ಸೋಷಿಯಲ್ ಮಿಡಿಯಾ ಕುರಿತು ಫೈರ್ ಆದ ರಕುಲ್ ಪ್ರೀತ್, ಪ್ರತಿಯೊಂದು ವಿಚಾರವನ್ನು ಅದೇ ರೀತಿಯಲ್ಲಿ ನೋಡುತ್ತಾರೆಂದ ನಟಿ….!

Follow Us :

ದಕ್ಷಿಣದಲ್ಲಿ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದ ಸೀತಾರಾಮಂ ಸಿನೆಮಾದಲ್ಲಿ ಸೀತಾ ಪಾತ್ರದಲ್ಲಿ ಕಾಣಿಸಿಕೊಂಡ ಮೃಣಾಲ್ ಠಾಕೂರ್‍ ಅಭಿನಯಕ್ಕೆ ಅನೇಕರು ಫಿದಾ ಆಗಿ ಆಕೆಯ ಫ್ಯಾನ್ಸ್ ಆಗಿಬಿಟ್ಟಿದ್ದಾರೆ. ಸೀತಾರಾಮಂ ಸಿನೆಮಾದ ಮೂಲಕ ದೊಡ್ಡದಾದ ಕ್ರೇಜ್ ದಕ್ಕಿಸಿಕೊಂಡ ಮೃಣಾಲ್. ಸೋಷಿಯಲ್ ಮಿಡಿಯಾದಲ್ಲೂ ಮೃಣಾಲ್ ಸಹ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ. ಸದ್ಯ ಹಿಂದಿ ಹಾಗೂ ತೆಲುಗು ಸಿನೆಮಾಗಳಲ್ಲಿ ಮೃಣಾಲ್ ಮಿಂಚುತ್ತಿದ್ದಾರೆ. ಇದೀಗ ವ್ಯಕ್ತಿಯೊಬ್ಬ ಆಕೆಗೆ ಬಹಿರಂಗವಾಗಿ ಪ್ರಪೋಸ್ ಮಾಡಿದ್ದು, ಮೃಣಾಲ್ ಆತನಿಗೆ ಸ್ಟ್ರಾಂಗ್ ಕೌಂಟರ್‍ ಕೊಟ್ಟಿದ್ದಾರೆ.

ನಟಿ ಮೃಣಾಲ್ ಇತ್ತೀಚಿಗೆ ಸ್ಲೋ ಮೋಷನ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಮೃಣಾಲ್ ವೈಟ್ ಸಲ್ವಾರ್‍ ಧರಿಸಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಆಕೆ ನಾನು ಮುದ್ದಾಗಿ ಕಾಣುತ್ತಿರುವೆ, ಬೋರ್‍ ಆದರೆ ಕೆಲವೇ ನಿಮಿಷಗಳಲ್ಲಿ ಈ ವಿಡಿಯೋ ಡಿಲೀಟ್ ಮಾಡುವೆ ಎಂದು ಮೃಣಾಲ್ ಕ್ಯಾಪ್ಷನ್ ಹಾಕಿದ್ದಾರೆ. ಇನ್ನೂ ಈ ವಿಡಿಯೋ ನೋಡಿದ ಮೃಣಾಲ್ ಗೆ ವ್ಯಕ್ತಿಯೋರ್ವ ಪ್ರಪೋಸ್ ಮಾಡಿದ್ದಾರೆ. ನಿಮ್ಮ ವಿಡಿಯೋ ನೋಡಿ ನನಗೆ ತುಂಬಾ ಇಷ್ಟವಾಗಿದೆ. ನಾನು ನಿಮ್ಮನ್ನು ಮದುವೆ ಮಾಡಿಕೊಳ್ಳಲು ಸಿದ್ದವಾಗಿದ್ದೇನೆ ಎಂದು ಒಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾನೆ. ಇದಕ್ಕೆ ಉತ್ತರಿಸಿರುವ ಮೃಣಾಲ್ ನೇರವಾಗಿಯೇ ಉತ್ತರ ಕೊಡುವೆ ಎಂದು NO ಎಂಬ ಕಾಮೆಂಟ್ ಮಾಡಿದ್ದಾರೆ. ಇನ್ನೂ ಈ ಕಾಮೆಂಟ್ ನೋಡಿದ ನೆಟ್ಟಿಗರೂ ಸಹ ಸಾಮಾನ್ಯ ವ್ಯಕ್ತಿಯನ್ನು ಮದುವೆಯಾಗುವಂತಹ ಹುಡುಗಿ ಮೃಣಾಲ್ ಅಲ್ಲ, ಸುಮ್ಮನೆ ಪ್ರಪೋಸ್ ಮಾಡಿ ಸಮಯ ವ್ಯರ್ಥ ಮಾಡಿಕೊಳ್ಳಬೇಡ ಎಂದು ಅನೇಕರು ಕೌಂಟರ್‍ ಕೊಡುತ್ತಿದ್ದಾರೆ.

ಸೀತಾರಾಮಂ ಸಿನೆಮಾದ ಮೂಲಕ ಓವರ್‍ ನೈಟ್ ಸೌತ್ ನಲ್ಲಿ ಬಹುಬೇಡಿಕೆ ನಟಿಯಾದ ಮೃಣಾಲ್ ನಟನೆ ಹಾಗೂ ಸೌಂದರ್ಯದ ಮೂಲಕ ಸೌತ್ ಪ್ರೇಕ್ಷಕರನ್ನು ಸೆಳೆದಿದ್ದಾರೆ. ಸದ್ಯ ಬಾಲಿವುಡ್ ಸಿನೆಮಾಗಳಲ್ಲಿ ಮೃಣಾಲ್ ಬ್ಯುಸಿಯಾಗಿದ್ದಾರೆ. ಇದೀಗ ಬೇರೆ ಆಫರ್‍ ಗಳನ್ನು ಪಡೆದುಕೊಳ್ಳುವತ್ತ ಸಾಗುತ್ತಿದ್ದಾರೆ. ಇನ್ನೂ ಸ್ಟಾರ್‍ ನಟಿಯರಾದರೂ ಸಹ ಟ್ರೋಲರ್‍ ಗಳ ಬಾದೆ ತಪ್ಪಿದ್ದಲ್ಲ. ಇದೀಗ ಮೃಣಾಲ್ ಬಗ್ಗೆ ಸಹ ಕೆಲವೊಂದು ಟ್ರೋಲ್ ಗಳು ಹರಿದಾಡುತ್ತಿವೆ. ಸಾಮಾನ್ಯವಾಗಿಯೇ ಟ್ರೋಲ್ ಮಾಡುತ್ತಾರೆ ಆದರೆ ಸಣ್ಣ ತಪ್ಪು ಸಿಕ್ಕರೇ ಬಿಡುತ್ತಾರೆಯೇ, ಈ ಹಾದಿಯಲ್ಲೇ ಮೃಣಾಲ್ ಠಾಕೂರ್‍ ಈ ಹಿಂದೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದರು. ಈ ಕಾರಣದಿಂದ ಆಕೆಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು.

ತನ್ನ ವಿರುದ್ದ ಸೃಷ್ಟಿಯಾದ ಟ್ರೋಲ್ಸ್, ಮೀಮ್ಸ್ ಬಗ್ಗೆ ತುಂಬಾ ಹರ್ಟ್ ಆಗಿದ್ದಾರೆ. ಇನ್ನೂ ಮೀಮ್ಸ್ ಒಂದಕ್ಕೆ ರಿಪ್ಲೇ ಸಹ ಮಾಡಿದ್ದಾರೆ. ನಾನು ಆಗ ಹೇಗೆ ಫೀಲ್ ಆಗಿದ್ದೆ, ಈಗ ಹೇಗೆ ಫೀಲ್ ಆಗುತ್ತಿದ್ದೇನೆ ಎಂದು ತನ್ನ ಅಭಿಪ್ರಾಯ ಹಂಚಿಕೊಂಡೆ. ನಾನು ಸಹ ಮನುಷ್ಯಳೇ ಎಂಬ ವಿಚಾರವನ್ನು ಇಂತಹವರು ಮರೆತು ಬಿಡುತ್ತಾರೆ ಎಂದು ಮೃಣಾಲ್ ಎಮೋಷನಲ್ ಆಗಿ ರಿಪ್ಲೇ ಕೊಟ್ಟಿದ್ದಾರೆ. ಇನ್ನೂ ಮೃಣಾಲ್ ರಿಪ್ಲೆಗೆ ಅನೇಕರು ಬೆಂಬಲ ಸಹ ನೀಡುತ್ತಾ ಅಂತಹ ಟ್ರೋಲ್ ಗಳನ್ನು ಕಿವಿಗೆ ಹಾಕಿಕೊಳ್ಳಬೇಡಿ ಎಂದು ಸಲಹೆ ಸಹ ನೀಡಿದ್ದಾರೆ.