಿಚಾರಗಳನ್ನು ಟ್ರೋಲ್ ಗಳ ಬಗ್ಗೆ ಮಾತನಾಡಿದ್ದರು. ಆದರೂ ಸಹ ರಶ್ಮಿಕಾ ವಿರುದ್ದ ವಿಮರ್ಶೆಗಳು ಟ್ರೋಲ್ ಗಳು ನಿಂತಿಲ್ಲ. ಈ ನಡುವೆ ರಿಷಭ್ ಶೆಟ್ಟಿ ಸಂದರ್ಶನವೊಂದರಲ್ಲಿ ಮತ್ತೊಮ್ಮೆ ಪರೋಕ್ಷವಾಗಿ ರಶ್ಮಿಕಾ ಗೆ ಟಾಂಗ್ ಕೊಟ್ಟಿದ್ದರೆ.

ನಟ ರಿಷಭ್ ಶೆಟ್ಟಿ ಕಾಂತಾರಾ ಸಿನೆಮಾದ ಬಳಿಕ ದೊಡ್ಡ ಸ್ಟಾರ್‍ ಆದರು. ಕನ್ನಡದಲ್ಲಿ ತೆರೆಕಂಡ ಈ ಸಿನೆಮಾ ಕಡಿಮೆ ಸಮಯದಲ್ಲೇ ಭಾರಿ ರೆಸ್ಪಾನ್ಸ್ ಪಡೆದುಕೊಂಡಿತು. ಬಳಿಕ ಇತರೆ ಭಾಷೆಗಳಿಗೂ ಸಹ ಈ ಸಿನೆಮಾ ಡಬ್ ಮಾಡಲಾಯಿತು. ಇನ್ನೂ ಈ ಸಿನೆಮಾ ನೋಡಿದ ಅನೇಕರು ರಿಷಭ್ ಶೆಟ್ಟಿಯವರ ನಿರ್ದೇಶನ ಹಾಗೂ ನಟನೆಯನ್ನು ಮನಸಾರೆ ಹೊಗಳಿದ್ದರು. ರಿಷಭ್ ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಇನ್ನೂ ಇತ್ತೀಚಿಗೆ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಿಷಭ್ ಮಾತನಾಡುತ್ತಾ ರಶ್ಮಿಕಾಗೆ ಟಾಂಗ್ ನೀಡಿದ್ದಾರೆ. ಸಂದರ್ಶನದಲ್ಲಿ ರಶ್ಮಿಕಾ ಬಗ್ಗೆ ಪ್ರಶ್ನೆಯೊಂದು ಎದುರಾಗಿದ್ದು, ಅದಕ್ಕೆ ಉತ್ತರಿಸಿದ ರಿಷಭ್ ಅಂತಹವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಈಗಾಗಲೇ ನಾವು ಅನೇಕ ಕಲಾವಿದರನ್ನು ಲಾಂಚ್ ಮಾಡಿದ್ದೇನೆ. ನಮಗೂ ಸಹ ನಿರ್ಮಾಪಕರು ಹಾಗೂ ನಿರ್ದೇಶಕರು ಅವಕಾಶಗಳನ್ನು ಕೊಟ್ಟಿದ್ದಾರೆ. ಅಂತಹವರ ದೊಡ್ಡ ಪಟ್ಟಿಯೇ ನಮ್ಮಲ್ಲಿದೆ. ಇದು ಸಾಕು ಬೇರೆ ಹೇಳುವುದಕ್ಕೆ ಏನು ಇಲ್ಲ ಎಂದು ರಿಷಭ್ ಹೇಳಿದ್ದಾರೆ.

ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ರಶ್ಮಿಕಾ ನನಗೆ ಸಿನೆಮಾಗಳಲ್ಲಿ ಬೆಳೆಯಲು ರಕ್ಷಿತ್ ಶೆಟ್ಟಿ ಹಾಗೂ ರಿಷಭ್ ಶೆಟ್ಟಿ ರವರೇ ಕಾರಣ ಎಂದು ಹೇಳಿದ್ದರು. ಇನ್ನೂ ರಶ್ಮಿಕಾ ಸದ್ಯ ತೆಲುಗು, ತಮಿಳು ಹಾಗೂ ಹಿಂದಿ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಕೆ ಆಕೆ ಪ್ರತಿಯೊಂದು ವಿಚಾರಕ್ಕೂ ಟ್ರೋಲ್ ಆಗುತ್ತಿರುತ್ತಾರೆ.