News

ಮುಂದಿನ ತಿಂಗಳು ಭಾರತಕ್ಕೆ ವಾಪಸ್ ಆಗಲಿದ್ದಾಳೆ ಅಂಜು, ಭಾರತ ಬಿಟ್ಟು ಪಾಕಿಸ್ತಾನಕ್ಕೆ ಹೋದ ಅಂಜುಗೆ ಪಾಕಿಸ್ತಾನದ ನರಕ ಅರ್ಥವಾದಂತಿದೆ ಎಂದ ಮೊದಲ ಪತಿ?

ಸೋಷಿಯಲ್ ಮಿಡಿಯಾ ಮೂಲಕ ಪರಿಚಯವಾಗಿ, ಪರಿಚಯ ಪ್ರೀತಿಯಾಗಿ ಭಾರತದಿಂದ ಪಾಕಿಸ್ತಾನಕ್ಕೆ ತೆರಳಿ ಅಂಜು ಎಂಬಾಕೆ ಮದುವೆಯಾಗಿದ್ದ ವಿಚಾರ ತಿಳಿದೇ ಇದೆ. ಇದೀಗ ಆಕೆಗೆ ಪಾಕಿಸ್ತಾನದ ಸಹವಾಸ ಸಾಕಾಯ್ತಂತೆ. ಈ ಕಾರಣದಿಂದಾಗಿ ಆಕೆ ಅಕ್ಟೋಬರ್‍ ಮಾಹೆಯಲ್ಲಿ ಭಾರತಕ್ಕೆ ವಾಪಸ್ ಆಗಲಿದ್ದಾಳಂತೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ.

 

2019 ರಲ್ಲಿ ಫೇಸ್ ಬುಕ್ ಮೂಲಕ ಪರಿಚಯವಾದ ಭಾರತದ ರಾಜಾಸ್ಥಾನದ ಅಂಜು ಹಾಗೂ ಪಾಕಿಸ್ತಾನದ ನಸ್ರುಲ್ಲಾ ಎಂಬುವವರ ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ಅಂಜು ಹಾಗೂ ನಸ್ರುಲ್ಲಾ ಹಾಗೂ ಆತನ ಕುಟುಂಬಸ್ಥರು ಪೊಲೀಸ್ ಹಾಗೂ ವಕೀಲರ ಸಮ್ಮುಖದಲ್ಲಿ ದಿರ್‍ ಬಾಲಾ ಎಂಬಲ್ಲಿರುವ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿ ಮದುವೆಯಾಗಿದ್ದರು ಎನ್ನಲಾಗಿತ್ತು. ಈ ಸುದ್ದಿ ಭಾರಿ ಕೋಲಾಹಲ ಸಹ ಸೃಷ್ಟಿಸಿತ್ತು. ಒಂದು ವಾರದಲ್ಲಿ ಮರಳಿ ಬರುತ್ತೇನೆ ಎಂದು ಹೇಳಿದ್ದ ಆಕೆ ನಸ್ರುಲ್ಲಾನನ್ನು ಮದುವೆಯಾಗಿ ಇಸ್ಲಾಂಗೆ ಸಹ ಮತಾಂತರವಾಗಿದ್ದಳು. ಇದೀಗ ಅಂಜು ಪಾಕಿಸ್ತಾನದಿಂದ ವಾಪಸ್ ಬರಲಿದ್ದಾಳಂತೆ.

ಇನ್ನೂ ಪಾಕಿಸ್ತಾನದಲ್ಲಿ ಭಾರತದಲ್ಲಿರುವಂತೆ ಸ್ವತಂತ್ರವಾಗಿರಲು ಆಗುವುದಿಲ್ಲ. ಅಲ್ಲಿನ ಕಟ್ಟುನಿಟ್ಟಿನ ಸಂಪ್ರದಾಯ ಆಚರಣೆ ಕಷ್ಟ ಎಂದು ಆಕೆಗೆ ಮನವರಿಕೆಯಾದಂತಿದೆ. ಇನ್ನೂ ತನ್ನ ಇಬ್ಬರು ಮಕ್ಕಳನ್ನು ತೊರೆದು ಪಾಕಿಸ್ತಾನಕ್ಕೆ ತೆರಳಿದ ಆಕೆಯ ಮಾನಸಿಕ ಆರೋಗ್ಯ ಸಹ ಕ್ಷೀಣಿಸಿದೆಯಂತೆ. ಅಲ್ಲಿನ ಇಸ್ಲಾಂ ಕಟ್ಟು ಪಾಡು ಸೇರಿದಂತೆ ಹಲವು ಆಚರಣೆಗಳ ಕಾರಣದಿಂದ ಆಕೆ ಮಾನಸಿಕವಾಗಿ ನೊಂದಿದ್ದಾಳಂತೆ. ಈ ಎಲ್ಲಾ ಕಾರಣಗಳಿಂದ ಆಕೆ ಭಾರತಕ್ಕೆ ಮರಳಿ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಈಗಾಗಲೇ ವಿಮಾನ ಟಿಕೆಟ್ ಸಹ ಬುಕ್ ಆಗಿದೆಯಂತೆ.

ಇನ್ನೂ ಆಕೆ ಮರಳಿ ಬರುತ್ತಿರುವ ಬಗ್ಗೆ ಅಂಜು ತಂದೆ ಸಹ ರಿಯಾಕ್ಟ್ ಆಗಿದ್ದಾರಂತೆ. ಆಕೆ ಭಾರತ ಬಿಟ್ಟು ಪಾಕಿಸ್ತಾನಕ್ಕೆ ಯಾವಾಗ ಹೋಗಿ ಮದುವೆಯಾದಳೋ ಅಂದೇ ನಮ್ಮ ಪಾಲಿಗೆ ಆಕೆ ಸತ್ತಿದ್ದಾಳೆ ಎಂದು ಆಕ್ರೋಷ ಹೊರಹಾಕಿದ್ದಾರಂತೆ. ಅದೇ ರೀತಿ ಅಂಜು ಮೊದಲ ಪತಿ ಸಹ ರಿಯಾಕ್ಟ್ ಆಗಿದ್ದು, ಜೈಪುರಕ್ಕೆ ಗೆಳೆಯನ ನೋಡಲು ಹೋಗುವುದಾಗಿ ಸುಳ್ಳು ಹೇಳಿ ಆಕೆ ಇಬ್ಬರು ಮಕ್ಕಳನ್ನು ಬಿಟ್ಟು ಹೋಗಿದ್ದಾಳೆ. ಇಲ್ಲಿಯವರೆಗೂ ಆಕೆ ಮಕ್ಕಳು ಹೇಗಿದ್ದಾರೆ ಎಂದು ಪೋನ್ ಸಹ ಮಾಡಿಲ್ಲ. ಇದೀಗ ಆಕೆಗೆ ಪಾಕಿಸ್ತಾನದ ನರಕ ಮನದಟ್ಟಾಗಿದೆ. ಆದ್ದರಿಂದಲೇ ಆಕೆ ವಾಪಸ್ಸು ಬರುತ್ತಿದ್ದಾಳೆ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

Most Popular

To Top