ಹೆಣ್ಣಿನ ಮೇಲಿನ ವ್ಯಾಮೋಹಕ್ಕೆ 41 ಲಕ್ಷ ಕಳೆದುಕೊಂಡ ಯುವಕ, ಫೇಸ್ ಬುಕ್ ಮೂಲಕ ಮೋಸ ಹೋದ ರಾಮನಗರ ಯುವಕ…..!

Follow Us :

ಮೊಬೈಲ್ ತಂತ್ರಜ್ಞಾನ ಹೆಚ್ಚಾದಂತೆಲ್ಲಾ, ಸೈಬರ್‍ ವಂಚನೆ ಸಹ ಹೆಚ್ಚಾಗುತ್ತಿದೆ. ಸೈಬರ್‍ ವಂಚನೆ ಇತ್ತೀಚಿಗೆ ತುಂಬಾನೆ ನಡೆಯುತ್ತಿದೆ. ಅಮಯಾಕರನ್ನು ಹಾಗೂ ಅವರ ದುರ್ಬಲತೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಅನೇಕರು ಸಾಮಾಜಿಕ ಜಾಲತಾಣಗಳ ಮೂಲಕ ವಂಚನೆಗೆ ಇಳಿದಿದ್ದಾರೆ. ಸೋಷಿಯಲ್ ಮಿಡಿಯಾ ಬಳಸುವಾಗ ಎಚ್ಚರಿಕೆ ತಪ್ಪಿದರೇ ಹಣದ ಜೊತೆಗೆ ಮಾನ ಮರ್ಯಾದೆಯನ್ನು ಸಹ ಕಳೆದುಕೊಳ್ಳಬೇಕಾದ ದುಸ್ಥಿತಿ ಎದುರಾಗಬಹುದಾಗಿದೆ. ಇದೀಗ ಫೇಸ್ ಬುಕ್ ಮೂಲಕ ಮಹಿಳೆಯ ವ್ಯಾಮೋಹಕ್ಕೆ ಬಿದ್ದ ಯುವಕನೋರ್ವ ಬರೊಬ್ಬರಿ 41 ಲಕ್ಷ ಕಳೆದುಕೊಂಡಿದ್ದಾನೆ.

ರಾಮನಗರ ಮೂಲದ ಯುವಕನೋರ್ವ ಸೈಬರ್‍ ವಂಚನೆಗೆ ಗುರಿಯಾಗಿದ್ದಾನೆ. ಗೀತಾ ಸೆಕ್ಸಿ ಎಂಬ ಹೆಸರಿನಲ್ಲಿ ಫೇಸ್ ಬುಕ್ ಖಾತೆಯಿದ್ದು,  ಈ ಖಾತೆಯಲ್ಲಿ ಹುಡುಗಿಯರನ್ನು ಪೂರೈಕೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಅದನ್ನು ನಂಬಿದ ರಾಮನಗರ ಯುವಕ ಅವರ ಬಲೆಗೆ ಬಿದ್ದಿದ್ದಾನೆ. ಆ ಯುವಕ ತನ್ನ ಪೊಟೋಗಳ ಜೊತೆಗೆ ತನಗೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾನೆ. ಬಳಿಕ ಯುವಕನ ಪೊಟೋಗಳನ್ನು ಪಡೆದುಕೊಂಡ ವಂಚಕರು ಯುವಕನ ಪೊಟೋಗಳನ್ನು ನಗ್ನವಾಗಿ ಎಡಿಟ್ ಮಾಡಿ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡುತ್ತೇವೆ ಎಂದು ಬೆದರಿಕೆ ಹಾಕಿ ಹಣ ಕಳುಹಿಸುವಂತೆ ಬ್ಲಾಕ್ ಮೇಲ್ ಮಾಡಿದ್ದಾರೆ. ಇನ್ನೂ ಕಳೆದ ಡಿಸೆಂಬರ್‍ ಮಾಹೆಯಿಂದ ನಿರಂತರವಾಗಿ ಬೆದರಿಕೆ ಹಾಕಿ ಬರೊಬ್ಬರಿ 41 ಲಕ್ಷ ರೂಪಾಯಿ ಆತನಿಂದ ವಂಚಿಸಿ ದರೋಡೆ ಮಾಡಿದ್ದಾರೆ ಎಂದು ಆರೋಪಿ ದೂರು ನೀಡಿದ್ದಾನೆ.

ಇನ್ನೂ ಈ ಸಂಬಂಧ ರಾಮನಗರ ಸೈಬರ್‍ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದ್ದು, ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಫೇಸ್ ಬುಕ್ ಸೇರಿದಂತೆ ವಿವಿಧ ಸೋಷಿಯಲ್ ಮಿಡಿಯಾ ಪ್ಲಾಟ್ ಫಾರಂ ಗಳ ಮೂಲಕ ವಂಚಕರು ಅಮಾಯಕರನ್ನು ಗುರಿಯಾಗಿಸಿಕೊಂಡು ವಂಚನೆಗೆ ಮುಂದಾಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಅನೇಕ ನಕಲಿ ಖಾತೆಗಳಿದ್ದು, ನಕಲಿ ಖಾತೆಗಳ ಮೂಲಕ ಅಮಾಯಕರನ್ನು ವಂಚನೆ ಮಾಡುತ್ತಿದ್ದಾರೆ. ನಕಲಿ ಖಾತೆಗಳಿಂದ ಫ್ರೆಂಡ್ಸ್ ರಿಕ್ವೆಸ್ಟ್ ಬರುತ್ತವೆ. ಅದನ್ನು ಒಮ್ಮೆ ನೀವು ಅಕ್ಸೆಪ್ಟ್ ಮಾಡಿದರೇ ನಿಮ್ಮನ್ನು ಖೆಡ್ಡಾಗೆ ಬೀಳಿಸಲು ವಂಚಕರು ಕಾಯುತ್ತಿರುತ್ತಾರೆ. ಆದ್ದರಿಂದ ಸೋಷಿಯಲ್ ಮಿಡಿಯಾ ಬಳಕೆ ಒಳ್ಳೆಯ ರೀತಿಯಲ್ಲಿದ್ದರೇ ಪರವಾಗಿಲ್ಲ. ಅದರ ತಪ್ಪು ಬಳಕೆ, ಮಿತಿ ಮೀರಿದ ಬಳಕೆ ಸಹ ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳಬೇಕಾಗುತ್ತದೆ.